ನಮ್ಮ ದೇಶದ ಪ್ರತಿಯೊಂದು ಪುಣ್ಯ ಕ್ಷೇತ್ರವೂ ಒಂದೊAದು ದೇವತಾ ಸಾನಿಧ್ಯದ ಮಹಾತ್ಮೆಯಿಂದ ಮೆರೆಯುತ್ತಿವೆ. ಅದರಂತೆ ಮಂತ್ರಾಲಯ ಕ್ಷೇತ್ರವೂ ಮಂತ್ರಸಿದ್ಧಿಯ ಸ್ಥಾನವೇ ಆಗಿದೆ. ಇಲ್ಲಿ ತಮ್ಮ ಪೂರ್ಣ ಸನ್ನಿಧಾನದಿಂದ ದೇದೀಪ್ಯಮಾನರಾಗಿರುವ ಶ್ರೀ ರಾಘವೇಂದ್ರ ಗುರು ಸಾರ್ವಭೌಮರಿಂದ ಈ ಮಂತ್ರಾಲಯ ಕ್ಷೇತ್ರ ಪರಮ ಮಂಗಳಕರವಾಗಿ ಮೆರೆಯುತ್ತಿದೆ.
ಗುರುರಾಯರು ಇಡೀ ಮಧ್ವಕುಲದ ಗುರುಗಳು, ಮೇಲಾಗಿ ಭಾವುಕರ ಗೃಹ ಪಾವನ ಮಾಡುವ ದೇವತೆಗಳು. ಭಕ್ತರ ಮನೆಯಲ್ಲಿ ವೃಂದಾವನ ಅಥವಾ ಭಾವಚಿತ್ರ ರೂಪದಿಂದ ಇದ್ದು ಅವರನ್ನು ಉದ್ದರಿಸುವಂತಹವರು. ಅನೇಕ ವ್ಯಾಧಿಗಳಿಂದ ಬಳಲುವ ದೀನ, ಅನಾಥರು, ರಾಯರ ವೃಂದಾವನವನ್ನೋ ಅಥವಾ ಇವರ ಭಾವಚಿತ್ರವನ್ನೋ ಇಟ್ಟುಕೊಂಡು ಪ್ರದಕ್ಷಿಣೆ, ನಮಸ್ಕಾರಾಧಿ ಸೇವೆಯನ್ನು ಸದ್ಭಕ್ತಿ, ಭಾವನೆಗಳಿಂದ ಸಲ್ಲಿಸುತ್ತಾ ಮಂತ್ರಸ್ತೋತ್ರಗಳನ್ನು ಅತೀ ವಿಶ್ವಾಸದಿಂದ ಪಠಿಸುತ್ತಾ ತಮ್ಮೆಲ್ಲ ಮಹಾ ವಿಪತ್ತುಗಳಿಂದ ಮುಕ್ತರಾಗಿ ಸುಖ-ಸಮೃದ್ಧಿಯಿಂದ ಬಾಳುತ್ತಿದ್ದಾರೆ. ಇದು ಹಗಲಿನಷ್ಟೇ ಸತ್ಯ.
ಸರ್ವ ಜಾತಿ, ಮತ, ಪಂಥಗಳ, ಅಬಾಲವೃದ್ಧ, ಸ್ತಿçÃ-ಪುರುಷರೂ, ಪಂಡಿತ ಪಾಮರರೂ, ಧನಿಕ - ದರಿದ್ರರೂ ಮೊದಲಾದ ಇಹ - ಪರ ಸಾಧನೆಗಳ ಭಕ್ತರು ತಮ್ಮ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇಶದ ವಿವಿಧ ಭಾಗಗಳಿಂದ ಬಂದು ರಾಯರನ್ನು ಧ್ಯಾನ ಮಾಡಿ ಕೃತಾರ್ಥರಾಗುತ್ತಿರುವುದನ್ನು ಎಲ್ಲರೂ ಕಾಣಬಹುದಾಗಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಮೂಲದಲ್ಲಿ ಶಂಕು ಕರ್ಣನೆಂಬ ಸತ್ಯ ಲೋಕದಲ್ಲಿಯ ಒಬ್ಬ ದೇವತೆ. ಬ್ರಹ್ಮ ದೇವರ ಶಾಪದಿಂದ ದೇವತೆ ಭೂಲೋಕದಲ್ಲಿ ಪ್ರಹ್ಲಾದ ರಾಯರಾಗಿ ಅವತರಿಸಿ ಮುಂದೆ ಬಾಹ್ಲಿಕ, ವ್ಯಾಸರಾಯರಾಗಿ ಈಗ ಶ್ರೀ ರಾಘವೇಂದ್ರ ಗುರುಗಳಾಗಿ ಇಂದಿಗೂ ಶಾಶ್ವತವಾಗಿ ವೃಂದಾವನದಲ್ಲಿದ್ದಾರೆ.
ಶ್ರೀ ಗುರುರಾಯರು ಉಡುಪಿ ಕ್ಷೇತ್ರಕ್ಕೆ ಒಮ್ಮೆ ದಯಮಾಡಿಸಿ ಶ್ರೀ ಕೃಷ್ಣನ ದರ್ಶನದಿಂದ ಕೃತಾರ್ಥರಾಗಿ ಅಲ್ಲಿ ತಮ್ಮದೊಂದು ಮಠವನ್ನು ಸ್ಥಾಪಿಸಿದರಂತೆ. ಇದಕ್ಕೆ ಇಂದಿಗೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಒಂದು ಐತಿಹ್ಯವೂ ಇದೆ. ಇದುವೇ ಅಲ್ಲದೆ, ಅಷ್ಟಮಠದ ಶ್ರೀಗಳವರು. ಊಟಕ್ಕೆ ಮುನ್ನ ಆಪೋಶನ ತೆಗೆದುಕೊಳ್ಳುವಾಗ ಇವತ್ತಿಗೂ ‘ಪೂಜ್ಯಾಯ ರಾಘವೇಂದ್ರಾಯ, ಸತ್ಯ ಧರ್ಮ ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೇ’ ಎಂಬ ಸ್ತುತಿಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಪಠಿಸಿ ಊಟಕ್ಕೆ ಕುಳಿತುಕೊಳ್ಳುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಇಂತಹ ಗೌರವವೂ ಈ ಅಷ್ಟಮಠಗಳಿಂದ ಯಾರಿಗೂ ಈವರೆಗೂ ಲಭ್ಯವಾಗಿಲ್ಲ. ಇದರೊಂದಿಗೆ ಕರ್ನಾಟಕದ ಇತರ ಕ್ಷೇತ್ರಗಳಂತೆ ಉಡುಪಿಯಲ್ಲಿಯೂ ಶ್ರೀ ರಾಘವೇಂದ್ರ ಪ್ರಭುಗಳ ವೃಂದಾವನವೂ ಸ್ಥಾಪಿಸಲ್ಪಟ್ಟಿದೆ. ಇಲ್ಲಿ ಪ್ರತಿನಿತ್ಯ ಉತ್ಸವ, ಹಸ್ತೋದಕಾದಿಗಳು ಅತೀ ವಿಜೃಂಭಣೆಯಿAದ ನಡೆಯುತ್ತಿವೆ. ದಿನ ದಿನವೂ ಹೊಸ ಹೊಸ ಭಕ್ತರು ಮಂತ್ರಾಲಯಕ್ಕೆ ಬಂದು ಸೇವೆ ಸಲ್ಲಿಸಿ ತಮ್ಮ ಲೌಕಿಕ ದುಃಖಾದಿಗಳನ್ನು ಪರಿಹರಿಸಿ ಕೊಂಡು ಹೋಗುತ್ತಿದ್ದಾರೆ. ಅಂತೆಯೇ ಈಗಿನ ಕಾಲದಲ್ಲಿ ಸುಜೀವಿಗಳನ್ನು ಉದ್ಧರಿಸಲು ಟೊಂಕಕಟ್ಟಿಕೊAಡು ನಿಂತ ಗುರುಗಳೆಂದರೆ ಮಂತ್ರಾಲಯದ ‘ಶ್ರೀ ರಾಯರೊಬ್ಬರೇ’ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಂತ್ರಾಲಯದಲ್ಲಿ ಪ್ರತಿ ದಿನವೂ ರಾತ್ರಿ ಶ್ರೀ ರಾಯರ ವೃಂದಾವನಕ್ಕೆ ಮಂಗಳಾರತಿ ಮಾಡುವಾಗ ಎಲ್ಲ ೩೨ ಶ್ಲೋಕದ ಸ್ತೋತ್ರವನ್ನು ಅರ್ಚಕರು ಹಾಗೂ ಆ ಕಾಲದಲ್ಲಿ ಅಲ್ಲಿ ನೆರೆದ ಸಕಲ ಭಕ್ತರೂ ಏಕಕಂಠವಾಗಿ ಪಠಿಸುತ್ತಾರೆ. ಇದಾದ ನಂತರ ಮಂಗಳಾಷ್ಟಕವನ್ನೂ ಉಚ್ಚ ಸ್ವರದಲ್ಲಿ ಪಠಿಸಿ ಮಂಗಳಾರತಿ ಮಾಡುವ ಪರಿಪಾಠವು ಇಂದಿಗೂ ಇದೆ. ಇದೇ ಪದ್ಧತಿಯನ್ನು ಶ್ರೀ ರಾಯರ ಸಕಲ ಭಕ್ತರೂ ತಮ್ಮ ತಮ್ಮ ಮನೆಯಲ್ಲಿ ನಿತ್ಯವೂ ಅನುಸರಿ ಸುತ್ತಿರುವುದು ಒಂದು ಹೆಮ್ಮೆ.
ವಿಶ್ವ ಮಾನವರಿಗೆ ಕಲ್ಯಾಣ ಉಂಟು ಮಾಡುವುದಕ್ಕಾಗಿ ಮಂತ್ರಾಲಯದಲ್ಲಿ ದಿವ್ಯವಾದ - ಭವ್ಯವಾದ ಬೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಸಜೀವವಾಗಿ ಕುಳಿತು ಭಕ್ತರ ಕಲ್ಪವೃಕ್ಷ - ಕಾಮಧೇನು, ಚಿಂತಾಮಣಿಯಾಗಿದ್ದಾರೆ. ಫಲ ಹೊಂದುವ ಆಸೆಯಿಂದ ಮಂತ್ರಾಲಯಕ್ಕೆ ಬಂದು ರಾಯರನ್ನು ಅನನ್ಯ ಭಕ್ತಿಯಿಂದ ಸೇವಿಸಿ ನಿರಾಶೆಯಿಂದ ಬರಿಗೈಯಲ್ಲಿ ಹೋಗುವವರು ಯಾರೂ ಇಲ್ಲ. ಬೃಂದಾವನದಲ್ಲಿ ಸಶರೀರವಾಗಿ ಕುಳಿತು ಜಾತಿ, ಮತ, ಬಡವ, ಬಲ್ಲಿದರೆಂಬ ಭೇದವಿಲ್ಲದೆ ಸಮಸ್ತ ಚೇತನರ ಕಲ್ಯಾಣಕ್ಕಾಗಿ ಟೊಂಕಕಟ್ಟಿ ನಿಂತಿರುವ ಮಹಾನ್ ಚೇತನರಾದ ರಾಯರು ನಮ್ಮಂತಹ ಪಾಮರರಿಗೆ ಮೋಕ್ಷ ಫಲವನ್ನು ಕೊಡುತ್ತಿದ್ದಾರೆಂಬುದು ಸತ್ಯ.
ಮಂತ್ರಾಲಯದ ಪರಿಸರದಲ್ಲಿರುವ ಪವಿತ್ರ ಸ್ಥಳಗಳು
ಇಭರಾಮಪುರದ ಶ್ರೀ ಅಪ್ಪಾರವರು: ದೈವಾಂಶಸAಭೂತರಾದ ಅಪ್ಪಾರವರು ಎಂದು ಪ್ರಸಿದ್ಧರಾದ ಇಭರಾಮಪುರದ ಶ್ರೀ ಕೃಷ್ಣಾರ್ಯರು ರಾಯರ ಅಂತರAಗದ ಭಕ್ತರು.
ಕೊಂಡಾಪುರ: ಮಂತ್ರಾಲಯದಿAದ ಎರಡು ಕಿಲೋಮೀಟರ್ ದೂರದಲ್ಲಿರುವ ಕೊಂಡಾಪುರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪರಂಪರೆಯಲ್ಲಿ ಬರುವ ವೈದಿಕರ ಸ್ಮಾರಕವಿದೆ.
ಮಾದವಾರದ ಹಳ್ಳದ ದಂಡೆ: ಮಂತ್ರಾಲಯದಿAದ ಆರು ಕಿ.ಮೀ. ದೂರದಲ್ಲಿರುವ ಮಾದವಾರದ ಹಳ್ಳದ ದಂಡೆಯಲ್ಲಿರುವ ಬಂಡೆ ಮೇಲೆ ರಾಯರು ತಪಸ್ಸು ಮಾಡಿದ ಪುಣ್ಯ ಸ್ಥಳ.
ಪಂಚಮುಖಿ ಕ್ಷೇತ್ರ: ಶ್ರೀ ರಾಘವೇಂದ್ರ ಸ್ವಾಮಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷ ದರ್ಶನವಿತ್ತ ಪ್ರಾಣ ದೇವರ ಸ್ಥಳ.
ಬಿಚ್ಚಾಲೆ: ಪ್ರಕೃತಿ ರಮ್ಯವಾದ ನಯನ ಮನೋಹರವಾದ ಮಂತ್ರಸಿದ್ಧಿಗೆ ಯೋಗ್ಯವಾದ ಈ ಸ್ಥಳದಲ್ಲಿ ರಾಯರು ಚಾತುರ್ಮಾಸ ವೃತವನ್ನು ಆಚರಿಸಿದ್ದರೆಂಬ ಐತಿಹ್ಯವಿದೆ.
ಗೋರ್ಕಲ್ಲು: ಮಂತ್ರಾಲಯದಿAದ ಸುಮಾರು ೪೦ ಕಿ.ಮೀ. ದೂರದಲ್ಲಿ ಶ್ರೀ ಕೊಂಡಾಪುರ: ಮಂತ್ರಾಲಯದಿAದ ಎರಡು ಕಿಲೋಮೀಟರ್ ದೂರದಲ್ಲಿರುವ ಕೊಂಡಾಪುರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪರಂಪರೆಯಲ್ಲಿ ಬರುವ ವೈದಿಕರ ಸ್ಮಾರಕವಿದೆ.
ಮಾದವಾರದ ಹಳ್ಳದ ದಂಡೆ: ಮಂತ್ರಾಲಯದಿAದ ಆರು ಕಿ.ಮೀ. ದೂರದಲ್ಲಿರುವ ಮಾದವಾರದ ಹಳ್ಳದ ದಂಡೆಯಲ್ಲಿರುವ ಬಂಡೆ ಮೇಲೆ ರಾಯರು ತಪಸ್ಸು ಮಾಡಿದ ಪುಣ್ಯ ಸ್ಥಳ.
ಪಂಚಮುಖಿ ಕ್ಷೇತ್ರ: ಶ್ರೀ ರಾಘವೇಂದ್ರ ಸ್ವಾಮಿಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷ ದರ್ಶನವಿತ್ತ ಪ್ರಾಣ ದೇವರ ಸ್ಥಳ.
ಬಿಚ್ಚಾಲೆ: ಪ್ರಕೃತಿ ರಮ್ಯವಾದ ನಯನ ಮನೋಹರವಾದ ಮಂತ್ರಸಿದ್ಧಿಗೆ ಯೋಗ್ಯವಾದ ಈ ಸ್ಥಳದಲ್ಲಿ ರಾಯರು ಚಾತುರ್ಮಾಸ ವೃತವನ್ನು ಆಚರಿಸಿದ್ದರೆಂಬ ಐತಿಹ್ಯವಿದೆ.
ಗೋರ್ಕಲ್ಲು: ಮಂತ್ರಾಲಯದಿAದ ಸುಮಾರು ೪೦ ಕಿ.ಮೀ. ದೂರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯು ಭಕ್ತರ ಉದ್ಧಾರಕ್ಕಾಗಿ ಸ್ವಯಂ ಬಂದು ಕುಳಿತ ಸ್ಥಳ.
ಆದವಾನಿ: ಹರಿದಾಸರುಗಳ ನೆಲೆಬೀಡು. ಇಲ್ಲಿ ಪ್ರಸಿದ್ಧ ಪ್ರಾಣ ದೇವರ ಸನ್ನಿಧಾನವಿದೆ.
ಕಾಮವರ: ಆದವಾನಿಗೆ ಸನಿಹದಲ್ಲಿರುವ ಕಾಮವರದಲ್ಲಿ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿತವಾದ ಮುಖ್ಯ ಪ್ರಾಣನ ಗುಡಿ ಇದೆ.
ನವವೃಂದಾವನ: ಶ್ರೀ ಪದ್ಮನಾಭಾವಿ ಯತಿಗಳ ಪುಣ್ಯ ಸ್ಥಳ. ಇಲ್ಲಿನ ೯ ವೃಂದಾವನಗಳಲ್ಲಿ ಭಕ್ತಿಯಿಂದ ಅರ್ಚನೆ ಮಾಡಿದರೆ ಮೋಕ್ಷ ಸಿಗುವುದೆಂಬ ನಂಬಿಕೆ ಇದೆ.
ಹೀಗೆ ಇನ್ನೂ ಹಲವಾರು ಪ್ರಸಿದ್ಧ ಸ್ಥಳಗಳೂ ಇಲ್ಲಿ ಭಕ್ತರನ್ನು ಸೆಳೆಯುತ್ತಿವೆ.
ಶ್ರೀ ಗುರು ರಾಯರ ಪರಮ ಪವಿತ್ರ ಆರಾದನಾ ದಿನವಾದ ಇಂದು ಜಿಲ್ಲೆಯಾದ್ಯಂತ ಮನೆ - ಮಂದಿರಗಳಲ್ಲಿ ಪೂಜಾ ವಿಧಾನಗಳು ನಡೆಯುತ್ತವೆ.
- ಬೈ.ಶ್ರೀ. ಪ್ರಕಾಶ್, ಮಡಿಕೇರಿ.