ವೀರಾಜಪೇಟೆ, ಆ. ೧೧: ವೀರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಆರ್ಜಿ ಗ್ರಾಮದ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಹುಣಸೂರಿನ ಅನೀಸ್ ಅಹ್ಮದ್ (೪೫) ಚೇತನ್ (೪೦) ಎಂಬಿಬ್ಬರನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ. ಬಂಧಿತರಿAದ ಸ್ವಿಫ್ಟ್ ಕಾರು ೭.೮೭ ಕೆ.ಜಿ. ತೂಕದ ಗಾಂಜಾ (ಅಂದಾಜು ೨,೫೦,೦೦೦ ಮೌಲ್ಯ), ನಾಲ್ಕು ಗಾಂಜಾ ಪ್ಯಾಕೇಟ್‌ಗಳು, ಒಂದು ಮೊಬೈಲ್ ಫೋನ್, ಗಾಂಜಾ ತುಂಬಿದ ಪ್ಯಾಸ್ಟಿಕ್ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಎಸ್ಪಿ ರಾಮರಾಜನ್, ಹೆಚ್ಚುವರಿ ಎಸ್ಪಿ, ದಿನೇಶ್ ಕುಮಾರ್, ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್

(ಮೊದಲ ಪುಟದಿಂದ) ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ವೃತ್ತದ ಸಿಪಿಐ ಅನೂಪ್ ಮಾದಪ್ಪ, ಪಿ.ಎಸ್.ಐ ಪ್ರಮೋದ್ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮತ್ತೊAದು ಪ್ರಕರಣದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ತಾ. ೧೦ ರಂದು ಬಿಟ್ಟಂಗಾಲ ಗ್ರಾಮದ ಪೆಗ್ಗರೆಕಡು ಪೈಸಾರಿ ಜಂಕ್ಷನ್‌ನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕು ಅಂತರAಸAತೆ ದೊಡ್ಡಬೈರನಕುಟ್ಟೆ ಗ್ರಾಮದ ಜಿ. ಅಕ್ರಂ (೪೮) ಎಂಬಾತನನ್ನು ಬಂಧಿಸಿ ೪.೭೧೦ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.