ಮಡಿಕೇರಿ, ಆ. ೧೧: ಸಿ ಅಂಡ್ ಡಿ ಜಾಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊ ಳ್ಳುತ್ತಿದ್ದು, ಕಾನೂನಾತ್ಮಕ ವಾಗಿಯೂ ಸಮಸ್ಯೆಗೆ ಅಂತ್ಯ ದೊರಕುವ ನಿರೀಕ್ಷೆಯಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ಸಿ ಅಂಡ್ ಡಿ ಜಾಗ ಸಮಸ್ಯೆ ಸಂಬAಧಿತ ರೈತ ಸಂಘಟನೆಗಳು ತಾ.೧೨ ರಂದು (ಇಂದು) ಸೋಮವಾರಪೇಟೆ ತಾಲೂಕು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶಾಸಕ ಡಾ. ಮಂತರ್ ಗೌಡ, ವಿಧಾನ ಸಭಾ ಕಲಾಪದ ಹಿನ್ನೆಲೆ ಯಲ್ಲಿ ತಾನು ಬೆಂಗಳೂರಿ ನಲ್ಲಿದ್ದು ಇಲ್ಲಿಯೂ ಸಂಬAಧಿತ ಇಲಾಖೆಗಳ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿರುವು ದಾಗಿ ತಿಳಿಸಿದ್ದಾರೆ.