ವೀರಾಜಪೇಟೆ, ಆ. ೧೦: ವೀರಾಜಪೇಟೆ ತಾಲೂಕು ಬೇಟೋಳಿಯ ರಾಮನಗರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನದ ನಿರ್ಮಾಣ ಸ್ಥಳವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಪರಿಶೀಲಿಸಿದರು.
ಮೂಲಸೌಕರ್ಯ ಕಲ್ಪಿಸುವುದ ರೊಂದಿಗೆ ಗ್ರಾಮಕ್ಕೆ ಅವಶ್ಯಕತೆ ಇರುವ ಸಮುದಾಯ ಭವನಕ್ಕಾಗಿ ಈ ಹಿಂದೆ ಶಾಸಕರಲ್ಲಿ ಗ್ರಾಮಸ್ಥರು ತಮ್ಮ ಅಹವಾಲನ್ನು ಹೇಳಿಕೊಂಡಿದ್ದರು. ಇದರ ಸಲುವಾಗಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ತೆರಳಿದ ಶಾಸಕರು ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಅಧಿಕಾರಿ ಗಳೊಂದಿಗೆ ಚರ್ಚಿಸಿದರು.
ಸ್ಥಳೀಯ ಶಾಲಾ ಆಡಳಿತ ಸಮಿತಿ, ಗ್ರಾಮಸ್ಥರು ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬೆಂಬಲ ನೀಡುತ್ತಿರುವವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರ ವಾದ-ವಿವಾದಗಳನ್ನು ಆಲಿಸಿದ ಪೊನ್ನಣ್ಣ ಅವರು, ಹೆಗ್ಗಳ ಶಾಲೆಯ ಆವರಣದಲ್ಲಿ ಯಾವುದೇ ಅಕ್ರಮ ನಿರ್ಮಾಣ ಕಾರ್ಯ ನಡೆಯುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಶಾಲಾ ಶಿಸ್ತಿಗೆ ಅಡ್ಡಿಯಾಗುವಂತಹ ಯಾವುದೇ ಕೆಲಸಕ್ಕೆ ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಅವರು ಶಾಲೆಗೆ ಸಂಬAಧಿಸಿದ ದಾಖಲೆಯನ್ನು ಶಾಸಕರಿಗೆ ನೀಡಿ ವಿಚಾರವನ್ನು ಮನವರಿಕೆ ಮಾಡಿದರು. ಶಾಸಕರು, ಸಂಬAಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಶಾಲಾ ವಾತಾವರಣದ ಭದ್ರತೆ ಹಾಗೂ ಶಿಸ್ತು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಅನಂತ ಶಂಕರ್, ಸರ್ವೆ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರಾದ ಅಮ್ಮಣಕುಟ್ಟಂಡ ಕಟ್ಟಿ ವಸಂತ, ಪ್ರಮೀಳಾ, ಶಾಂತಿ, ಲತಾ, ರಜಾಕ್ ಹಾಗೂ ಶಾಲಾ ಅಭಿವೃದ್ಧಿ ಸದಸ್ಯರಾದ ರೋಹಿಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.