ಆಗಸ್ಟ್ ೨೦೨೫ ರ ಸ್ವಾತಂತ್ರ‍್ಯೋತ್ಸವದ ಹೊಸ್ತಿಲಲ್ಲಿ ನವ ಭಾರತದ ಭವಿಷ್ಯತ್‌ನ ಭಾರತೀಯರ ಸಾಮಾಜಿಕ ಬದುಕಿನ ಪರಿಪಾಟಲುಗಳು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯ ಭಾರತವೂ.
ನಮಗಾಗಿ ಮಡಿದ ನಮಗಾಗಿ ಎಲ್ಲವನ್ನು ಕಳೆದುಕೊಂಡು ಪರಿತ್ಯಕ್ತರಾದ ಸ್ವಾತಂತ್ರ‍್ಯ ಹೋರಾಟಗಾರರ ಆಶಯ ಹಾಗೂ ಹಂಬಲಗಳಿಗೆ ಪೂರಕವಾದ ಸ್ವಾತಂತ್ರ‍್ಯೋತ್ತರ ಭಾರತವನ್ನು ಕಟ್ಟಲು ಸಾಧ್ಯವಾಗಲಿಲ್ಲವಲ್ಲಾ ಎಂಬ ಕೊರಗು ನಮ್ಮಲ್ಲಿ ಇನ್ನೂ ಕಾಡುತ್ತಿರುವುದು ಏಕೆ?
ಆಳ್ವಿಕೆ ಅಥವಾ ಆಡಳಿತ ಅಂದರೆ, ನಿರ್ದಿಷ್ಟ ಕಾಲಾವಧಿಯ ಅಧಿಕಾರ ನಿರ್ವಹಣೆ ಮಾತ್ರವಲ್ಲ, ಆಡಳಿತ ನಿರ್ವಹಣೆಯಲ್ಲಿ ಸಾಮಾಜಿಕ ಸ್ವಾಸ್ಥö್ಯ, ಸಾಂಸ್ಕೃತಿಕ ಸೌಹಾರ್ದತೆ, ಆರ್ಥಿಕ ಸಮತೋಲನ, ಸಾರ್ವಜನಿಕ ಸಮನ್ವಯತೆ ಇತ್ಯಾದಿಗಳನ್ನು ಕಾಪಾಡುವ ಮನೋಭಾವ ಬಹಳ ಮುಖ್ಯ.
ಅದರ ಕೊರತೆ ಕಾಡಿದರೆ ತಳಮಟ್ಟದ ಸಾಮಾಜಿಕ ನೆಲೆಗಳು ಛಿದ್ರವಾಗುತ್ತಾ ಭವಿಷ್ಯತ್ತಿನ ಭಾರತ ಅತಂತ್ರಕ್ಕೆ ಹಾಗೂ ಆತಂಕಕ್ಕೆ ಸಿಲುಕುತ್ತದೆ.
ಇದನ್ನೆಲ್ಲಾ ಸಾಕಾರಗೊಳಿಸಬೇಕಾದ ನಾವು ಆಯ್ಕೆ ಮಾಡುವ ರಾಜಕೀಯ ಪ್ರತಿನಿಧಿಗಳಲ್ಲಿ ಬೇಕಾದ ವಿವೇಕ, ವಿವೇಚನೆ, ವ್ಯವಧಾನ, ಸಮಷ್ಠಿ ಜ್ಞಾನ ಹಾಗೂ ದೂರದರ್ಶಿತ್ವದ ಆಲೋಚನೆಗಳ ಕೊರತೆ ತೀವ್ರತೆರನಾಗಿ ಕಾಣಿಸದೇ ಹೋದರೆ ಅಂಬೇಡ್ಕರ್ ಬೋಧಿಸಿದ ಸಾಂವಿಧಾನಿಕ ಮೌಲ್ಯಗಳು ಹಾಗೂ ಗಾಂಧಿ ಮಾರ್ಗದರ್ಶನ, ಅವರು ಮಾಡಿದ ಸತ್ಯಾನ್ವೇಷಣೆಯ ಮಂಥನದಲ್ಲಿ ಮೂಡಿ ಬಂದ ನೈತಿಕತೆಯ ಜೀವನ ಮೌಲ್ಯಗಳು ನಮ್ಮ ಶಾಸನ ಸಭೆಯಲ್ಲಿ ದೇಶದ ಭವಿಷ್ಯ ರೂಪಿಸುವ ಜನಪ್ರತಿನಿಧಿಗಳಲ್ಲಿ ಕಾಣದೇ ಹೋದರೆ ವರ್ತಮಾನದ ಭಾರತ ಮೌಲ್ಯ ಕಳೆದುಕೊಳ್ಳುತ್ತದೆ.
ಆemoಛಿಡಿಚಿಣiಛಿ sಥಿsಣem mಚಿಥಿ ಟಿoಣ be ಣhe besಣ, buಣ iಣ is beಣಣeಡಿ ಣhಚಿಟಿ ಣhe ಡಿesಣ.
ಪ್ರಜಾಪ್ರಭುತ್ವ ವ್ಯವಸ್ಥೆ ಇತರೇ ವ್ಯವಸ್ಥೆಗಳಿಗಿಂತಲೂ ಅತ್ಯುತ್ತಮವಲ್ಲದಿದ್ದರೂ ಉಳಿದವುಗಳಿಗಿಂತ ಉತ್ತಮವಾದ ವ್ಯವಸ್ಥೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸೃಷ್ಟಿಯಾದ ವ್ಯವಸ್ಥೆ.
ಆದರೆ ಇಂದು ಪ್ರಜಾಪ್ರಭುತ್ವ ಜನರಿಂದ ಮಾತ್ರ ಆಗಿದೆ. ಜನರಿಗಾಗಿ ಹಾಗೂ ಜನರಿಗೋಸ್ಕರನ್ನುವುದು ಜನಪ್ರತಿನಿಧಿಗಳ ಮರ್ಜಿಗೆ ಒಳಪಟ್ಟಿದೆ.
ಃಥಿ ಣhe ಠಿeoಠಿಟe, ಜಿoಡಿ ಣhe ಠಿeoಠಿಟe ಚಿಟಿಜ oಜಿ ಣhe ಠಿeoಠಿಟe ಇಂದು ಅಕ್ಷರಶಃ buಥಿ ಣhe ಠಿeoಠಿಟe, ಜಿಚಿಡಿ ಣhe ಠಿeoಠಿಟe ಚಿಟಿಜ oಜಿಜಿ ಣhe ಠಿeoಠಿಟe ಆಗಿದೆ.
ಮತದಾರರನ್ನು ಅಂದರೆ ಜನರನ್ನು ಖರೀದಿಸಿದ ಮೇಲೆ, ಖರೀದಿಸಿದ ಪ್ರತಿನಿಧಿ ಜನಸೇವಕನಾಗದೆ ಸಹಜವಾಗಿ ಮಾಲೀಕನಾಗಿದ್ದಾನೆ.
ಭಾರತೀಯರಿಗೆ ಅಂತಃಶಕ್ತಿ ಇರಲಿಲ್ಲವೇ....?
ನೈತಿಕತೆ ಹಾಗೂ ಸಂಸ್ಕಾರ ಭಾರತೀಯರಿಗೆ ಹೊಸತೇ...? ಸೂರ್ಯಮುಳುಗದ ನಾಡಾಗಿದ್ದ ಅನೇಕ ಯುದ್ದಗಳನ್ನು ಗೆದ್ದು ಅದ್ವಿತೀಯರಾಗಿದ್ದ ಬ್ರಿಟಿಷರನ್ನು ಸಶಸ್ತçಗಳಿಂದ ಮಣಿಸಲಾಗದ್ದನ್ನು ಅಸಹಕಾರ, ಸ್ವದೇಶಿ ಚಳುವಳಿಗಳು, ಸತ್ಯಾಗ್ರಹದ ಶಾಂತಿ, ಅಹಿಂಸೆ ಮೂಲಕ ಭಾರತವನ್ನು, ಸಮಸ್ತ ಭಾರತೀಯರನ್ನು ಏಕವ್ಯಕ್ತಿಯತೆ ಒಗ್ಗೂಡಿಸಿ ಮುನ್ನಡೆಸಿದ ಜಗತ್ತಿಗೆ ಸತ್ಯಾಗ್ರಹದ ಹೊಸ ಅಸ್ತçಗಳನ್ನು ಪರಿಚಯಿಸಿದ ಈ ಕಾಲಘಟ್ಟದಲ್ಲಿ ಅನೇಕ ಸ್ನೇಹಿತರು, ಗಾಂಧಿ ಚಳುವಳಿಯನ್ನು ಗೇಲಿ ಮಾಡುವುದನ್ನು ಕಾಣುತ್ತೇವೆ.
ಚರಕದಿಂದ ಸ್ವಾತಂತ್ರö್ಯ ಬರಲಿಲ್ಲ; ನೂಲು ಬಂತು ಎಂದು ಹಿಯಾಳಿಸುವುದನ್ನು ಕೇಳುತ್ತಿದ್ದೇವೆ. ನೂಲು ಉತ್ಪಾದನೆ ಹಾಗೂ ಸ್ವದೇಶಿ ಚಳುವಳಿ ಮೂಲಕ ಗಾಂಧಿ ಖಾದಿ ಬಟ್ಟೆ ಉತ್ಪಾದನೆಗೆ ತೊಡಗಿ ಅಂದು ಬ್ರಿಟಿಷರ ಬೃಹತ್ ಆರ್ಥಿಕ ಮೂಲವಾದ ಮ್ಯಾಂಚೆಸ್ಟರ್‌ನ ಜವಳಿ ಉದ್ಯಮಕ್ಕೆ ಪೆಟ್ಟುಕೊಟ್ಟರು.
ಬ್ರಿಟಿಷರ ಜವಳಿ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯಾದ ಭಾರತ ಗಾಂಧಿಯವರ ಸ್ವದೇಶು ಚಳವಳಿಯಿಂದ ಬ್ರಿಟಿಷ್ ಜವಳಿ ಉದ್ಯಮಿದಾರರು ನಿರುದ್ಯೋಗಿಗಳಾದರು.
ಎರಡನೇ ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿಯವರು ಹೋದಾಗ ಮ್ಯಾಂಚೆಸ್ಟರ್‌ನ ನಿರುದ್ಯೋಗಿ ಜವಳಿ ಕಾರ್ಮಿಕರು ಮುತ್ತಿಗೆ ಹಾಕಿದ್ದರು ಎಂಬುದನ್ನು ಗಮನಿಸಬೇಕಿದೆ.
ಮಹಾತ್ಮ ಗಾಂಧಿ ಹಿಂದೆ ಸಮಸ್ತ ಭಾರತೀಯರು ಸ್ವಾತಂತ್ರö್ಯದ ಉಸಿರಾಡಲು ತವಕಿಸಿದರು. ಆ ಸಂಗ್ರಾಮದಲ್ಲಿ ಅನೇಕ ಭಾರತೀಯರು ಜೀವಿತಾವಧಿಯವರೆಗೆ ಜೈಲು ಪಾಲಾದರು. ಬ್ರಿಟೀಷರ ಗುಂಡಿನೇಟಿಗೆ ಅನೇಕ ಭಾರತೀಯರು ತಮ್ಮ ಗುಂಡಿಗೆಯನ್ನು ಒಡ್ಡಿದರು.
ಅಲ್ಲದೆ ಬ್ರಿಟಿಷರ ನೇಣಿನ ಉರುಳಿಗೆ ನಗುನಗುತ್ತಲೇ ವೀರ ಭಾರತೀಯರು ತಮ್ಮ ಕೊರಳನ್ನು ಒಡ್ಡಿದರು.
ಅಂತಹ ತ್ಯಾಗ, ಬಲಿದಾನಗಳ ಭಾರತವನ್ನು ಇಂತಹದ್ದೊAದು ಸ್ಥಿತ್ಯಂತರಕ್ಕೆ ತಂದುಕೊAಡವರು ನಾವು ಭಾರತೀಯರೇ.
ನಮ್ಮಿಂದ ಆಯ್ಕೆಯಾದವರೇ ಅಲ್ಲವೇ..?
ನಾವೇ ಚುನಾಯಿಸಿ ಮತ ಚಲಾಯಿಸಿದವರಲ್ಲವೇ...?
ಬಹಳಷ್ಟು ಮಂದಿ ರಾಜಕಾರಣ ಎಂದರೆ ಮೂಗು ಮುರಿಯುವವರೇ ಹೆಚ್ಚು.
ರಾಜಕಾರಣಿ ಎಂದರೆ ಸಾರಾಸಗಟಾಗಿ ನಕಾರಾತ್ಮವಾಗಿ ಬಿಂಬಿಸಿ ಹೀಗಳೆಯುವ ಪ್ರವೃತ್ತಿ ಒಂದು ಗೀಳಾಗಿ ಪರಿವರ್ತನೆಯಾಗಿದೆ.
ಎಲ್ಲರೂ ಭ್ರಷ್ಟರು ಹಾಗೂ ದುಷ್ಟರು ಎಂದು ಮೂದಲಿಸಿ ತನ್ನನ್ನು ತಾನು ಪ್ರಜ್ಞಾವಂತನೆAದು ಭ್ರಮಿಸಿ ಟೀಕಿಸುವ ಮಂದಿಗೆ ರಾಜಕಾರಣವೆಂದರೆ ಅಲಕ್ಷö್ಯ, ಉಪೇಕ್ಷೆ.
ಅಂತಹ ಮಡಿವಂತರೇ ರಾಜಕಾರಣದ ಇಂತಹ ನೈತಿಕ ಅಧಃಪತನಕ್ಕೆ ತಮ್ಮ ಕೊಡುಗೆಯನ್ನು ಡಾಳಾಗಿ ಕರುಣಿಸಿದ್ದಾರೆ.
ರಾಜಕಾರಣ ನಮ್ಮ ನಿತ್ಯಜೀವನದ ಸಾಮಾಜಿಕ, ಆರ್ಥಿಕ, ಕೈಗಾರಿಕಾ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ನೀತಿ ನಿರೂಪಣೆ ಮಾಡುವ ಅಧಿಕಾರದ ಕೇಂದ್ರ ಸ್ಥಾನ. ಅಂದರೆ ನಮ್ಮ ಬದುಕನ್ನು ಪ್ರಭಾವಿಸುವವರು ರಾಜಕಾರಣಿಗಳು.
ನಮ್ಮ ಬದುಕನ್ನು ಹಸನಾಗಿಸುವ ಸ್ವಚ್ಛ ಪ್ರಾಮಾಣಿಕ, ನೀತಿವಂತ ಮಾನವೀಯ ಮೌಲ್ಯಗಳಿಂದ ಕೂಡಿದ ಜನರ ನಡುವೆ ಸಂತೈಸುವ ನಮ್ಮ ಪ್ರತಿನಿಧಿ ಇದ್ದಾರೆ ಎಂಬ ಭದ್ರತೆಯ ಆಸರೆಯ ಸುರಕ್ಷತೆಯ ಭಾವ ಮೂಡಿಸುವ ಭ್ರಷ್ಟಾಚಾರ, ದೊಡ್ಡತನವಿಲ್ಲದ, ಸಂಭಾವಿತ, ಮುಖ್ಯವಾಗಿ ಪ್ರಾಮಾಣಿಕನನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಸುಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗಿದೆ?
ಚುನಾಯಿತನಾಗಿ ಭ್ರಷ್ಟನಾದರೆ, ದುಷ್ಟನಾದರೆ ಅಂತಹವನನ್ನು ಐದು ವರ್ಷಗಳಿಗೊಮ್ಮೆ ಬದಲಾಯಿಸುವ ಸ್ವಾತಂತ್ರö್ಯ, ಅಧಿಕಾರ ಹಾಗೂ ಅವಕಾಶ ನಮಗೆ ಇದೆ ಅಲ್ಲವೇ.
ಮತದಾನದಿಂದ ದೂರ ಉಳಿಯುವ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತನ್ನ ಅಂತಸ್ತಿಗೆ ಧಕ್ಕೆ - ಅವಮಾನವೆಂದು ಭಾವಿಸುವ ಮತದಾನದ ದಿನ ರಜೆ ದೊರೆಯುವ ಸಂಭ್ರಮದಲ್ಲಿ ಪ್ರವಾಸಕ್ಕೆ ತೆರಳುವ ಬೇಜವಾಬ್ದಾರಿ ನಾಗರಿಕರೆ ಅಲ್ಲವೇ?
ಇಂತಹ ಭ್ರಷ್ಟ ಅನೈತಿಕ ರಾಜಕಾರಣದ ಉಗಮಕ್ಕೆ ಹೊಣೆಗಾರರು ಇಂತಹವರೇ ಅಲ್ಲವೇ?
ರಾಜಕಾರಣದ ಬಗ್ಗೆ ಅಗಾಧವಾದ ಸಂಶೋಧನೆ ಮಾಡಿದವರಿಗೆ ಗೊಣಗಾಡುವುದು ಇದೇ ಅಲ್ಲವೇ ವ್ಯವಸ್ಥೆಯ ವ್ಯಂಗ್ಯ?
ಇನ್ನು ಮತದಾನ ಮಾಡುವ ಬಹಳ ಮಂದಿ ಇಂದು ಐಪಿಎಲ್ ಆಟಗಾರನಂತೆ ಅವ್ಯಾಹತವಾಗಿ ಬಿಕರಿಯಾಗುತ್ತಿದ್ದಾರೆ.
ಯಥಾ ರಾಜ - ತಥಾ ಪ್ರಜೆ ಎಂಬ ಪರಿಭಾಷೆ ಇಂದು "ಯಥಾ ಪ್ರಜಾ ತಥಾ ರಾಜ" ಎಂದು ಬದಲಾಗಿದೆ.
ಅಂದು ಹೋರಾಟಗಾರರು ತಮ್ಮ ಸಾವು ನಿಶ್ಚಿತವೆಂದೇ ಸಂಗ್ರಾಮಕ್ಕೆ ಅಣಿಯಾದರು.
ತಮ್ಮ ಹೆಂಡತಿ ವಿಧವೆಯಾಗುವಳು. ಆಸ್ತಿ ಮುಟ್ಟುಗೋಲಾಗುವುದು. ಮಕ್ಕಳು ಅನಾಥರಾಗುವರು ಎಂಬ ಅರಿವಿದ್ದೂ ಕೂಡ ಮುಂದಿನ ಪೀಳಿಗೆಯ ಸಮಷ್ಟಿ ಹಿತಕ್ಕಾಗಿ ಪ್ರಜ್ಞಾಪೂರ್ವಕವಾಗಿ ಸ್ವಾತಂತ್ರö್ಯ ಚಳುವಳಿಯಲ್ಲಿ ತೊಡಗಿಸಿಕೊಂಡರು.
ಅವರ ತ್ಯಾಗ ಬಲಿದಾನಗಳ ಫಲಾನುಭವಿಗಳಾದ ನಮ್ಮ ಕೃತಜ್ಞತೆ ಯಾದರೂ ಹೇಗೆ ಸಲ್ಲಿಸುತ್ತಿದ್ದೇವೆ. ಅದರ ಫಲವಾಗಿ ಮೂಡಿಬಂದ ಭಾರತೀಯರ ಆಳ್ವಿಕೆ ಸಂತೃಪ್ತಿ ತಂದಿದೆಯಾ? ಅವರ ಆದರ್ಶ, ಮೌಲ್ಯಗಳ ಪರಿಪಾಲನೆ ಇಂದು ಆಗುತ್ತಿದೆಯಾ ಎಂಬ ನಿರೀಕ್ಷೆ ನಿರಾಸೆಯತ್ತ ಕೊಂಡೊಯ್ದಿದೆ.
ಹೌದು. ೧೯೪೭ರ ಮುಂಚಿನ ಸಾರ್ವಜನಿಕ ಕ್ಷೇತ್ರ ಎಂದರೆ ಅದು ಬಲಿದಾನವಾಗಿತ್ತು. ೧೯೫೦ ಹಾಗೂ ೬೦ ರ ನಡುವಿನ ಸಾರ್ವಜನಿಕ ಅಥವಾ ರಾಜಕಾರಣ ಕ್ಷೇತ್ರವೆಂದರೆ ತಮ್ಮವರನ್ನು, ತಮ್ಮ ಕುಟುಂಬವನ್ನು ಮರೆತು ಸಾರ್ವಜನಿಕರಿಗೆ ಒಳಿತು ಬಯಸುವ ತ್ಯಾಗವಾಗಿತ್ತು. ೧೯೬೦ - ೭೦ ರ ರಾಜಕಾರಣ ಅದೊಂದು ಸೇವೆ ಎನಿಸಿಕೊಂಡಿತು.
ಒAದಷ್ಟು ಮೌಲ್ಯಯುತ ರಾಜಕಾರಣಿಗಳನ್ನು ಕಳಂಕ ರಹಿತ ವ್ಯಕ್ತಿತ್ವದ ನಾಯಕರನ್ನು ಕಂಡಿತ್ತು.
೧೯೭೦ ರ ನಂತರದ ರಾಜಕಾರಣ ವ್ಯಾಪಾರ, ೧೯೯೦ರ ನಂತರ ಉದ್ಯಮ, ಇತ್ತೀಚಿಗೆ ಅದು ಫಲವತ್ತಾದ ಹಣಗಳಿಕೆಯ ಮೂಲವಾಗಿದೆ. ಬಂಡವಾಳ ತೊಡಗಿಸಿ ನಾಲ್ಕೆöÊದು ತಲೆಮಾರುಗಳಿಗೆ ಕೂಡಿಡುವ ಕರಗದ ಚಿನ್ನದ ನಿಕ್ಷೇಪ. ಅಥವಾ ಅಕ್ಷಯ ಪಾತ್ರೆ ಆಗಿದೆ.
ಅಂದು ಸ್ವಾತಂತ್ರ ಚಳುವಳಿಗಾರರು ತಮ್ಮ ಆಸ್ತಿ, ಮಕ್ಕಳು, ಹೆಂಡತಿ ಇತ್ಯಾದಿ ಸರ್ವಸ್ವವನ್ನು ತ್ಯಾಗ ಮಾಡಿ ಮುಂದಿನ ಪೀಳಿಗೆಯ ಸುಖಕ್ಕಾಗಿ ಪರಿತಪಿಸಿದರೆ ಇಂದಿನ ರಾಜಕಾರಣಿ ತಮ್ಮ ಹೆಂಡತಿ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ನಾಲ್ಕಾರು ತಲೆಮಾರುಗಳ ಮುಂದಿನ ಪೀಳಿಗೆಗಾಗಿ ರಾಜಕಾರಣವನ್ನು ಸಂಪತ್ತಿನ ಮೂಲವಾಗಿಸಿಕೊಂಡಿದ್ದಾರೆ.
ಎAತಹ ಅದ್ಭುತ ಪರಿವರ್ತನೆಯ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ!
ಎAತಹ ದಿವ್ಯವಾದ ಪರಂಪರೆಯ ಭಾರತ ಯಾವ ಕವಲುದಾರಿಯಲ್ಲಿ ಬಂದು ನಿಂತಿದೆ. ವಿಪರ್ಯಾಸ ಅಲ್ಲವೇ?
ಮತದಾರರು ಹಣ ನೀಡಿದವನಿಗೆ ಮತ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾನೆ, ಓರ್ವ ಸ್ಪರ್ಧಿ ಹಣ ಹರಡಿದರೆ ಮತ್ತೋರ್ವ ಅನಿವಾರ್ಯವಾಗಿ ಹಣ ಹಂಚುವ ಕಾರ್ಯಕ್ಕೆ ದುಮುಕಲೇ ಬೇಕಿದೆ.
ಇಬ್ಬರಿಂದಲೂ ಅಥವಾ ಮೂರ್ನಾಲ್ಕು ಮಂದಿಯಿAದ ಹಣ ಪಡೆದ ಮತದಾರ, ತನ್ನ ಕುಟುಂಬದಲ್ಲಿ ಲಭ್ಯವಿರುವ ಮೂರು ನಾಲ್ಕು ಮತಗಳನ್ನು ನ್ಯಾಯ ಹಾಗೂ ನಿಷ್ಪಕ್ಷಪಾತವಾಗಿ ಒಂದೊAದು ಅಭ್ಯರ್ಥಿಗಳಿಗೆ ಹಂಚಿಕೊಳ್ಳುವ ಪಾಲು ಪಾರಿಖತ್ತು ಮಾಡಿಕೊಳ್ಳುತ್ತಾರೆ.
ಓರ್ವ ಪ್ರಾಮಾಣಿಕ, ಜನಪರ, ಸಮಾಜಮುಖಿ ರಾಜಕಾರಣಿ ಹಣವಿಲ್ಲದೆ ಚುನಾವಣೆಗೆ ಸ್ಪರ್ಧಿಸಿದರೆ ಇಂದು ನಗೆಪಾಟಲಿಗೆ ಒಳಗಾಗುತ್ತಾನೆ. ಸಾರ್ವತ್ರಿಕವಾಗಿ ಹಾಸ್ಯಾಸ್ಪದ ಸರಕಾಗುತ್ತಾನೆ.
‘ಹಣ ಇಲ್ಲದಿದ್ದರೆ ಯಾಕೋ ಕಂದ ಮತ ಕೇಳಲು ಬಂದೆ’ ಎಂದು ಹಿಯಾಳಿಸುವ ಹಂತಕ್ಕೆ ನಮ್ಮ ರಾಜಕಾರಣ ಹಾಗೂ ಪ್ರಜಾಪ್ರಭುತ್ವ ಬಂದು ನಿಂತಿದೆ.
ಇನ್ನೂ ಹಲವೆಡೆ ಮತದಾರರು ತಮ್ಮ ಅಂತಸ್ತಿಗೆ ತಕ್ಕಂತೆ ವಿದೇಶಿ ಬ್ರಾಂಡಿನ ಮದ್ಯದ ಬಾಟಲು ಸೇರಿದಂತೆ ಇನ್ನಿತರ ಪದಾರ್ಥಗಳಿಗೂ ಬೇಡಿಕೆಯನ್ನು ಸಲ್ಲಿಸುವ ನಿರ್ಲಜ್ಜೆಯ ನಡವಳಿಕೆಯನ್ನು ಕಾಣಬಹುದಾಗಿದೆ.
ಚುನಾವಣಾ ಹಿಂದಿನ ರಾತ್ರಿ ಮನೆಯ ಹೆಬ್ಬಾಗಿಲು ತೆರೆದು ಕಾಯ್ದು ಕುಳಿತುಕೊಳ್ಳುವ ಸಾಮಾನ್ಯ ದೃಶ್ಯಗಳು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ಮೊದಲು ಹಣ ತಂದು ಮನೆ ಬಾಗಿಲಿಗೆ ಬಂದರೆ ಅವಮಾನವೆಂದು ಭಾವಿಸುತ್ತಿದ್ದ ಮನಸ್ಸುಗಳು ಇಂದು ಮಲೀನವಾಗಿವೆ.
ಹಣ ಪಡೆಯುವುದೇ ಗೌರವದ ಸಂಗತಿಯೆAಬ ಭಂಡತನ ನಲಿಯುತ್ತಿದೆ. ಇಂತಹ ಸೂಕ್ಷö್ಮ ಸಂವೇದನೆಗಳಿAದ ವಿಮುಖವಾಗಿರುವ ಮತದಾರರೇ .... ರಾಜಕಾರಣದ ಕಲುಷಿತ ಮಾಲಿನ್ಯದಿಂದ ಕೂಡಿದ ಭ್ರಷ್ಟ ರಾಜಕಾರಣದ ನೈತಿಕ ಕುಸಿತಕ್ಕೆ ಕಾರಣರಾಗಿ ಪ್ರಜೆಗಳೇ ಸತ್ತಂತೆ ಇರುವ ಪ್ರಜಾಸತ್ತೆ ಆಗಿ ಪರಿವರ್ತನೆ ಆಗಿದೆ. ಇಂತಹ ಅವಾಂತರಗಳಿAದಲೇ ಹಣ ಹೆಂಡ ನೀಡಿ ಚುನಾವಣೆ ಗೆಲ್ಲಬಲ್ಲಂತಹ ಚುನಾವಣಾ ಅಭ್ಯರ್ಥಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲು ಕಸರತ್ತು ನಡೆಸುತ್ತವೆ.
ಪಕ್ಷಗಳ ಹೈಕಮಾಂಡ್‌ನ ಮೊದಲನೇ ಪ್ರಶ್ನೆಯೇ ಟಿಕೇಟ್ ಆಕಾಂಕ್ಷಿಗಳಿಗೆ ‘ನೀನು ಎಷ್ಟು ಕೋಟಿ ಹಣ ಖರ್ಚು ಮಾಡಬಲ್ಲೆ’ ಎಂಬುದಾಗಿರುತ್ತದೆ.
ಹಾಗಾಗಿ ರಾಜಕಾರಣಕ್ಕೆ ಪ್ರಾಮಾಣಿಕರು ಬರಲಾಗದಂತಹ ವ್ಯವಸ್ಥೆ ಇಂದು ಸೃಷ್ಟಿಯಾಗಿದೆ. ಅದು ಕೇವಲ ಸಂಸತ್, ವಿಧಾನಸಭೆ, ಪರಿಷತ್ತು ಮಾತ್ರವಲ್ಲದೇ ಸ್ಥಳೀಯ ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳಿಗೂ ಬಂದು ತಲುಪಿದೆ.
ಇಂತಹ ಮತ ವಿಕ್ರಯ ಅಥವಾ ಮಾರಾಟ ಚುನಾವಣೆಗಳನ್ನು ಅಣಕ ಮಾಡುವಂತಿದೆ.
ಈ ರೀತಿ ಚುನಾಯಿತರಾದ ಪ್ರತಿನಿಧಿ ತಾನು ಹೂಡಿದ ಬಂಡವಾಳಕ್ಕೆ ಲಾಭ ಗಳಿಸಲೇ ಬೇಕಾಗಿದೆ.
ಮುಂದಿನ ಚುನಾವಣೆಗೆ ಮತ್ತಷ್ಟು ಸಂಪಾದಿಸಿ ಬಂಡವಾಳ ತೊಡಗಿಸಿಕೊಳ್ಳಬೇಕಿದೆ.
ಹಣ ನೀಡಿದರೆ ಚುನಾವಣೆ ಗೆಲ್ಲಬಹುದೆಂಬ ಖಾತ್ರಿ ಆದರೆ ರಾಜಕಾರಣಿಯ ಮೊದಲ ಆದ್ಯತೆಯೇ ಸಹಜವಾಗಿ ಹಣಗಳಿಕೆಯಾಗಿರುತ್ತದೆ.
ಸಾರ್ವಜನಿಕ ಸ್ಪಂದನೆಯ ಕೊರತೆ, ಸಂವೇದನಾ ಶೀಲತೆ ಕಳೆದುಕೊಂಡು ನಾಟಕೀಯವಾಗಿ ನಟಿಸುವ ರಾಜಕಾರಣಿಗಳು ನಮ್ಮ ನಡುವೆ ಉದ್ಭವಿಸುತ್ತಾರೆ.
ವರ್ಗವಾಣೆ ದಂಧೆ, ಸಾರ್ವಜನಿಕ ಆಸ್ತಿ ಕಬಳಿಕೆ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅನಾಚಾರಗಳಿಗೆ ಇಂಬು ನೀಡುತ್ತದೆ. ಇಂತಹ ವ್ಯವಸ್ಥೆ ದುರ್ಬಲ ಪ್ರಜಾಸತ್ತೆಗೆ ಭ್ರಷ್ಟಾಚಾರ, ನೈತಿಕತೆಯ ಕುಸಿತಕ್ಕೆ ಇವೆಲ್ಲವೂ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿನ ಅನಾಸಕ್ತಿ ಹಾಗೂ ಮತ ವಿಕ್ರಯವೇ ಕಾರಣವಾಗಿದೆ.
ಸಮಾಜ ಭ್ರಷ್ಟಾಚಾರವನ್ನು ಒಪ್ಪಿತ ಎಂದು ಪರಿಗಣಿಸುವ ಹಂತಕ್ಕೆ ತಂದು ತಲುಪಿಸಿದೆ.
ಪರಿಣಾಮವಾಗಿ ಇದರ ಕರಿನೆರಳು ನೇರವಾಗಿ ಶಾಸಕಾಂಗದ ವ್ಯವಸ್ಥೆಯ ಮೇಲೂ ಆವರಿಸಿದೆ.
ವರ್ಗಾವಣೆಗಾಗಿ ಹಣ ನೀಡಿ ಬರುವ ಅಧಿಕಾರಿ ಜನಪ್ರತಿನಿಧಿಯಿಂದಲೇ ರಹದಾರಿ ಪಡೆದಂತೆ ತಾನೂ ನೀಡಿದ ಹಣಕ್ಕೆ ಹತ್ತು ಪಟ್ಟು ಗಳಿಸಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆ, ಉತ್ತರದಾಯಿತ್ವ ಇಲ್ಲದ ನಡವಳಿಕೆಗೆ ಅಧಿಕಾರಿಗಳ ಕಛೇರಿ ಅಲೆಯುವ ನಾಗರಿಕ ಅಲ್ಲಿ ತಾನೂ ಮಾರಾಟವಾದ ಪಾಪಕ್ಕೆ ಬಸವಳಿಯುತ್ತಾನೆ.
ಜಾರಿಗೆ ತರಲು ಇಂತಹ ದುರ್ಬಲ ನಿಯಮಾವಳಿಗಳ ನೆಪಗಳು, ಪರಿಣಾಮಕಾರಿಯಲ್ಲದ ಕಾನೂನು ಕ್ರಮಗಳು, ನ್ಯಾಯಾಂಗದ ಮೊರೆ ಹೋದರೆ ನಿಧಾನಗತಿಯ ಪ್ರಕ್ರಿಯೆ ಅಂತಿಮವಾಗಿ ರೆಡ್ ಟೇಪಿಸಮ್ಮಿನ ಅಧಿಕಾರಿಯ ನಿರಂಕುಶತೆಯಿAದ ತೋರುವ ಅನಗತ್ಯ ವಿಳಂಬ ಮತದಾರ ಅಥವಾ ನಾಗರಿಕ ಲಂಚ ನೀಡಬೇಕಾದ ದೈನೇಶಿ ಸ್ಥಿತಿಗೆ ತಲುಪುತ್ತಾನೆ.
ಸರ್ಕಾರಿ ಕಛೇರಿಗಳಲ್ಲಿ ಅಂಜಿಕೆಯಿAದ ಗೌಪ್ಯವಾಗಿ ನಡೆಯುತ್ತಿದ್ದ ಲಂಚದ ವ್ಯವಹಾರ ಇಂದು ರಾಜಾರೋಷವಾಗಿ ನಡೆಯುತ್ತಿದೆ.
ಜನಪ್ರತಿನಿಧಿಗೆ ಈ ಬಗ್ಗೆ ದೂರಿದರೆ ವರ್ಗಾವಣೆಯ ಫಲಾನುಭವಿಯಾದ ಆತ ಕೂಡ ನಿಸ್ಸಹಾಯಕನಂತೆ ನಟಿಸಲೇ ಬೇಕಾಗುತ್ತದೆ.
ಶಾಸಕಾಂಗದ ಭ್ರಷ್ಟಾಚಾರವನ್ನು ಬಹಿರಂಗವಾಗಿ ಸಾರ್ವತ್ರಿಕ ಸತ್ಯವೆಂದು ಒಪ್ಪಿ ಜೀರ್ಣಿಸಿಕೊಳ್ಳಲಾಗುತ್ತಿದೆ.
ಇದರಿಂದ ಪ್ರೇರಣೆಗೊಂಡ ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲಾ ಎಂಬAತೆ ನಾಯಕನಂತೆ ಮರಿನಾಯಕನು ಡೀಲ್ ಎಂಬ ಹೊಸ ಶಬ್ಧ ಪ್ರಯೋಗದಿಂದ ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಬೇನಾಮಿ ಹೆಸರಿನಲ್ಲಿ ಮಾಡಿಕೊಳ್ಳುವುದು ಸ್ಥಳೀಯ ಪಂಚಾಯತ್, ಪುರಸಭೆ ಹಂತದಲ್ಲಿ, ಕಂದಾಯ ಇಲಾಖೆಯ ಗಮನಕ್ಕೆ ತರದೇ ಮಾಲೀಕತ್ವ ಸೃಷ್ಟಿಸಿಕೊಳ್ಳೋದು ವ್ಯಾಪಕವಾಗಿ ಆರಂಭವಾಗಿದೆ.
ಯಾವುದೇ ವ್ತಕ್ತಿ ತನ್ನನ್ನು ಸಮೀಪಿಸಿದರೆ ಕೆಲಸ ಮಾಡಲು ಒಂದಷ್ಟು ಹಣಕ್ಕೆ ವ್ಯವಹಾರ ಕುದುರಿಸುವುದನ್ನು ಇಂದು ಒಂದು ಡೀಲ್ ಆಯ್ತು ಎಂದು ನಿರ್ಲಜ್ಜೆಯಿಂದ ಗರ್ವದಿಂದ ಸಾಧನೆಯೆಂದು ಬಿಂಬಿಸಿಕೊಳ್ಳುವ ಅಧೋಗತಿಗೆ ವ್ಯವಸ್ಥೆ ಬಂದು ತಲುಪಿದೆ.
ಅಲ್ಲಿ ಇಲ್ಲಿ ಗೆಲ್ಲುವ ಕೆಲವು ಪ್ರಾಮಾಣಿಕರು ಪ್ರಜಾಸತ್ತೆಯ ಕಾರ್ಮೋಡದ ಬೆಳ್ಳಿಯ ಗೆರೆಯಂತೆ ಕಾಣುತ್ತಿರುವುದು ಒಂದಷ್ಟು ಸಮಾಧಾನಕರ ಸಂಗತಿಯಾಗಿದೆ.
ಇAತಹ ಘಟನಾವಳಿಗಳಿಂದ ಹಳ್ಳಿಯಿಂದ ಡೆಲ್ಲಿಯವರೆಗೂ ಅಧಿಕಾರದ ಬಲದಿಂದ ಪ್ರಭಾವ ಬೀರುವಿಕೆ, ಸಾರ್ವಜನಿಕ ಸ್ವತ್ತಿನ ದುರ್ಬಳಕೆ, ಸಾರ್ವಜನಿಕ ಸ್ವತ್ತನ್ನು ತನ್ನ ಸ್ವಂತಕ್ಕೆ ಬಳಸುವುದು. ಸಾರ್ವಜನಿಕ ಹಣ ದುರುಪಯೋಗ, ಸ್ವಜನಪಕ್ಷಪಾತ, ನೀತಿ ನಿರೂಪಣೆಯಲ್ಲಿ ಸ್ವಂತ ಲಾಭಗಳಿಕೆಗೆ ಆದ್ಯತೆ. ಇವೆಲ್ಲವೂ ಭ್ರಷ್ಟಾಚಾರಕ್ಕೆ ವೇಗ ನೀಡಿ ಇಂಬು ಕೊಡುತ್ತಿವೆ.
ಹೆಚ್ಚೆಚ್ಚು ಹಣ ಕೂಡಿಡುವ, ಗಳಿಸುವ ಐಷಾರಾಮಿ ಬದುಕು ನಡೆಸುವ ವ್ಯಕ್ತಿಗೆ ಸಿಗುವ ಸಾರ್ವಜನಿಕ ಗೌರವ, ಸಮಾಜದ ದೃಷ್ಟಿಕೋನವನ್ನು ಬದಲಾಯಿಸಿದೆ.
ಯಾವುದೇ ಮಾರ್ಗದಲ್ಲಿ ಹಣಗಳಿಸಿದರೆ ಸಿಗುವ ವಿಲಾಸೀ ಬದುಕಿನ ಲೋಲುಪತೆ ಹಾಗೂ ಸಾರ್ವಜನಿಕ ರಿಂದ ಹಣವಂತರಿಗೆ ಸಿಗುವ ಗೌರವ ಭಾರತೀಯ ಮನಸ್ಸುಗಳನ್ನು ವಿಚಲಿತಗೊಳಿಸಿದೆ.
ಆತ ಜನರ ನಡುವೆ ಜನಪ್ರಿಯಗೊಳ್ಳುತ್ತಿದ್ದಾನೆ.
ಜನಪ್ರಿಯತೆ ಪಡೆದುಕೊಂಡರೆ ಯಾವ ತಪ್ಪು ಮಾಡಿದರೂ ಪರವಾಗಿಲ್ಲ ಅನ್ನುವ ಸಮರ್ಥನೀಯ ಮನೋಭಾವ ಬೆಳೆದು ನಿಂತಿದೆ.
ಈ ರೀತಿ ದಂಧೆ ಮಾಡಿ ಹಣವಂತರಾದ ಭ್ರಷ್ಟರಿಗೆ, ದುಷ್ಟರಿಗೆ, ಸನ್ಮಾನ ಮಾಡುವ ರೀತಿ ರಿವಾಜುಗಳನ್ನು ಸಮಾಜ ರೂಢಿಸಿಕೊಂಡು ಬಿಟ್ಟಿದೆ.
ನಾಗರಿಕರ ಇಂತಹ ಮನಸ್ಥಿತಿ, ಅಧಿಕಾರದ ರಾಜಕಾರಣಿಗಳ ಸ್ವೇಚ್ಛಾಚಾರದ ಅಧಿಕಾರಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜಕೀಯ ಪಕ್ಷಗಳ ಹೈಕಮಾಂಡ್‌ಗಳಿಗೆ ಪಕ್ಷದ ಅಭ್ಯರ್ಥಿ ಭ್ರಷ್ಟನಾಗುತ್ತಿದ್ದರೂ ಗೆಲ್ಲುವ ಮಾನದಂಡವನ್ನು ಪರಿಗಣಿಸಿ, ಮೌಲ್ಯಗಳು ಶಿಥಿಲಗೊಳ್ಳಲು ಮತ್ತಷ್ಟು ಇಂಬು ನೀಡುತ್ತಿವೆ.
ಚುನಾವಣೆ ಮೂಲಕ ಆಯ್ಕೆಗೊಂಡ ಮತದಾರನ ತೀರ್ಪಿಗೆ ವ್ಯತಿರಿಕ್ತವಾಗಿ ಆಡಳಿತ ಪಕ್ಷವನ್ನು ಪಲ್ಲಟಗೊಳಿಸುವ ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡುತ್ತಿದೆ.
ಯಾವುದೇ ಸೈದ್ಧಾಂತಿಕ ನಿಲುವುಗಳಿಲ್ಲದ ವ್ಯಕ್ತಿಗತ ಲಾಭಕ್ಕೆ ಮಂತ್ರಿಗಿರಿಯ ಆಮಿಷಕ್ಕೆ ಹಣದ ವ್ಯಾಮೋಹಕ್ಕೆ ಲಜ್ಜೆಗೆಟ್ಟು ಪಕ್ಷಾಂತರ ಮಾಡುವ ರಾಜಕಾರಣಿಗಳು, ಹಣ ಹಾಗೂ ಭುಜಬಲದ ನೆರವಿನಿಂದ ಮತದಾರನ ವಿಕ್ರಯ ವ್ಯಕ್ತಿಯ ವಿಲಕ್ಷಣೆಯ ಕಾರಣದಿಂದ ಚುನಾವಣೆ ಗೆಲ್ಲುವ ತಾಕತ್ತು ಸೃಷ್ಟಿಯಾಗಿರೋದು ರಾಜಕಾರಣ ತಲುಪಿರುವ ಅಧೋಗತಿಯ ಧ್ಯೋತಕವಾಗಿದೆ.
ಇದರೊಡನೆ ಇಂದಿನ ರಾಜಕೀಯ ವ್ಯವಸ್ಥೆ ಜಾತಿ ಧರ್ಮ ಭಾಷೆಗಳನ್ನು ತನ್ನ ಕಾವಲುಗಾರನಂತೆ ಮಾಡಿಕೊಂಡಿರುವ ಪರಿಣಾಮ ಭಾರತೀಯರ ನಡುವೆ ಪರಸ್ಪರ ಗುಮಾನಿ, ಸಂಶಯ, ಪಿತೂರಿಯ ಆತಂಕ ಸೃಷ್ಟಿ ತಲ್ಲಣಗೊಳಿಸಿದೆ.
ಅಭಿವೃದ್ಧಿ ರಾಜಕಾರಣಕ್ಕಿಂತ ಕೋಮು ವಿದ್ವೇಶದ ರಾಜಕಾರಣ ಮುನ್ನೆಲೆಗೆ ಬಂದು ಇಂದು ರಾಷ್ಟç ಭಯೋತ್ಪಾದಕತೆ, ಮತಾಂಧತೆ, ಅರಾಜಕತೆಗಳ ದುರಂತ ಕಥೆಗಳಿಂದ ದೇಶ ನಲುಗಿ ಹೋಗುತ್ತಿದೆ.
ಪ್ರಜಾಪ್ರಭುತ್ವವನ್ನು ತನ್ನ ವಿವೇಚನೆ ಹಾಗೂ ಆಲೋಚನಾ ದೃಷ್ಟಿಯಿಂದ ಕಾಪಾಡಬೇಕಾದ ಮತದಾರ ಜಾಗೃತನಾಗಬೇಕಿದೆ.
ಪ್ರಜ್ಣಾವಂತನಾಗಬೇಕಿದೆ.
ನಮಗೆ ಮಾರ್ಗದರ್ಶನ ಮಾಡಬೇಕಾದ ಹಲವು ಆಧ್ಯಾತ್ಮಿಕ ಕೇಂದ್ರಗಳು ತಮ್ಮ ಆಧ್ಯಾತ್ಮಿಕ ಪೊರೆ ಕಳಚಿಕೊಂಡು ವಾಣಿಜ್ಯ ಸಾಮ್ರಾಜ್ಯಗಳಾಗಿ ರೂಪುಗೊಳ್ಳುತ್ತಿದ್ದು ದೇಶದ ಅಧಿಕಾರ ಹಾಗೂ ರಾಜಕಾರಣದ ಕೇಂದ್ರಗಳಾಗುತ್ತಿವೆ.
ಗತಕಾಲದ ಇತಿಹಾಸದ ಸ್ವಾಭಾವಿಕ ಘಟನೆಗಳನ್ನು ವರ್ತಮಾನದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ಇಂದಿನ ಸಾಮಾಜಿಕ ಚೌಕಟ್ಟುಗಳನ್ನು ಶಿಥಿಲಗೊಳಿಸುವ ಚಿಂತನಾ ವಿಧಾನ ಸಾರ್ವಜನಿಕ ಅಭಿಪ್ರಾಯ ಹಾಗೂ ಅಭಿವ್ಯಕ್ತಿಯಾಗಿ ಬಿಂಬಿಸಿ ಸಾಮಾಜಿಕ ವಿಪ್ಲವಗಳಿಗೆ ದಾರಿ ಮಾಡಿಕೊಡುತ್ತಿದೆ.
ವಾಟ್ಸಾö್ಯಪ್ ವಿಶ್ವ ವಿದ್ಯಾಲಯಗಳು ನವಚರಿತ್ರಾಕಾರರು ತಾವು ಉತ್ಪಾದಿಸುವ ಹಾಗೂ ತಯಾರಿಸುವ ತಮ್ಮ ಗ್ರಹಿಕೆಯ ನಿರೂಪ