ಮಡಿಕೇರಿ, ಆ. ೧೧: ೬೬/೩೩/೧೧ ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವೀರಾಜಪೇಟೆ ಶಾಖಾ ವ್ಯಾಪ್ತಿಯ ಕೆ.ಎಸ್.ಆರ್.ಟಿ.ಸಿ ಪಾಲಂಗಾಲ, ಬೇತ್ರಿ,ಕೆ.ಎಸ್.ಆರ್.ಟಿ.ಸಿ, ಹಾಗೂ ಕೆ.ಇ.ಬಿ ಫೀಡರ್‌ಗಳಲ್ಲಿ ತಾ. ೧೨ ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ಗಂಟೆಯವರೆಗೆ ಸದರಿ ಫೀಡರ್‌ಗಳಲ್ಲಿ ಡಿ.ಪಿ.ಆರ್ ಕಾಮಗಾರಿ ಕೈಗೆತ್ತಿಕೊಂಡಿರುವುದರಿAದ ಸದರಿ ಫೀಡರ್‌ನಿಂದ ಹೊರಹೊಮ್ಮುವ ಮಾರ್ಗದಲ್ಲಿ ಬರುವ ಬೆಟ್ಟೋಳಿ, ತೋರ, ಕೆದಮುಳ್ಳೂರು, ಬೇತ್ರಿ, ಕದನೂರು, ಮೈತಾಡಿ, ಅರಮೇರಿ, ಕಾಕೋಟುಪರಂಬು, ಕಡಂಗ, ಕಡಂಗ ಮರೂರು, ಅರಸುನಗರ, ವಿದ್ಯಾನಗರ, ಪಂಜಾರ ಪೇಟೆ, ಮೀನು ಪೇಟೆ, ಆರ್ಜಿ, ಹೆಗ್ಗಳ, ಬೋಯಿಕೇರಿ, ಚಿಕ್ಕಪೇಟೆ, ಶಾಂತಿನಗರ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.