ಮಡಿಕೇರಿ, ಆ. ೧೦: ವೀರಾಜಪೇಟೆ ಕೊಡವ ಸಮಾಜಕ್ಕೆ ಇಂದು ಚುನಾವಣೆ ನಡೆದಿದ್ದು, ಇದರಲ್ಲಿ ಅಧ್ಯಕ್ಷರಾಗಿ ಅಮ್ಮುಣಿಚಂಡ ರವಿ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಕಾಣತಂಡ ಜಗದೀಶ್ ಆಯ್ಕೆ ಆಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮತ್ತೋರ್ವ ಅಭ್ಯರ್ಥಿಯಾಗಿದ್ದ ರಾದರೂ ಜಿದ್ದಾಜಿದ್ದಿನ ನಡುವೆ ಅಮ್ಮುಣಿಚಂಡ ರವಿ ಉತ್ತಪ್ಪ ಆಯ್ಕೆ ಆಗಿದ್ದಾರೆ.

ಉಪಾಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಪೈಪೋಟಿಯುತವಾಗಿ ನಡೆದಿದ್ದು, ಇದರಲ್ಲಿ ಕಾಣತಂಡ ಜಗದೀಶ್ ಅವರು ಆಯ್ಕೆ ಆಗಿದ್ದಾರೆ. ಈ ಸ್ಥಾನದ ಮತ ಎಣಿಕೆ ಕೊನೆಯ ಕ್ಷಣದವರೆಗೂ ತೀರಾ ಕುತೂಹಲಕಾರಿ ಯಾಗಿತ್ತು. ಮಹಿಳಾ ನಿರ್ದೇಶಕರುಗಳ ಸ್ಥಾನಕ್ಕೆ ಮೇಕೇರಿರ ಪಾಲಿ ಸುಬ್ರಮಣಿ, ಮೇರಿಯಂಡ ಗಾಯತ್ರಿ ಅಚ್ಚಮ್ಮ ಹಾಗೂ ನಡಿಕೇರಿಯಂಡ ಶಿಲ್ಪಾ ತಿಮ್ಮಯ್ಯ ಆಯ್ಕೆಯಾಗಿದ್ದಾರೆ.