ಕೂಡಿಗೆ, ಆ. ೧೧ : ಕೂಡಿಗೆ, ಕೂಡುಮಂಗಳೂರು ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಒಂದು ವಾರಗಳಿಂದಲೂ ಕೆಲವು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಕಾಂಕ್ರಿಟ್ ಲಾರಿಗಳ ಬ್ಯಾಟರಿ ಕಳ್ಳತನ ಮಾಡುತ್ತಿರುವುದು ಕಂಡುಬAದಿದೆ.

ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು, ವಿಜಯನಗರ, ಕೂಡಿಗೆ ವ್ಯಾಪ್ತಿಯಲ್ಲಿ ಒಂದೇ ದಿನ ೫ ಕಡೆಗಳಲ್ಲಿ ೫ ಲಾರಿಗಳಲ್ಲಿ ಅಳವಡಿಕೆ ಮಾಡಲಾಗಿದ್ದ ಬ್ಯಾಟರಿ ಕಳವು ಮಾಡಲಾಗಿದೆ.

ಕಾಂಕ್ರಿಟ್ ಅಸೋಸಿಯೇಷನ್‌ನ ವತಿಯಿಂದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.