ವೀರಾಜಪೇಟೆ, ಆ. ೧೧: ವೀರಾಜಪೇಟೆ ಅಂಬಟ್ಟಿ ಗ್ರಾಮದಲ್ಲಿ ನೂತನವಾಗಿ ಶ್ರೀ ವಿಜಯ ವಿಘ್ನೇಶ್ವರ ಸೇವಾ ಸಮಿತಿ ರಚನೆಗೊಂಡಿತು.

ಅಧ್ಯಕ್ಷರಾಗಿ ಎನ್.ಸಿ. ವಿಜಯ ಕುಮಾರ್, ಉಪಾಧ್ಯಕ್ಷರಾಗಿ ಆಟ್ರಂಗಡ ವಿಶ್ವನಾಥ್, ಕಾರ್ಯದರ್ಶಿಯಾಗಿ ಪ್ರಮೋದ್, ಸಹ ಕಾರ್ಯದರ್ಶಿಯಾಗಿ ಹೇಮಾ, ಕೋಶಾಧಿಕಾರಿ ಚೇಂದAಡ ಗಣೇಶ್, ನಿರ್ದೇಶಕರುಗಳಾಗಿ ಜೀವನ್ ನಾಣಯ್ಯ, ರಾಧಕೃಷ್ಣ, ಮಂಜುನಾಥ್, ಸುರೇಶ್, ವಿಜಯ, ಮನು ಮಂದಣ್ಣ, ಚೇಂದAಡ ಸುರೇಶ್, ಸೋಮಯ್ಯ ಆಯ್ಕೆಗೊಂಡರು. ಪ್ರಥಮ ವರ್ಷದ ಉತ್ಸವದ ಅಂಗವಾಗಿ ತಾ. ೨೭ ರಂದು ಉತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರು ದಿನಗಳು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ತಾ. ೨೯ ರಂದು ಉತ್ಸವ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ನೂತನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.