*ಗೋಣಿಕೊಪ್ಪ, ಆ. ೧೫: ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಡಾಡು ಜೋಸೆಫ್, ಪ್ರಧಾನ ಕಾರ್ಯದರ್ಶಿ ಯಾಗಿ ಅಣ್ಣಳಮಾಡ ಸನ್ನು ಕಾರ್ಯಪ್ಪ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಸಂಘದ ಅಧ್ಯಕ್ಷ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷರಾಗಿ ವಿನೋದ್, ಖಜಾಂಚಿಯಾಗಿ ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ನಾಗೇಶ್ ಆಯ್ಕೆಯಾದರು. ಮಹಾಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ಕುಲ್ಲಚಂಡ ಗಣಪತಿ, ಸದಸ್ಯರುಗಳಾದ ಟಿ.ಪಿ. ರಾಜ, ಇಲಿಯಾಸ್, ನಜೀರ್, ರವಿ, ಗಿಣಿ ಮತ್ತು ನಿಕಟಪೂರ್ವ ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಮಿಲನ್, ಸಂಘದ ಸಹ ಕಾರ್ಯದರ್ಶಿ ವಿಜಯ್ ಮತ್ತು ನಿರ್ದೇಶಕರುಗಳು ಸರ್ವ ಸದಸ್ಯರುಗಳು ಇದ್ದರು.