ಮಡಿಕೇರಿ, ಆ. ೧೧ : ನಗರದ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿರುವ ಹುತ್ತರಿ ಗದ್ದೆಯಲ್ಲಿ ನಾಟಿ ಕಾರ್ಯ ಏರ್ಪಡಿಸಲಾಗಿತ್ತು. ಇದರಲ್ಲಿ ಕೊಡಗು ಜಾನಪದ ಪರಿಷತ್, ಕೊಡವ ಸಮಾಜ, ಕೊಡಗು ಗೌಡ ವಿದ್ಯಾಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ನಾಟಿ ಮಾಡಿದರು. ದೇವಾಲಯದ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಮಾತನಾಡಿದ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತ ಶಯನ, ಒಂದು ಕಾಳು ಅಕ್ಕಿಗೆ ವಜ್ರ ವೈಡೂರ್ಯಗಳಿಗಿಂತಲೂ ಹೆಚ್ಚಿನ ಮೌಲ್ಯವಿದ್ದು, ಎಲ್ಲರ ಮನೆಗೂ ಧಾನ್ಯಲಕ್ಷಿö್ಮ ಸೇರುವಂತಾಗಲಿ. ಇಡೀ ಸಮಾಜದಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸಿದರು. ಈ ಸಂದರ್ಭ ಜಾನಪದ ಪರಿಷತ್‌ನ ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಸದಸ್ಯರಾದ ಕವಿತಾ ರಾಮ್, ರೇವತಿ ರಮೇಶ್, ಕೊಡವ ಸಮಾಜದ ಅಧ್ಯಕ್ಷರಾದ ಎಂ.ಪಿ. ಮುತ್ತಪ್ಪ, ಉಪಾಧ್ಯಕ್ಷ ವಿಜು ದೇವಯ್ಯ, ಜಂಟಿ ಕಾರ್ಯದರ್ಶಿ ದಿನೇಶ್, ನಿರ್ದೇಶಕರುಗಳಾದ ಸದಾ ಮುದ್ದಪ್ಪ, ಅಪ್ಪಣ್ಣ, ಜಯರಾಂ, ಒಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರಾದ ಪ್ರಕಾಶ್ ಆಚಾರ್ಯ, ಅಂಬೆಕಲ್ ಕುಶಾಲಪ್ಪ, ಕವಿತಾ ಬೊಳ್ಳಮ್ಮ, ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಕುಶಾಲಪ್ಪ, ಎಸ್.ಪಿ. ವಾಸುದೇವ, ಮತ್ತಿತರರು ಪಾಲ್ಗೊಂಡಿದ್ದರು. ಚುಮ್ಮಿ ದೇವಯ್ಯ ಸ್ವಾಗತಿಸಿ, ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ವಂದಿಸಿದರು.