ಮಡಿಕೇರಿ, ಆ. ೧೫: ೨೦೨೫-೨೬ನೇ ಸಾಲಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಇಲಾಖಾ ವತಿಯಿಂದ ಈ ದಿನಾಂಕ ಮತ್ತು ಸ್ಥಳಗಳಲ್ಲಿ ಏರ್ಪಡಿಸಲಾಗಿದ್ದು. ಕ್ರೀಡಾಕೂಟಗಳಲ್ಲಿ ಜಿಲ್ಲೆಯ ಆಯಾಯ ತಾಲೂಕು ಕ್ರೀಡಾಪಟುಗಳು ಭಾಗವಹಿಸಬಹುದು.
ಮಡಿಕೇರಿ ತಾಲೂಕಿಗೆ ತಾ. ೧೮ ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಮಡಿಕೇರಿ, ಸಾಯಿ ಹಾಕಿ ಟರ್ಫ್, ಮಡಿಕೇರಿ. ಪೊನ್ನಂಪೇಟೆ ತಾಲೂಕಿಗೆ ತಾ. ೧೯ ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಹಾಗೂ ಪೊನ್ನಂಪೇಟೆ ಜೂನಿಯರ್ ಕಾಲೇಜು ಆಟದ ಮೈದಾನ. ವೀರಾಜಪೇಟೆ ತಾಲೂಕಿಗೆ ತಾ. ೨೦ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಹಾಗೂ ಪೊನ್ನಂಪೇಟೆ ಜೂನಿಯರ್ ಕಾಲೇಜು ಆಟದ ಮೈದಾನ. ಕುಶಾಲನಗರ ತಾಲೂಕಿಗೆ ತಾ. ೨೧ ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನ ಹಾಗೂ ಸೈನಿಕ ಶಾಲೆ, ಕೂಡಿಗೆ ಹಾಗೂ ಸೋಮವಾರಪೇಟೆ ತಾಲೂಕಿಗೆ ತಾ. ೨೨ ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನ ಹಾಗೂ ಸೈನಿಕ ಶಾಲೆ ಇಲ್ಲಿ ಕ್ರೀಡಾಕೂಟ ನಡೆಯಲಿದೆ.
ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ತಾ. ೩೦ ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಮತ್ತು ಕೂಡಿಗೆ ಕ್ರೀಡಾ ಶಾಲೆ ಹಾಗೂ ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆಯಲಿದೆ.
ಜಿಲ್ಲೆಯ ಆಸಕ್ತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕು ಮಟ್ಟದ ದಸರಾ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ದಸರಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸ ಬೇಕಾಗಿ ಕೋರುತ್ತಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ, ಮಡಿಕೇರಿ ತಾಲೂಕು - ಮಹಾಬಲ ೯೯೮೦೮೮೭೪೯೯, ಮನು: ೯೪೮೦೦೩೨೭೨೧, ಸೋಮ ವಾರಪೇಟೆ ಮತ್ತು ಕುಶಾಲನಗರ ತಾಲೂಕು ವೆಂಕಟೇಶ್: ೯೮೪೪೩೨೬೦೦೭ ಹಾಗೂ ಮಂಜುನಾಥ್: ೯೩೪೨೫೬೩೦೧೪, ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು; ಸುಬ್ಬಯ್ಯ: ೮೧೯೭೭೯೦೩೫೦ ಹಾಗೂ ಗಣಪತಿ: ೮೯೫೧೨೮೭೩೦೧ನ್ನು ಸಂಪರ್ಕಿ ಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ತಿಳಿಸಿದ್ದಾರೆ.