ಕುಶಾಲನಗರ, ಆ. ೧೧: ರೋಟರಿ ಕ್ಲಬ್ ಕುಶಾಲನಗರ ಹಾಗೂ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ತಡೆಗಟ್ಟುವ ಲಸಿಕೆ ಶಿಬಿರವನ್ನು ಕುಶಾಲನಗರ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಯುವತಿಯರು ಹಾಗೂ ಮಹಿಳೆ ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರವನ್ನು ಉದ್ಘಾಟಿಸಿದ ಡಾ. ಹರಿ ಶೆಟ್ಟಿ ಅವರು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ವಿವರಿಸಿದರು. ಗರ್ಭಕಂಠ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ. ಹೆಚ್‌ಪಿವಿ ವೈರಸ್‌ನಿಂದ ಉಂಟಾಗುವ ಈ ರೋಗಕ್ಕೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಮೂಲಕ ತಡೆಗಟ್ಟಲು ಸಾಧ್ಯವಿದೆ. ೯ ವರ್ಷ ಮೇಲ್ಪಟ್ಟವರು ಲಸಿಕೆ ಪಡೆದರೆ ಭವಿಷ್ಯದಲ್ಲಿ ಈ ರೋಗದ ಅಪಾಯ ಕಡಿಮೆ ಇರುತ್ತದೆ. ಜಾಗೃತಿ ಹಾಗೂ ಮುನ್ನೆಚ್ಚರಿಕೆಯೇ ಈ ರೋಗ ನಿವಾರಣೆಗೆ ಪ್ರಮುಖ ಅಸ್ತç ಎಂದು ಹೇಳಿದರು. ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಲ್ಲಿ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆ ಮೂಲಕ ಜಿಲ್ಲಾ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ರೇಷ್ಮಾ ನವೀನ್, ನಿಕಟ ಪೂರ್ವ ಅಧ್ಯಕ್ಷೆ ಚಿತ್ರ ರಮೇಶ್ , ಖಜಾಂಚಿ ಶೀನಾ ಪ್ರಕಾಶ್ ಹಾಗೂ ಸಂಸ್ಥೆಯ ಸದಸ್ಯರುಗಳಾದ ವಿನುತಾ, ಅಂಕಿತ, ಮೌನ ಭೋಜಣ್ಣ ಮತ್ತಿತರರು ಇದ್ದರು.