೨ ತೆರಿಗೆ ಮಸೂದೆಗಳ ಅಂಗೀಕಾರ
ನವದೆಹಲಿ, ಆ. ೧೧ : ವಿರೋಧ ಪಕ್ಷದ ನಿರಂತರ ಪ್ರತಿಭಟನೆಯ ನಡುವೆಯೇ, ಲೋಕಸಭೆಯು ಸೋಮವಾರ ತೆರಿಗೆಗೆ ಸಂಬAಧಿಸಿದ ಎರಡು ಪ್ರಮುಖ ಶಾಸನಗಳನ್ನು ಅಂಗೀಕರಿಸಿದೆ. ಆದಾಯ ತೆರಿಗೆ (ಸಂಖ್ಯೆ ೨) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಈ ಮಸೂದೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿನದ ಮೊದಲು ಕೆಳಮನೆಯಲ್ಲಿ ಪರಿಚಯಿಸಿದ್ದರು. ದಾಯ ತೆರಿಗೆ (ಸಂಖ್ಯೆ ೨) ಮಸೂದೆ, ೨೦೨೫, ಆದಾಯ ತೆರಿಗೆ ಕಾಯ್ದೆ ೧೯೬೧ ಕ್ಕೆ ಸಂಬAಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಈ ಮಸೂದೆಯು ಆದಾಯ ತೆರಿಗೆ ಕಾಯ್ದೆ, ೧೯೬೧ ಅನ್ನು ಬದಲಾಯಿಸುತ್ತದೆ. ಈ ಮಸೂದೆಯು ಹಿರಿಯ ಬಿಜೆಪಿ ಸದಸ್ಯ ಬೈಜಯಂತ್ ಪಾಂಡಾ ನೇತೃತ್ವದ ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಒಳಗೊಂಡಿದೆ. ತರ ಶಾಸನ - ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ, ೨೦೨೫, ಆದಾಯ ತೆರಿಗೆ ಕಾಯ್ದೆ, ೧೯೬೧ ಮತ್ತು ಹಣಕಾಸು ಕಾಯ್ದೆ, ೨೦೨೫ ಅನ್ನು ತಿದ್ದುಪಡಿ ಮಾಡುತ್ತದೆ. ಇದು ಏಕೀಕೃತ ಪಿಂಚಣಿ ಯೋಜನೆಯ ಚಂದಾದಾರರಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.
ಕತ್ತರಿಸಿದ್ದ ದಂತವೈದ್ಯನ ಬಂಧನ
ತುಮಕೂರು, ಆ. ೧೧ : ತುಮಕೂರಿನ ಕೊರಟಗೆರೆಯಲ್ಲಿ ನಡೆದಿದ್ದ ಲಕ್ಷ್ಮೀದೇವಿ ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ದಂತವೈದ್ಯ ಡಾ. ರಾಮಚಂದ್ರಪ್ಪ ಎಸ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಕೊರಟಗೆರೆಯ ಕೊಳಾಲ ಗ್ರಾಮದ ರಸ್ತೆಯ ಉದ್ದಕ್ಕೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದ ಮಹಿಳೆಯ ಕತ್ತರಿಸಿದ ತಲೆ ಮತ್ತು ಭಾಗಶಃ ಕೊಳೆತ ದೇಹದ ತುಂಡುಗಳನ್ನು ತುಮಕೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಗಸ್ಟ್ ೭ ರಂದು, ಮಹಿಳೆಯ ದೇಹದ ಭಾಗಗಳನ್ನು ತುಂಬಿದ ಏಳು ಕವರ್‌ಗಳನ್ನು ರಸ್ತೆಯ ಉದ್ದಕ್ಕೂ ಇಡಲಾಗಿತ್ತು. ಇದನ್ನು ದಾರಿಹೋಕರು ತಮ್ಮ ಗಮನಕ್ಕೆ ತಂದಿದ್ದರು ಎಂದು ಕೊರಟಗೆರೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಂತರ, ಕೊರಟಗೆರೆ ಪೊಲೀಸರು ಅಪರಾಧ ಸ್ಥಳವನ್ನು ಶೋಧಿಸಿದಾಗ ಆಗಸ್ಟ್ ೮ ರಂದು ದೇಹದ ಭಾಗಗಳು ತುಂಬಿದ ಏಳು ಪ್ಲಾಸ್ಟಿಕ್ ಚೀಲಗಳು ಕಂಡುಬAದಿದ್ದವು.