ಮಡಿಕೇರಿ : ಕೊಡಗು ಗೌಡ ಮಹಿಳಾ ಒಕ್ಕೂಟ ವತಿಯಿಂದ ೪ನೇ ವರ್ಷದ ಆಟಿ ಹಬ್ಬ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಕಕ್ಕಡ ಅಂಗವಾಗಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದುಗೂಡಲು ವೇದಿಕೆಯಾಗಿದೆ. ಸಂಸ್ಕೃತಿ, ಸಂಪ್ರದಾಯ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಬಾರಿಯಂಡ ಜೋಯಪ್ಪ, ಅರೆಭಾಷೆಯಲ್ಲಿನ ಹಳೆಯ ಪದಗಳು ಹಾಗೂ ನುಡಿಗಟ್ಟುಗಳು ಮರೆಯಾಗುತ್ತಿದ್ದು ಮುಂದಿನ ಪೀಳಿಗೆಯವರಿಗೆ ಇದನ್ನು ತಿಳಿಸುವ ಕೆಲಸವಾಗಬೇಕೆಂದರು. ಇದೇ ಸಂದರ್ಭ ಕೆಂಪೇಗೌಡ ರಾಜ್ಯ ಪ್ರಶಸ್ತಿ ಪಡೆದ ಬಾರಿಯಂಡ ಜೋಯಪ್ಪ, ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತೆ ಓಂಶ್ರೀ ದಯಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಇವರು ಬರೆದಿರುವ ಕಾದಂಬರಿ ‘ಕವಲುಗಳು ಕಲೆತಾಗ ‘ ಬಿಡುಗಡೆಗೊಂಡಿತು.

ಒಕ್ಕೂಟದ ಸದಸ್ಯೆಯರು ಆಟಿ ಹಬ್ಬದ ವಿವಿಧ ವಿಶೇಷ ತಿನಿಸುಗಳನ್ನು ಮಾಡಿ ಪ್ರದರ್ಶಿಸಿದರು. ಸಮಾರಂಭದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಆಟಿ ಸೊಪ್ಪಿನ ಪಾಯಸ, ಹಲ್ವಾ, ಕಡಬು, ಮರಕೆಸದ ಪತ್ರೊಡೆ , ಕಣಲೆ ಸಾರು, ಚಗತೆ ಸೊಪ್ಪಿನ ಪಲ್ಯ, ಪಕೋಡ, ಹಲಸಿನ ಹಣ್ಣಿನ ಕೂಗಲೆ ಹಿಟ್ಟು ಮುಂತಾದ ಖಾದ್ಯಗಳು ಗಮನ ಸೆಳೆದವು.

ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ , ಸಾಹಿತಿ ಬಾರಿಯಂಡ ಜೋಯಪ್ಪ , ಗೌಡ ವಿದ್ಯಾ ಸಂಘದ ಉಪಾಧ್ಯಕ್ಷ ನಿವೃತ್ತ ಡಿ.ಐ.ಜಿ. ಅಮೆ ಸೀತಾರಾಮ್, ನಿವೃತ್ತ ಶಿಕ್ಷಕಿ ಶಿವದೇವಿ ಅವನಿಶ್ಚಂದ್ರ, ಕಾಫಿ ಬೆಳೆಗಾರರಾದ ತೋಟಂಬೈಲು ಪಾರ್ವತಿ, ಸಾಹಿತಿ ಕೂಡಕಂಡಿ ಓಂಶ್ರೀ ದಯಾನಂದ ಉಪಸ್ಥಿತರಿದ್ದರು.

ಒಕ್ಕೂಟದ ಪದಾಧಿಕಾರಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ , ಕಟ್ರತನ ಲಲಿತಾ ಅಯ್ಯಣ್ಣ, ಬಾರನ ಶೋಭಾ, ಕುದುಪಜೆ ರೋಹಿಣಿ, ಕೋಳಿಬೈಲು ಹರಿಣಿ, ಕರ್ಣಯ್ಯನ ಪದ್ಮಿನಿ, ಮುದ್ಯನ ಜ್ಯೋತಿ, ಪೇರಿಯನ ಮುತ್ತಮ್ಮ, ಮೂಲೆಮಜಲು ಅಮಿತಾ, ನಾರೊಳನ ಭಾಗೀರಥಿ ಹಾಜರಿದ್ದರು. ಕಡ್ಲೆರ ಆಶಾ ಧರ್ಮಪಾಲ ನಿರೂಪಿಸಿ, ಬಾರನ ಶೋಭಾ ವಂದಿಸಿದರು.

ಮಡಿಕೇರಿ : ಆಟಿ ಪ್ರಯುಕ್ತ ಕೊಡಗು ಜಿಲ್ಲಾ ಬಂಟರ ಸಂಘ, ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಗ್ಗೋಡ್ಲುವಿನಲ್ಲಿ ಬಂಟ ಸಮುದಾಯದವರಿಗಾಗಿ ‘ಆಟಿಡೊಂಜಿ ದಿನ ಕೆರ‍್ದ ಗೊಬ್ಬು’ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು. ಸಮುದಾಯದವರು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಆಟಿ ವಿಶೇಷತೆಗಳು ಅನಾವರಣಗೊಳ್ಳುವುದ ರೊಂದಿಗೆ ಸಾಂಪ್ರದಾಯಿಕ ಆಚರಣೆಗಳು ಗಮನ ಸೆಳೆದವು.

ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಮಡಿಕೇರಿ ತಾಲೂಕು ಬಂಟರ ಮಹಿಳಾ ಘಟಕ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಹಿಳಾ ಬಂಟರ ಸಂಘ, ಕಗ್ಗೋಡ್ಲು ಹೋಬಳಿ ಬಂಟರ ಸಂಘದ ಸಹಯೋಗದಲ್ಲಿ ಕಗ್ಗೋಡ್ಲುವಿನಲ್ಲಿರುವ ದಿ. ರಾಮಣ್ಣ ಅವರ ಪತ್ನಿ ಸುಮಲತಾ ಅವರ ಗದ್ದೆಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಪುರುಷರಿಗೆ ಹ್ಯಾಂಡ್ ಬಾಲ್, ವಿವಿಧ ವಿಭಾಗದಲ್ಲಿ ೧೦೦ ಮೀ. ಓಟ, ಹಗ್ಗಜಗ್ಗಾಟ, ದಂಪತಿ ಓಟ, ಮಹಿಳೆಯರಿಗೆ ೧೦೦ ಮೀ. ಓಟ, ಹಗ್ಗಜಗ್ಗಾಟ, ನಿಂಬೆ ಚಮಚ ನಡಿಗೆ, ಪಾಸಿಂಗ್ ಬಾಲ್ ಆಟೋಟಗಳಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದರು. ಎಲ್ಲಾ ವಯೋಮಾನದವರು ಕ್ರೀಡೆಯಲ್ಲಿ ಭಾಗವಹಿಸಿ ಹೊಸ ಅನುಭವ ಪಡೆದರು.

ಆಟಿ ಕಳೆಂಜ - ಖಾದ್ಯಗಳ ಆಕರ್ಷಣೆ: ತುಳುನಾಡಿನ ಜಾನಪದ ಕಲೆ, ಆಟಿ ಕಳೆಂಜಯೊAದಿಗೆ ಸುಮಾರು ೯೦ ಬಗೆಯ ಆಟಿ ಮಾಸದ ವಿಶೇಷ ತಿಂಡಿ-ತಿನಿಸುಗಳು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಆಟಿ ಕಳೆಂಜ ವೇಷಧಾರಿಯೊಂದಿಗೆ ಮೆರವಣಿಗೆ ನಡೆಯಿತು. ಕ್ರೀಡಾಕೂಟಕ್ಕೂ ಮುನ್ನ ಸಮೀಪದ ಅಂಬರ ಸಭಾಂಗಣದಲ್ಲಿ ಆಟಿ ಖಾದ್ಯಗಳ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಬಂದವರು ವೈವಿಧ್ಯಮಯ ತಿನಿಸುಗಳನ್ನು ಸವಿದರು.

ಸಂಸ್ಕೃತಿ ರಕ್ಷಣೆಗೆ ಕರೆ: ಸಮುದಾಯ ಹಾಗೂ ಸಂಸ್ಕೃತಿ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆAದು ಗಣ್ಯರು ಕರೆ ನೀಡಿದರು. ಅಂಬರ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಆಟಿ ಕಳೆಂಜವನ್ನು ಸಾಂಪ್ರದಾಯಿಕವಾಗಿ ಬರ ಮಾಡಿಕೊಂಡು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಕಗ್ಗೋಡ್ಲು ಬಂಟರ ಹೋಬಳಿ ಘಟಕದ ಅಧ್ಯಕ್ಷೆ ಕಮಲಾಕ್ಷಿ ರೈ, ಸಂಸ್ಕೃತಿ ಇದ್ದರೆ ಮಾತ್ರ ಜನಾಂಗ ಉಳಿಯುತ್ತದೆ. ಪದ್ಧತಿ, ಪರಂಪರೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಶಶಿಕಲಾ ಶೆಟ್ಟಿ ಮಾತನಾಡಿ, ವರ್ಷಕ್ಕೊಮ್ಮೆ ಜನಾಂಗ ಒಂದುಗೂಡಲು ಈ ಕಾರ್ಯಕ್ರಮ ವೇದಿಕೆಯಾಗಿದ್ದು, ಬಾಂಧವ್ಯ ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ ಮಾತನಾಡಿ, ಸಂಸ್ಕೃತಿ, ಆಚಾರ-ವಿಚಾರ ಉಳಿಸುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕು. ಪೋಷಕರು ಮಕ್ಕಳಿಗೆ ಸಂಸ್ಕೃತಿ ರಕ್ಷಣೆಯ ಜವಾಬ್ದಾರಿಯನ್ನು ತಿಳಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭ ತಾಲೂಕು ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಜಯಂತಿ ಲವ ರೈ, ನಗರ ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಸುಜಾ ಗಣೇಶ್ ರೈ, ಖಜಾಂಚಿ ಮಾಲತಿ ರೈ, ವೀರಾಜಪೇಟೆ ತಾಲೂಕು ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಕುಸುಮಾ ಎನ್. ಶೆಟ್ಟಿ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ನಿತಿನ್ ರೈ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ರೈ, ಪ್ರಮುಖರಾದ ರಮೇಶ್ ರೈ, ಸುನಿಲ್ ಶೆಟ್ಟಿ, ವಿದ್ಯಾಧರ್ ರೈ, ದೀಪಕ್ ರೈ ಸೇರಿದಂತೆ ಇನ್ನಿತರರು ಹಾಜರಿದ್ದರು. ನಾಪೋಕ್ಲು : ಆಚಾರ, ವಿಚಾರ, ಸಂಸ್ಕೃತಿಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಹಿರಿಯರ ಮೇಲಿದ್ದು, ಅದನ್ನು ಉಳಿಸಿಕೊಂಡು ಕೊಂಡೊಯ್ಯುವುದು ಮುಂದಿನ ಪೀಳಿಗೆಯ ಕರ್ತವ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ -೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಲ್ಲವ ಸಮಾಜಕ್ಕೆ ಅದರದ್ದೆ ಆದ ಹಿನ್ನೆಲೆ ಹೊಂದಿದೆ. ಸಮಾಜಕ್ಕೂ ಅಪಾರ ಕೊಡುಗೆ ನೀಡಿದೆ. ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಹಿಂಬಾಲಕರಾದ ಬಿಲ್ಲವ ಸಮಾಜದವರು, ಸಮಾಜದ ಎಲ್ಲಾ ಆಯಾಮಗಳಲ್ಲಿ ಮುನ್ನಲೆಗೆ ಬರಬೇಕು. ಬಿಲ್ಲವರು ಅತ್ಯಂತ ಶ್ರಮಜೀವಿಗಳು ಹಾಗೂ ಸ್ವಾಭಿಮಾನಿಗಳಾಗಿದ್ದಾರೆ ಎಂದವರು, ಜನಾಂಗದ ಯಾವುದೇ ಬೇಡಿಕೆ ಇದ್ದರೂ ಸ್ಪಂದಿಸುವುದಾಗಿ ತಿಳಿಸಿ ಬಿಲ್ಲವ ಸಮಾಜಕ್ಕೆ ಮಡಿಕೇರಿಯಲ್ಲಿ ೨೬ ಸೆಂಟ್ ಜಾಗ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.

ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ತುಳುನಾಡು ಸಂಸ್ಕೃತಿಯ ನಾಡಾಗಿದ್ದು, ಬಿಲ್ಲವ ಜನಾಂಗ ತುಳುನಾಡಿನ ಸಂಸ್ಕೃತಿಯ ಸಾರವನ್ನು ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕಿದೆ. ನಮ್ಮ ಜನಾಂಗದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡುವುದರ ಮೂಲಕ ಎಲ್ಲಾ ಕ್ಷೇತ್ರದಲ್ಲೂ ಸ್ಥಾನ ಮಾನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಬಂಟ್ವಾಳದ ವಾಗ್ಮಿ ಶ್ರೀನಿಧಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಮಾತನಾಡಿದರು.

ವಿಶ್ವ ದಾಖಲೆ ಬರೆದಿರುವ ಯೋಗಪಟು ಸಿಂಚನ ಯೋಗ ಪ್ರದರ್ಶನ ಗಮನ ಸೆಳೆಯಿತು. ಈ ಸಂದರ್ಭ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು ೬೦ ಮಂದಿ ರಕ್ತದಾನ ಮಾಡಿದರು. ಆನಂತರ ಬಿಲ್ಲವ ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಹಿಳೆಯರಿಂದ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಪ್ರತಿಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ರಿಟರ್ನ್ ಕ್ಯಾಪ್ಟನ್ ಪೂವಪ್ಪ, ಸೋಮವಾರಪೇಟೆಯ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ, ವೀರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಗಣೇಶ್, ಕುಶಾಲನಗರ ಬಿಲ್ಲವ ಸಮಾಜದ ಅಧ್ಯಕ್ಷ ಸುಧಿ, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಸಿದ್ದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ರಂಜಾನ್ ಬಿ.ವಿ, ಹಾಗೂ ವಿವಿಧ ತಾಲೂಕಿನ ಬಿಲ್ಲವ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶ್ರೀಮಂಗಲ: ಕೊಡವ ಜನಾಂಗದಲ್ಲಿ ಸಂಸ್ಕೃತಿಯ ಆಚರಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಖ್ಯಾತ ಫ್ಯಾಷನ್ ಡಿಸೈನರ್ ನಡಿಕೇರಿಯಂಡ ಪ್ರಸಾದ್ ಬಿದ್ದಪ್ಪ ಹೇಳಿದರು. ಕುಟ್ಟ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ೧೩ನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿ ದ್ದಾರೆ, ಕೊಡವರು ತಮ್ಮದೇ ಆದ ವಿಶೇಷತೆಯನ್ನು ಹೊಂದಿ ದ್ದಾರೆ, ದೇಶದ ವಿವಿಧ ಕ್ಷೇತ್ರದಲ್ಲಿಯೂ ಚಾಪು ಮೂಡಿಸಿದ್ದಾರೆ, ಕೊಡವರಿಗೆ ಬಹುಮುಖ ಪ್ರತಿಭೆ ಇದ್ದು ಜನಾಂಗದ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಸೂಕ್ತ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು, ಆ ಮೂಲಕ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ನುಡಿದರು. ಕುಟ್ಟದಲ್ಲಿ ಕಳೆದ ೪೦ ವರ್ಷಗಳಿಂದ ಸ್ಥಳೀಯರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಮುಕ್ಕಾಟಿರ ಜಿಮ್ಮಿ ಮೇದಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸ ಲಾಯಿತು. ಕುಟ್ಟ ಕೊಡವ ಸಮಾಜ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಮಾತನಾಡಿ ಕಕ್ಕಡ ನಮ್ಮೆಯನ್ನು ಕಳೆದ ೧೩ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದರಿಂದ ಜನಾಂಗ ದವರು ಒಂದೆಡೆ ಸೇರಿ ಕಕ್ಕಡ ನಮ್ಮೆಯ ಮಹತ್ವ ಅರಿಯಲು ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೂ ಸಹ ಅದರ ಬಗ್ಗೆ ಅರಿವು ಮೂಡಲು ಪ್ರಯೋಜನವಾಗಲಿದೆ. ೨೦೦೦ ಇಸವಿಯಲ್ಲಿ ಕುಟ್ಟ ಕೊಡವ ಸಮಾಜ ಸ್ಥಾಪನೆ ಆಯಿತು, ಇದೀಗ ಬೆಳ್ಳಿ ಹಬ್ಬದ ವರ್ಷದಲ್ಲಿದ್ದೇವೆ ಎಂದರು.

ಈ ಸಂದರ್ಭ ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೇಂಗಡ ರಮೇಶ್, ಕಾರ್ಯದರ್ಶಿ ಕೊಂಗಾAಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ,ಖಜಾAಚಿ ಮಚ್ಚಮಾಡ ಸುಬ್ರಮಣಿ ನಿರ್ದೇಶಕರುಗಳಾದ ಕೇಚಮಾಡ ವಾಸು ಉತ್ತಪ್ಪ, ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಕಬೀರ್ ತಿಮ್ಮಯ್ಯ, ಚೆಪ್ಪುಡಿರ ಪಾರ್ಥ, ಜಾಗ ದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೆರ ರಾಬಿನ್ ಕಾರ್ಯಪ್ಪ, ಹಾಗೂ ಸಾಂಸ್ಕೃತಿಕ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ಮಚ್ಚಮಾಡ ನವ್ಯ ಪ್ರಕಾಶ್, ಕಳ್ಳಂಗಡ ಗ್ರೀಷ್ಮ ಅಪ್ಪಣ್ಣ, ಚೆಕ್ಕೆರ ದೇಚು ರಾಬಿನ್, ಕೋಳೆರ ಪ್ರಿಯಾ ಮನೋಜ್ ಮತ್ತಿತರರು ಹಾಜರಿದ್ದರು.ತೀತಿರ ಪುಸಿ ಅಪ್ಪಣ್ಣ ಪ್ರಾರ್ಥಿಸಿ, ಅತಿಥಿಗಳ ಪರಿಚಯವನ್ನು ಚೆಕ್ಕೆರ ರಾಬಿನ್, ಚೆಕ್ಕೆರ ಆಯನಾ ಕಾರ್ಯಪ್ಪ, ಮಚ್ಚಮಾಡ ಸುಬ್ರಮಣಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭ ಸ್ಥಳೀಯರು ತೊಡಗಿಸಿಕೊಂಡಿರುವ ವ್ಯಾಪಾರ ಉದ್ದಿಮೆ,ಆಹಾರ ತಯಾರಿಕೆ ಆಟೋ ಮೊಬೈಲ್ ಕ್ಷೇತ್ರದ ಪರಿಚಯ ಹಾಗೂ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೂವಿನ ಗಿಡಗಳು ಕರಕುಶಲ ವಸ್ತುಗಳು ಫ್ಯಾಷನ್ ಡಿಸೈನ್, ಪೈಂಟಿAಗ್, ಆಹಾರ ತಯಾರಿಕಾ ವಿಭಾಗದಲ್ಲಿ ಚಟ್ನಿ ಉಪ್ಪಿನಕಾಯಿ ವೈವಿಧ್ಯಮಯ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು, ಮಹಿಳೆಯರ ಕಲರವ ಕಂಡು ಬಂತು. ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಮಹಿಳೆಯರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗೋಣಿಕೊಪ್ಪ : ಕಕ್ಕಡ ವಿಶೇಷತೆಯ ತಿಂಡಿ-ತಿನಿಸುಗಳಾದ ಮದ್ದುಪಾಯಸ, ಮದ್ದ್ಪುಟ್ಟ್, ಕೆಂಬುಕರಿ, ಞಂಡ್‌ಕರಿ, ಮೀನ್‌ಕರಿ ಬೈಂಬಳೆ ಕರಿ, ಕಾಡ್‌ಮಾಂಗೆ, ಚೆಕ್ಕೆಕುರು ಪಜ್ಜಿ, ಕಾಕೆತೊಪ್ಪು, ಕುಮ್ಮುಕರಿ, ನಾಟಿಕೋಳಿ ಯಂತಹ ಬಾಯಲ್ಲಿ ನೀರೂರಿಸುವ ಸಾಂಪ್ರದಾಯಕ ಖಾದ್ಯಗಳ ರುಚಿ.. ಪರಿಮಳ ಒಂದೆಡೆ...ಮತ್ತೊAದೆಡೆಯಲ್ಲಿ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಜತೆಗೆ ವಿಶೇಷವಾಗಿ ಕೊಡವ ಮಹಿಳೆಯರು ಸಂಸ್ಕೃತಿಗೆ ಪೂರಕವಾದ ರೀತಿಯ ರ‍್ಯಾಂಪ್‌ವಾಕ್’ ಮೂಲಕ ಗಮನ ಸೆಳೆದ ಮಹಿಳೆಯರು ಸ್ಕಿಟ್, ಡ್ರಾಮ, ವಾಲಗತಾಟ್‌ನ ಸಂಭ್ರಮದೊAದಿಗೆ ಕಕ್ಕಡ ಹಬ್ಬದ ಸಂಭ್ರಮಾಚರಣೆ ಇಂದು ಗೋಣಿಕೊಪ್ಪಲು ಹೊರ ವಲಯದ ಫಾಮ್‌ವ್ಯಾಲಿ ರೆಸಾರ್ಟ್ನಲ್ಲಿ ಕಂಡುಬAದಿತು. ಗೋಣಿಕೊಪ್ಪಲು ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಕಕ್ಕಡ ೧೮ರ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಹಿಳೆಯರು ಸಡಗರದೊಂಡಿಗೆ ಭಾಗಿಗಳಾಗಿದ್ದರು.

ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಕೊಡವ ಹಾಗೂ ಕೊಡಗಿನ ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವ ಪ್ರಯತ್ನಗಳು ಶ್ಲಾಘನೀಯ, ಕಾವೇರಿ ಪೊಮ್ಮಕ್ಕಡ ಕೂಟ ಕಳೆದ ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಇದು ಮುಂದಿನ ಪೀಳಿಗೆಗೆ ಮಹತ್ವದ ಕೊಡುಗೆಯಾಗಲಿದೆ ಎಂದರು.

ಮತ್ತೋರ್ವ ಅತಿಥಿ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಎ. ಕಾರ್ಯಪ್ಪ ಅವರು ಸಂಸ್ಕೃತಿ ಹಬ್ಬ-ಹರಿದಿನ ಕ್ರೀಡೆಯ ಬಗ್ಗೆ ಬೆಳಕು ಚೆಲ್ಲಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜು ದೇವಯ್ಯ ಮಹಿಳೆಯರು ಸದಾ ಕೆಲಸದ ಒತ್ತಡದಲ್ಲಿರುವುದರಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಹಿಳೆಯರ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಬೊಳ್ಳಚಂಡ ಶೃಂಗಾ ಸೋಮಣ್ಣ ನಿರೂಪಿಸಿ, ಪೂದ್ರಿಮಾಡ ಸರಿತಾ ತಮ್ಮಯ್ಯ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಮುಕ್ಕಾಟಿರ ಬೀನಾ ಪ್ರಸನ್ನ ಸ್ವಾಗತಿಸಿ, ನಿರ್ದೇಶಕಿ ಬಲ್ಯಮಿದೇರಿರ ಆಶಾ ಶಂಕರ್ ವಂದಿಸಿದರು. ವೇದಿಕೆಯಲ್ಲಿ ನಿರ್ದೇಶಕರು ಗಳಾದ ಪರದಂಡ ಸುಮಿ ಬೋಪಣ್ಣ, ಆಪಟ್ಟೀರ ಸೌಮ್ಯ ಮೊಣ್ಣಪ್ಪ, ಸಣ್ಣುವಂಡ ಡಯಾನ ವಿನಯ್, ಮಲ್ಲೆಂಗಡ ಮಮತ ಪೂಣಚ್ಚ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.ಮಡಿಕೇರಿ: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಕಕ್ಕಡ-೧೮ ಅನ್ನು ಬಿಟ್ಟಂಗಾಲದ ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಆಚರಿಸಲಾಯಿತು. ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಮಾತನಾಡಿ, ಹಿಂದೆ ಭತ್ತ ಕೃಷಿಗಿದ್ದ ಪ್ರಾಧಾನ್ಯತೆ ಕಳೆದು ಹೋಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೃಷಿಭೂಮಿ ಪಾಳು ಬಿಡುತ್ತಿರುವುದು ಸರಿಯಲ್ಲ. ಕೃಷಿಯತ್ತ ಮುಖ ಮಾಡುವ ಮೂಲಕ ಐತಿಹ್ಯ ಕಾಪಾಡಬೇಕು. ಇದು ಭವಿಷ್ಯಕ್ಕೂ ಸಹಕಾರಿಯಾಗುತ್ತದೆ ಎಂದರು.

ಕಕ್ಕಡ ಅಂಗವಾಗಿ ವಿಶೇಷ ಖಾದ್ಯಗಳ ಪ್ರದರ್ಶನ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಚರ್ಮಂಡ ಪೂವಯ್ಯ ಖಜಾಂಚಿ ಕೊರಂಡ ಪ್ರಕಾಶ್ ನಾಣಯ್ಯ, ಖಾಯಂ ಅಹ್ವಾನಿತ ಪಡಿಞರಂಡ ಅಯ್ಯಪ್ಪ, ನಿರ್ದೇಶಕರುಗಳಾದ ಪಾನಿಕುಟ್ಟೀರ ಕುಟ್ಟಪ್ಪ, ತೊರೇರ ಮುದ್ದಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ, ತೊರೇರ ಪೂವಯ್ಯ, ತಂಬAಡ ಮಂಜು, ಕೊಂಗೆಪ್ಪAಡ ರವಿ, ಮೂರೀರ ಕುಶಾಲಪ್ಪ, ಚಳಿಯಂಡ ಕಮಲಾ, ಮೂರೀರ ಶಾಂತಿ, ಮಳ್ಳಾಡ ಸುಥಾ, ಪೊಟ್ಟಂಡ ವಸಂತಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು