ವೀರಾಜಪೇಟೆ, ಆ. ೧೦: ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜು ಅರಮೇರಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಎಸ್.ಎಂ.ಎಸ್, ಅರಮೇರಿ ಕಳಂಚೇರಿ ಮಠದ ಅಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಕ್ರೀಡಾಜ್ಯೋತಿಯನ್ನು ಬೆಳಗುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿದರು, ಕ್ರೀಡೆ ಎಂದರೆ ಸ್ಥಳದಲ್ಲಿ ನಡೆಯುವ ಆಟವಲ್ಲ, ಇವು ಮಣ್ಣಿನ ಸ್ಪರ್ಶದ ಅನುಭವ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಸಹಜ ಪರಿಸರದ ಅರಿವು, ಪ್ರಕೃತಿಯ ಜೊತೆಗಿನ ಸಂಬAಧ ಮತ್ತು ಮಕ್ಕಳು ಭವಿಷ್ಯದಲ್ಲಿ ಕೃಷಿಯನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಮತ್ತು ಮಣ್ಣಿನ ಸೊಗಡಿನ ಬಗ್ಗೆ ಅರಿವು ಮೂಡಿಸಿಕೊಂಡು ಕೃಷಿಯನ್ನು ಲಾಭದ ದೃಷ್ಟಿಯಿಂದ ನೋಡುವುದಲ್ಲದೆ, ಒಂದು ಹವ್ಯಾಸವಾಗಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ ಕ್ರೀಡಾಪ್ರೇಮಿ ಹಾಗೂ ರಾಷ್ಟçಮಟ್ಟದ ಅಥ್ಲೇಟಿಕ್ಸ್ ಕ್ರೀಡಾಪಟುವಾಗಿ ಗುರುತಿಸಿಕೊಂಡು, ತಮ್ಮ ಇಳಿ ವಯಸ್ಸಿನಲ್ಲಿಯೂ ಕ್ರೀಡೆಯನ್ನು ಜೀವಾಳವಾಗಿ ಅನುಭವಿಸುತ್ತಿರುವ ಪೊನ್ನಚ್ಚÀನ ಕೆ. ಮಾದಪ್ಪ ಅವರು ಉಪಸ್ಥಿತರಿದ್ದು, ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಹಾಜರಿದ್ದರು.