ಸೋಮವಾರಪೇಟೆ,ಆ.೧೦: ಮನೆ, ತೋಟ, ಗದ್ದೆಗಳಿರುವ ಜಾಗವನ್ನು ಸಿ ಮತ್ತು ಡಿ ಜಾಗವೆಂದು ಘೋಷಿಸಿ, ರೈತರ ಬದುಕನ್ನು ಬೀದಿಗೆ ತರುವ ಕಾರ್ಯಕ್ಕೆ ಸರ್ಕಾರಗಳು-ಅಧಿಕಾರಿಗಳು ಮುಂದಾಗಿದ್ದು, ರೈತರ ಅಳಿವು-ಉಳಿವಿನ ನಿರ್ಣಾಯಕ ಹೋರಾಟದ ಭಾಗವಾಗಿ ರೈತ ಹೋರಾಟ ಸಮಿತಿಯು ತಾ. ೧೨ರಂದು (ನಾಳೆ) ಸೋಮವಾರಪೇಟೆ ತಾಲೂಕು ಬಂದ್ಗೆ ಕರೆ ಕೊಟ್ಟಿದೆ.
ಈ ಹಿಂದೆ ಸೋಮವಾರಪೇಟೆ ಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಹೋರಾಟ ನಡೆಸಿದ ಸಮಿತಿ ನಂತರದ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಕಂದಾಯ, ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ್ದರೂ ಈವರೆಗೆ ಪೂರಕ ಸ್ಪಂದನ ದೊರಕದೆ ಇರುವುದರಿಂದ ತಾ. ೧೨ರಂದು ಸೋಮವಾರಪೇಟೆ ತಾಲೂಕು ಬಂದ್ಗೆ ಕರೆಕೊಟ್ಟಿದೆ.
ಕಳೆದ ಹಲವಾರು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ವನ್ಯಪ್ರಾಣಿಗಳ ಉಪಟಳದ ನಡುವೆಯೂ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ, ಇತ್ತೀಚೆಗೆ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳು ನುಂಗಲಾರದ ತುತ್ತಾಗುತ್ತಿವೆ. ಸಿ ಮತ್ತು ಡಿ ಜಾಗದ ಸಮಸ್ಯೆ, ಸೆಕ್ಷನ್-೪ ಈ ನಿಟ್ಟಿನಲ್ಲಿ ಪ್ರಮುಖವಾಗಿ ರೈತರನ್ನು ಕಾಡುತ್ತಿದ್ದು, ಅರಣ್ಯ ವ್ಯವಸ್ಥಾಪನಾಧಿ ಕಾರಿಗಳಿಂದ ಆಗಾಗ್ಗೆ ಬರುತ್ತಿರುವ ನೋಟೀಸ್ಗಳು ರೈತರ ನಿದ್ದೆಗೆಡಿಸಿವೆ.
ಕೂರ್ಗ್ ಲ್ಯಾಂಡ್ ರೆಗ್ಯೂಲೇಶನ್ ೧೮೮೯ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ರೈತರಿಗೆ ಹಿಡುವಳಿ ಜಮೀನನ್ನು ನೀಡಲಾಗಿತ್ತು. ಉಳಿದಂತೆ ದಟ್ಟವಾದ ಅರಣ್ಯ, ಕಾಡು, ಬೆಟ್ಟಗುಡ್ಡ ಪ್ರದೇಶಗಳನ್ನು ಅರಣ್ಯ ಜಮೀನು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಎಂದು, ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಸರ್ಕಾರದ ಪೈಸಾರಿ ಜಮೀನೆಂದು ಗುರುತಿಸಲಾಗಿತ್ತು.
ಜನಸಂಖ್ಯೆ ಬೆಳೆದಂತೆ ಪೈಸಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ಕೊಂಡು ಕೃಷಿ ಕಾರ್ಯ ಕೈಗೊಂಡ ರೈತರು ಭೂ ಮಂಜೂರಾತಿ ಕಾಯ್ದೆ ಯಡಿ ಇದೇ ಜಾಗಕ್ಕೆ ಹಕ್ಕುಪತ್ರ ಮಾಡಿಕೊಂಡಿದ್ದಾರೆ. ಉಳಿದವರ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಈಗಲೂ ಬಾಕಿ ಉಳಿದಿವೆ.
೧೯೭೮ರಲ್ಲಿ ಸರ್ಕಾರದ ಆದೇಶದಂತೆ ಸರ್ಕಾರದ ಹೆಸರಿನಲ್ಲಿ ದಾಖಲಾಗಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಸಿ ಮತ್ತು ಡಿ ಭೂಮಿ ಎಂದು ವರ್ಗೀಕರಿಸಿ ಅಂತಹ ಜಮೀನು ಗಳನ್ನು ಮಾತ್ರ ಅರಣ್ಯ ಇಲಾಖೆಗೆ ಹಸ್ತಾಂತರಿಸುವAತೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಆದರೆ ಜಿಲ್ಲಾಧಿಕಾರಿಗಳ ಅಧೀನ ಕಚೇರಿಯ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ಹೆಸರಲ್ಲಿರುವ ಎಲ್ಲಾ ಜಮೀನುಗಳನ್ನು ಸ್ಥಳ ಪರಿಶೀಲನೆ ಮಾಡದೆ ಕಚೇರಿ ಯಲ್ಲಿಯೇ ಕುಳಿತುಕೊಂಡು ಪಟ್ಟಿಮಾಡಿ ಸಿ ಮತ್ತು ಡಿ ಜಮೀನು ಗಳೆಂದು ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದಾರೆ. ವೈಜ್ಞಾನಿಕ ಸರ್ವೇ ಮಾಡದೆ, ಸಂಪೂರ್ಣವಾಗಿ ಪೈಸಾರಿ ಭೂಮಿಯನ್ನು ಸಿ ಮತ್ತು ಡಿ ಎಂದು ವರದಿ ನೀಡಿರುವುದರಿಂದ ಸಮಸ್ಯೆ ಎದುರಾಗಿದೆ ಎಂಬುದು ರೈತರ ಆರೋಪವಾಗಿದೆ. ಹಲವು ದಶಕಗಳ ಹಿಂದಿನಿAದಲೂ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಪ್ರದೇಶ, ತೋಟ-ಗದ್ದೆಗಳಿರುವ ಜಾಗಗಳನ್ನು ಸಿ ಮತ್ತು ಡಿ ಜಾಗವೆಂದು ವರ್ಗೀಕರಿಸಲಾಗಿದೆ. ಇದರಲ್ಲಿ ಕೆಲವು ಜಾಗವನ್ನು ಸೆಕ್ಷನ್-೪ ಅಡಿಯಲ್ಲಿ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡಿಸಲು ನೋಟೀಸ್ ನೀಡುತ್ತಿರುವುದರಿಂದ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿಯೂ ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಶಾಂತಳ್ಳಿ ಹೋಬಳಿಯಲ್ಲಿ ಅನೇಕ ವರ್ಷಗಳಿಂದಲೂ ಸಿ ಮತ್ತು ಡಿ ಕೃಷಿ ಭೂಮಿಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಕೆಲವರಿಗೆ ಇಂತಹ ಜಾಗಕ್ಕೆ ಹಕ್ಕುಪತ್ರವನ್ನೂ ನೀಡಲಾಗಿದೆ. ಇನ್ನು ಕೆಲವರಿಗೆ ಅರಣ್ಯ ಭೂಮಿ ಎಂಬ ನೆಪವೊಡ್ಡಿ ಸರ್ಕಾರ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರಗಳಿಲ್ಲದೆ ಕೃಷಿಕರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬದುಕು ಸಂಕಷ್ಟದಲ್ಲಿರುವ ಸಮಯದಲ್ಲಿಯೇ ಭೂಮಿಯೂ ಸಹ ಅರಣ್ಯ ಇಲಾಖೆಯ ಪಾಲಾದರೆ ನಮ್ಮ ಉಳಿವು ಹೇಗೆ? ಎಂಬುದು ರೈತರ ಪ್ರಶ್ನೆ.
ಈ ನಿಟ್ಟಿನಲ್ಲಿ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ರೈತರು ಮಾತ್ರವಲ್ಲದೇ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜನಸಾಮಾನ್ಯರಿಗೆ ಬಂದೊದಗಿದೆ. ಇದಕ್ಕಾಗಿಯೇ ತಾ. ೧೨ರಂದು ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಸೋಮವಾರಪೇಟೆ ತಾಲೂಕು ಬಂದ್ಗೆ ರೈತ ಹೋರಾಟ ಸಮಿತಿ ಕರೆ ನೀಡಿದೆ.
ರೈತ ಹೋರಾಟ ಸಮಿತಿಯು ರೈತರ ಅಳಿವು-ಉಳಿವಿನ ಹೋರಾಟಕ್ಕೆ ಕರೆ ನೀಡಿರುವುದರಿಂದ ಬಹುತೇಕ ಗ್ರಾಮ ಸಮಿತಿಗಳು, ಮುನ್ನೆಲೆಯಲ್ಲಿರುವ
ಕಾನೂನು ಹೋರಾಟಕ್ಕೆ ಈಗಲೂ ಸಿದ್ಧ-ಶಾಸಕ ಮಂತರ್ ಗೌಡ
ಸಿ ಮತ್ತು ಡಿ ಜಾಗದ ಸಮಸ್ಯೆಯ ಬಗ್ಗೆ ರೈತ ಹೋರಾಟ ಸಮಿತಿ ಹೋರಾಟಕ್ಕಿಳಿದ ಮೊದಲ ದಿನದಿಂದ ಈವರೆಗೂ ತಾನು ಜೊತೆಯಾಗಿದ್ದು, ಮುಂದೆಯೂ ರೈತರ ಹಿತಕಾಯಲು ಬದ್ಧನಾಗಿದ್ದೇನೆ. ಅಂತೆಯೇ ಕಾನೂನು ಭಾಗದ ಹೋರಾಟಕ್ಕೆ ಈಗಲೂ ಸಿದ್ಧನಿದ್ದೇನೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್ ೪ ವಿಚಾರಕ್ಕೆ ಸಂಬAಧಿಸಿದAತೆ ತಾನು ರೈತರ ಪರ ನಿಂತಿದ್ದು, ಈಗಾಗಲೇ ಸಮಿತಿಯ ನಿಯೋಗವನ್ನು ಮುಖ್ಯಮಂತ್ರಿಗಳ ಸಹಿತ ಸಂಬAಧಿಸಿದ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿಸಿ ಮಾತನಾಡಿದ್ದೇನೆ. ನಮ್ಮ ಕಡೆಯಿಂದಲೂ ಕಾನೂನು ಹೋರಾಟಕ್ಕೆ ಬೇಕಾದ ಎಲ್ಲಾ ನೆರವನ್ನೂ ಒದಗಿಸಿದ್ದೇನೆ. ಇದು ರೈತ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೂ ತಿಳಿದಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದೂ ಸಹ ಸಮಿತಿಯ ಅರಿವಿಗೆ ಬಂದಿದೆ ಎಂದು ಶಾಸಕ ಡಾ. ಮಂತರ್ ಗೌಡ ‘ಶಕ್ತಿ’ಯೊಂದಿಗೆ ಹೇಳಿದ್ದಾರೆ.
ಸಿ ಅಂಡ್ ಡಿ ಸಮಸ್ಯೆ ನಿನ್ನೆ ಮೊನ್ನೆಯದಲ್ಲ; ೧೯೭೮ರಿಂದಲೇ ಈ ಸಮಸ್ಯೆ ಉದ್ಭವವಾಗಿದೆ. ಕೆಲ ಅಧಿಕಾರಿಗಳ ವೈಫಲ್ಯದಿಂದಾಗಿ ರೈತರು ಇಂದಿಗೂ ಸಮಸ್ಯೆಗೆ ಸಿಲುಕಿದ್ದಾರೆ. ಸಿ ಮತ್ತು ಡಿ ಹಾಗೂ ಸೆಕ್ಷನ್ -೪ ಬೇರೆ ಬೇರೆ. ಕೆಲವು ಭಾಗದಲ್ಲಿ ಮಾತ್ರ ಸೆಕ್ಷನ್೪ ವ್ಯಾಪ್ತಿಯೊಳಗೆ ಸಿ ಮತ್ತು ಡಿ ಜಮೀನು ಬಂದಿದೆ. ಈ ಹಿಂದೆಯೇ ಸಿ ಮತ್ತು ಡಿ ಭೂಮಿಯನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರ ಮಾಡಲಾಗಿದೆ. ಈ ವಿಚಾರ ಇದೀಗ ಕಾನೂನು ವ್ಯಾಪ್ತಿಯೊಳಗೆ ಸೇರಿದೆ. ಈ ಹಿನ್ನೆಲೆ ಕಾನೂನು ಭಾಗದಲ್ಲಿಯೇ ನಾವು ಹೋರಾಟ ಮಾಡಬೇಕಿದ್ದು, ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನವನ್ನೂ ಶಾಸಕನಾಗಿ ತಾನು ಮಾಡುತ್ತಿದ್ದೇನೆ. ರೈತರ ಹಿತಕಾಯುವುದೇ ಅಂತಿಮವಾಗಿದೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
ರೈತರ ಪರವಾಗಿ ಸಾರ್ವಜನಿಕ ಹೋರಾಟ ಮುಖ್ಯವಾಗಿದ್ದರೂ, ವಿಚಾರ ಕಾನೂನು ಪರಿಧಿಯೊಳಗೆ ಸೇರಿರುವುದರಿಂದ ಕಾನೂನು ಭಾಗದ ಹೋರಾಟವೂ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈವರೆಗೂ ಸಹಕಾರ ನೀಡಿದ್ದು, ಮುಂದೆಯೂ ರೈತರ ಹಿತಕ್ಕಾಗಿ ಕಾನೂನು ಭಾಗದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಡಾ. ಮಂತರ್ ಗೌಡ ಘೋಷಿಸಿದ್ದಾರೆ.
ರೈತರ ಉಳಿವಿಗೆ ನಿರಂತರ ಹೋರಾಟ : ಸಿ.ಬಿ. ಸುರೇಶ್
ರೈತರ ಸಮಸ್ಯೆಗಳ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳನ್ನು ಭೇಟಿ ಮಾಡಲಾಗಿದೆ. ಸಮಸ್ಯೆಯ ಗಂಭೀರತೆಯ ಬಗ್ಗೆ ವಿವರಿಸಲಾಗಿದೆ. ಅರಣ್ಯ ಭೂಮಿ ಎಷ್ಟಿದೆ ? ಅದರಲ್ಲಿ ಸಿ ಮತ್ತು ಡಿ, ಮತ್ತು ಪೈಸಾರಿ ಭೂಮಿ ಎಷ್ಟಿದೆ ? ಎಲ್ಲಿದೆ ? ಎಂಬುದನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ರೈತರಿಗೆ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನೆ ತೀವ್ರವಾಗಲಿದೆ. ತಾ. ೧೨ರಂದು ಸೋಮವಾರಪೇಟೆ ತಾಲೂಕು ಬಂದ್ ಮಾಡಲಾಗುವುದು. ಮುಂದಿನ ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸಮಸ್ಯೆ ಇತ್ಯರ್ಥವಾಗದಿದ್ದರೆ ಮುಂದಿನ ವಿಧಾನಸಭಾ ಅಧಿವೇಶನ ಸಮಯದಲ್ಲಿ ಕೊಡಗು ಜಿಲ್ಲಾ ಬಂದ್ಗೆ ಕರೆ ನೀಡಲಾಗುವುದು. ಈ ಹೋರಾಟ ರೈತರ ಸಮಸ್ಯೆ ಬಗೆಹರಿದು ತಾರ್ತಿಕ ಅಂತ್ಯ ಕಾಣುವವರೆಗೆ ನಡೆಯಲಿದೆ.
-ಕೆ.ಬಿ.ಸುರೇಶ್, ಅಧ್ಯಕ್ಷರು, ರೈತ ಹೋರಾಟ ಸಮಿತಿ, ಸೋಮವಾರಪೇಟೆ