ಚೆಟ್ಟಳ್ಳಿ, ಆ. ೧೧: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಾಕರ ಸಂಘ ರೂ. ೫೫ ಲಕ್ಷ ಲಾಭ ಗಳಿಸುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ ಎಂದು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ೧೯೭೬ರಲ್ಲಿ ಆರಂಭಗೊAಡ ಸಂಘ ಇಂದು ಜಿಲ್ಲೆಗೆ ಮಾದರಿ ಸಂಘವಾಗಿ ಬೆಳೆದಿದೆ. ಪ್ರಸ್ತುತ ೧೧೯೫ ಸದಸ್ಯರನ್ನು ಹೊಂದಿದ್ದು, ವಿಶ್ವಗುರು ನರೇಂದ್ರ ಮೋದಿ ಸಹಕಾರ ಭವನ, ಅನ್ನದಾತ ಸಭಾಂಗಣ, ಕುಡಿಯುವ ನೀರಿನ ಘಟಕ, ವ್ಯಾಪಾರ ಮಳಿಗೆ, ಪುಣ್ಯ ಕೋಟಿ ಅತಿಥಿ ಗೃಹ ನಿರ್ಮಿಸದಲ್ಲದೆ ಮುಖ್ಯಕಚೇರಿಯ ಮುಂಭಾಗದಲ್ಲಿ ಕಾವೇರಿ ಮಾತೆಯ ಪ್ರತಿಮೆ, ಪಶುಪತಿನಾಥ, ಗೋಮಾತೆ, ಶ್ರೀ ಕೃಷ್ಣ, ವೀರಾಂಜನೇಯ, ಗಣಪತಿ, ಮಹಾವಿಷ್ಣುಪಂಚಮುಖಿ ವಾಯುಪುತ್ರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಂಘದ ವ್ಯಾಪ್ತಿಯ ದೇವಾಲಯ, ಐನ್‌ಮನೆ, ಕೈಮಡ, ಸಮಾಜದ ಅಭಿವೃದ್ದಿಗೆ ದೇಣಿಗೆ ನೀಡುವ ಮೂಲಕ ಸಮಾಜ ಮುಖಿಕಾರ್ಯವನ್ನು ಮಾಡುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸವೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ತಾ. ೨೪ ರ ಭಾನುವಾರ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನಲ್ಲಿ ಮಹಾಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.