ಮಡಿಕೇರಿ, ಆ. ೧೫: ಉತ್ತರ ಕೊಡಗಿನ ಸೂರ್ಲಬ್ಬಿ ನಾಡಿನಲ್ಲಿ ತಾ. ೧೮ ಹಾಗೂ ೧೯ ರಂದು ವಾರ್ಷಿಕ ಕೈಲ್ ಮುಹೂರ್ತ ಹಬ್ಬ ಜರುಗಲಿದೆ. ಸೂರ್ಲಬ್ಬಿ ನಾಡಿನ ತಕ್ಕಮುಖ್ಯಸ್ಥರು ಹಾಗೂ ನಾಡಿನ ಎಲ್ಲ ಗ್ರಾಮಗಳ ಪ್ರಮುಖರು ಸೇರಿ ಕೈಲ್ ಮುಹೂರ್ತ ಆಚರಣೆ ಸಂಬAಧ ಮುಹೂರ್ತ ನಿಗದಿಪಡಿಸಿದರು. ದೈವಜ್ಞರ ಉಪಸ್ಥಿತಿಯಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಂಚಾAಗ ಯೋಗ ಫಲದಂತೆ ಹಬ್ಬ ಆಚರಣೆ ಬಗ್ಗೆ ಪರಂಪರಾಗತ ವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯದAತೆ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಸಂಪ್ರದಾಯ ಪ್ರಕಾರ ಸೂರ್ಲಬ್ಬಿ ನಾಡಿನಲ್ಲಿ ಕೈಲ್ ಮುಹೂರ್ತ ಹಬ್ಬವು ಮೊದಲು ಆಚರಣೆಯೊಂದಿಗೆ ಬಳಿಕ ಬೇರೆ ಬೇರೆ ನಾಡುಗಳಲ್ಲಿ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಡೆಗಳಲ್ಲಿ ಸೆಪ್ಟೆಂಬರ್ ೩ರಂದು ಈ ಹಬ್ಬ ಸಾರ್ವತ್ರಿಕವಾಗಿ ಜರುಗಲಿದೆ.