ಸೋಮವಾರಪೇಟೆ, ಆ. ೧೧: ಇಲ್ಲಿನ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಋಷಿ ಪೂಜೆ, ಋಷಿ ಆಹ್ವಾಹನೆ, ಹೋಮ, ಯಜ್ಞಪವಿತ ಧಾರಣೆ ನಡೆಯಿತು. ವಿಪ್ರ ಬಾಂಧವರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ದೇವಾಲಯದ ಪ್ರಧಾನ ಅರ್ಚಕ ಚಿತ್ರ ಕುಮಾರ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ನಂತರ ವಾರ್ಷಿಕ ಮಹಾ ಸಭೆ ಜರುಗಿತು. ಅಧ್ಯಕ್ಷ ಎಂ.ಆರ್. ನಂದ ಕುಮಾರ್, ಎಸ್.ಆರ್. ಸೋಮೇಶ್, ಎಂ. ಶ್ರೀಕಾಂತ್, ಎಸ್.ಎನ್. ಸೋಮಶೇಖರ್, ಎಸ್.ಎನ್. ನಾಗರಾಜ್, ಎಸ್.ಎ. ಮಧುಸೂದನ್, ಎಸ್.ಪಿ. ರಾಮ್ ಪ್ರಸಾದ್, ಮಂಜುನಾಥ್ ಪ್ರಸಾದ್, ಎಸ್.ಜಿ. ಜಗದೀಶ್, ಎಸ್. ಜಿ. ರವಿಶಂಕರ, ಸಿ.ಎನ್. ಸತೀಶ್, ಎಸ್.ಡಿ. ವಿಜೇತ್, ಎಸ್. ಆರ್. ಶ್ರೀನಿವಾಸ್, ಯಡೂರ್ ಹರೀಶ್, ದಿನೇಶ್ ಹಾಲೇರಿ, ಸರ್ವೇಶ್, ಕೆ.ಎನ್. ಶ್ರೀಧರ್, ಚಿರಂಜೀವಿ, ಪ್ರಣವ್, ಸುಧನ್ವ ಸತೀಶ್, ಸುದರ್ಶನ್ ಕೌಶಿಕ್ ಇನ್ನಿತರರು ಇದ್ದರು.