ಕಡAಗ: ವಿಜಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಹೋದರ ಸಹೋದರಿಯರ ಬಾಂಧವ್ಯವನ್ನು ಆಚರಿಸುವ ಹಬ್ಬವಾದ ರಕ್ಷಾ ಬಂಧನ ರಾಕಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿ ಸಹೋದರ, ಸಹೋದರಿಯರು ಕೈಗೆ ರಾಕಿ ಕಟ್ಟಿ ಸಂಭ್ರವಿಸಿದರು.ಭಾಗಮAಡಲ: ಶ್ರೀ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಕಚೇರಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ರಕ್ಷಾಬಂಧನ ಕಾರ್ಯಕ್ರಮದ ಹಿನ್ನೆಲೆ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪಾತ್ರದ ಬಗ್ಗೆ ವಿವರವಾಗಿ ಸಂಘದ ಸದಸ್ಯರಾದ ಶ್ರೀನಾಥ್ ತಿಳಿಸಿಕೊಟ್ಟರು. ರಾಷ್ಟಿçÃಯ ಸ್ವಯಂಸೇವಕ ಸಂಘದ ನಿಕಟಪೂರ್ವ ಕಾರ್ಯಕರ್ತರಾದ ಪ್ರಸನ್ನ ಅವರು ಸಂಘದ ಪ್ರಾರ್ಥನೆ ಮತ್ತು ರಕ್ಷಾಬಂಧನದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ನಂತರ ಪರಸ್ಪರ ರಕ್ಷೆ ಕಟ್ಟಿ, ಸಿಹಿ ಹಂಚಿ ಸಂಭ್ರಮಪಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಐಗೂರು: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಸೈಟಿನಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಮಂಜು ಅವರ ನೇತೃತ್ವದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ನಂತರ ಗ್ರಾಮದ ಮನೆ ಮನೆಗೆ ತೆರಳಿ ಎಲ್ಲರ ಕೈಗಳಿಗೆ ರಾಕಿಯನ್ನು ಕಟ್ಟಿ ಸಹೋದರತ್ವವನ್ನು ಬೆಳೆಸಿದರು. ಸೋಮವಾರಪೇಟೆ : ಸಹೋದರತೆಯ ಸಂಕೇತವಾದ ರಕ್ಷಾ ಬಂಧನವನ್ನು ಸೋಮವಾರ ಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಚರಿಸಲಾಯಿತು.
ಮಹಿಳಾ ಮೋರ್ಚಾ ಸದಸ್ಯರು ಪಟ್ಟಣದ ಪೊಲೀಸ್ ಠಾಣೆ ಹಾಗೂ ಪತ್ರಿಕಾ ಭವನಕ್ಕೆ ತೆರಳಿ ಪೊಲೀಸ್ ಸಿಬ್ಬಂದಿಗಳು ಹಾಗೂ ಪತ್ರಕರ್ತರಿಗೆ ರಕ್ಷೆ ಕಟ್ಟುವ ಮೂಲಕ ಶುಭಾಶಯ ಕೋರಿದರು. ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಜಿಲ್ಲಾ ಮೋರ್ಚಾ ಉಪಾಧ್ಯಕ್ಷೆ ಹೆಚ್.ಎನ್. ತಂಗಮ್ಮ, ಮಂಡಲ ಮೋರ್ಚಾ ಪದಾಧಿಕಾರಿಗಳಾದ ಇಂದಿರಾ ಮೋಣಪ್ಪ, ಮೋಹಿನಿ, ವರಲಕ್ಷಿö್ಮà ಸಿದ್ದೇಶ್ವರ್, ರೇಣುಕಾ ವೆಂಕಟೇಶ್, ಸುಮತಿ ಅವರುಗಳು ಇದ್ದರು.ಶನಿವಾರಸಂತೆ: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮ-ಸಡಗರದಿAದ ಆಚರಿಸಲಾಯಿತು. ರಾಷ್ಟಿçÃಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ರಾಕಿ ಕಟ್ಟಿ, ದೇಶಪ್ರೇಮದ ಅರಿವು ಮೂಡಿಸಿದರು.
ನಂತರ ಶಾಲೆಯ ೬ ರಿಂದ ೧೦ ನೇ ತರಗತಿ ವಿದ್ಯಾರ್ಥಿನಿಯರು ಶಿಕ್ಷಕರ ಜತೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್, ಪಿಎಸ್ಐ ಎಚ್.ವೈ. ಚಂದ್ರ ಹಾಗೂ ಸಿಬ್ಬಂದಿಗಳಿಗೆ ರಾಕಿ ಕಟ್ಟಿ, ಸಿಹಿಹಂಚಿ, ಶುಭ ಕೋರಿ, ಸಂಭ್ರಮಿಸಿದರು. ಪೊಲೀಸ್ ಠಾಣೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ಆನಂತರ ವಿದ್ಯಾರ್ಥಿಗಳು ಪೆಟ್ರೋಲ್ ಬಂಕ್, ಸೆಸ್ಕ್ ಕಚೇರಿಗೆ ತೆರಳಿ ಸಿಬ್ಬಂದಿಗಳಿಗೂ ಹಾಗೂ ಆಟೋ ಚಾಲಕರಿಗೂ ರಾಕಿ ಕಟ್ಟಿ, ಸಿಹಿ ಹಂಚಿ ಶುಭ ಕೋರಿದರು.
ಶಾಲೆಯ ಪ್ರಾಂಶುಪಾಲೆ ಸುಜಲಾದೇವಿ, ಮುಖ್ಯಶಿಕ್ಷಕಿ ಎಚ್.ಕೆ. ಕೆಂಚಮ್ಮ, ಶಿಕ್ಷಕರಾದ ಕೆ.ಕೆ. ಯೋಗೇಶ್, ದರ್ಶಿಕ ಹಾಗೂ ವಾಹನ ಚಾಲಕರು ಹಾಜರಿದ್ದರು.
ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಹೋದರ ಸಹೋದರಿಯರ ಬಾಂಧವ್ಯವನ್ನು ಆಚರಿಸುವ ಹಬ್ಬವಾದ ರಕ್ಷಾ ಬಂಧನ ರಾಕಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿ ಸಹೋದರ, ಸಹೋದರಿ ಯರು ಕೈಗೆ ರಾಕಿ ಕಟ್ಟಿ ಸಂಭ್ರಮಿಸಿದರು.ಸುAಟಿಕೊಪ್ಪ : ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಮಾತನಾಡಿ, ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದ್ದಲ್ಲಿ ರಾಮರಾಜ್ಯದ ಕನಸು ನನಸಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ನಾರಾಯಣಗುರು ಬಿಲ್ಲವ ಸೇವಾ ಸಂಘದ ಸಲಹಾ ಸಮಿತಿಯ ಸದಸ್ಯರಾದ ಬಿ.ಬಿ ಮೋನಪ್ಪ ಪೂಜಾರಿ ಪೂಜೆ ಸಲ್ಲಿಸಿದರು.
ನಂತರ ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಶನಿವಾರಸಂತೆ: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರಕ್ಷಾ ಬಂಧನ ಹಬ್ಬವನ್ನು ಭಾರತೀಯ ಸಾಂಸ್ಕೃತಿಕ ಹಾಗೂ ಬಾಂಧವ್ಯದ ಸಂಕೇತ ಮತ್ತು ಶಾಸ್ತೊçÃಕ್ತವಾಗಿ ರಕ್ಷೆ ಕಟ್ಟುವ ಮೂಲಕ ಮತ್ತು ‘ಒಟ್ಟಾಗಿ ಕಲಿಯೋಣ, ಒಟ್ಟಾಗಿ ರಕ್ಷಿಸೋಣ’ ಎಂಬ ಶೀರ್ಷಿಕೆಯಡಿಯಲ್ಲಿ ವಿಶಿಷ್ಟವಾಗಿ ಆಚರಿಸಿ ಸಂಭ್ರಮಪಟ್ಟರು.
ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ರಕ್ಷಾ ಬಂಧನದ ಮಹತ್ವ ಕುರಿತು ಮಾತನಾಡಿ, ಭಾರತವು ಸನಾತನ ಸಂಸ್ಕೃತಿಯ ಪ್ರತೀಕ, ಆದರೆ ಇಂದು ಈ ರೀತಿಯ ಸಂಸ್ಕೃತಿಗಳು ನಶಿಸಿ ಆಡಂಬರದ
ಸಮಿತಿಯ ಸದಸ್ಯರುಗಳು ಪರಸ್ಪರ ರಾಕಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಬಾಲಕೃಷ್ಣ ವಹಿಸಿದ್ದರು. ದೇಯಿ ಬೈದೇತಿ ಮಹಿಳಾ ಸಂಘದ ಅಧ್ಯಕ್ಷ ಮಧು ನಾಗಪ್ಪ ಉಪಸ್ಥಿತರಿದ್ದರು. ಹಲವು ಪಾಶ್ಚಾತ್ಯ ಸಂಸ್ಕೃತಿಯ ಗುಂಗಿನಲ್ಲಿ ನಮ್ಮ ಮೂಲ ಸಂಸ್ಕೃತಿಗಳು ಮೂಲೆಗುಂಪಾಗಿವೆ. ಈ ಕಾರಣದಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಈ ದಿಸೆಯಲ್ಲಿ ಮಕ್ಕಳಲ್ಲಿ ಬಾಂಧವ್ಯದ ಬೆಸುಗೆ ಬೆಳೆಯಲು ರಕ್ಷಾ ಬಂಧನ ಹಬ್ಬವು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಸಹ ಶಿಕ್ಷಕ ಜಾನ್ ಪೌಲ್ ಡಿಸೋಜ ಮಕ್ಕಳಿಗೆ ರಕ್ಷಾ ಬಂಧನದ ಆಚರಣೆ ಕುರಿತು ತಿಳಿಸಿಕೊಟ್ಟರು. ಸಹ ಶಿಕ್ಷಕಿ ಶೀಲಾ ವಿದ್ಯಾರ್ಥಿಗಳಿಗೆ ರಕ್ಷೆ ಕಟ್ಟಿಸಿದರು.
ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಕರ್ಕೆರ, ಜಿಲ್ಲಾ ಸಂಘದ ಸಂಚಾಲಕಿ ಪೂರ್ಣಿಮ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಮಿಲನ್, ಹರೀಶ್ ಸೋಮವಾರಪೇಟೆ ಸೇರಿದಂತೆ ಸಮಿತಿಯ ಸದಸ್ಯರುಗಳು ಹಾಜರಿದ್ದರು.ಮಡಿಕೇರಿ: ಸಹೋದರತ್ವದ ಭಾವವನ್ನು ಹರಡುವ ಮೂಲಕ ಮನುಷ್ಯ ಸಂಬAಧಗಳನ್ನು ಮತ್ತಷ್ಟು ಬಲಪಡಿಸುವ ಸುಂದರವಾದ ಮತ್ತು ಅತ್ಯಂತ ಮಹತ್ವದ ಹಬ್ಬ ‘ರಕ್ಷಾ ಬಂಧನ’ವಾಗಿದೆ ಎಂದು ನಗರದ ಬ್ರಹ್ಮಕುಮಾರಿ ಸಂಸ್ಥೆಯ ಪ್ರಮುಖರಲ್ಲಿ ಬಬ್ಬರಾದ ಧನಲಕ್ಷಿö್ಮ ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಬ್ರಹ್ಮಕುಮಾರಿ ಸಂಸ್ಥೆಯ ಲೈಟ್ ಹೌಸ್ನಲ್ಲಿ ಆಯೋಜಿತ ‘ರಕ್ಷಾ ಬಂಧನ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಾರತದ ಶ್ರೀಮಂತ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸಿದೆ. ಇಲ್ಲಿನ ಸಂಸ್ಕೃತಿಯ ಭಾಗವಾಗಿರುವ ರಕ್ಷಾ ಬಂಧನ ಹಬ್ಬವು ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ಧತೆಯ ಭಾವನೆಗಳನ್ನು ಮೂಡಿಸುವ ಮೂಲಕ, ವಿಶ್ವ ಭ್ರಾತೃತ್ವವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
‘ಬಂಧನ’ವೆ ಎಂದರೆ ಪರಮಾತ್ಮನೊಂದಿಗಿನ ಬಂಧನ ಮತ್ತು ಜನರೊಂದಿಗಿನ ಸೌಹಾರ್ಧ ಸಂಬAಧವೆAದೇ ಅರ್ಥ ಎಂದರು.
ರಕ್ಷಾ ಬಂಧನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಫೀ.ಮಾ.ಕೆಂ.ಎA. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಪ್ರೊ. ರವಿಶಂಕರ್ ಉದ್ಘಾಟಿಸಿ ಮಾತನಾಡಿ, ಬ್ರಹ್ಮಕುಮಾರಿ ಸಂಸ್ಥೆ ಜಾತಿ ಮತ ಪಂಥಗಳ ಭೇದವಿಲ್ಲದೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಎಲ್ಲರನ್ನು ಒಳಗೊಂಡAತೆ ನಡೆಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ರಕ್ಷೆ ಕಟ್ಟಿ ಶುಭ ಹಾರೈಕೆ- ಬ್ರಹ್ಮಕುಮಾರಿ ಸಂಸ್ಥೆಯ ಗಾಯತ್ರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ರಕ್ಷೆ ಕಟ್ಟಿ ಶುಭ ಹಾರೈಸಿ, ಪ್ರಸಾದ ವಿತರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ಸಂಚಾಲಕ ಕೆ.ಎಂ.ಬಿ. ಗಣೇಶ್, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಹಿರಿಯ ಕ್ರೀಡಾಪಟು ಡಾ. ಪುಪ್ಪಾ ಕುಟ್ಟಣ್ಣ, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಪಾಲ್ಗೊಂಡಿದ್ದರು.
ಆಗಸ್ಟ್ ಮಾಸಾಂತ್ಯದವರೆಗೂ ಬ್ರಹ್ಮಕುಮಾರಿ ಸಂಸ್ಥೆಯಿAದ ಕೊಡಗು ಜಿಲ್ಲೆಯಾದ್ಯಂತ ತೆರಳಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಗೆ ರಕ್ಷೆ ಕಟ್ಟುವ ಕಾರ್ಯಕ್ರಮ ಆಯೋಜಿಸಲಾಗಿದೆ.