ಚೆಟ್ಟಳ್ಳಿ, ಆ. ೧೦: ಮರಗೋಡು ಗ್ರಾಮದ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಅವರ "ಡೆಕ್ಸ÷್ಟರಿಟಿ" ಎಂಬ ಜಲವರ್ಣ ಕಲಾಕೃತಿ ಬಲ್ಗೇರಿಯಾದಲ್ಲಿ ನಡೆದ ೪ನೇ ಅಂತರರಾಷ್ಟಿçÃಯ ಜಲವರ್ಣ ಮತ್ತು ಸ್ಪಿರಿಟ್ ಟ್ರಿಯೆನ್ನಿಯಲ್ ವರ್ಣ ೨೦೨೫ರಲ್ಲಿ ಪ್ರದರ್ಶನ ಕಂಡಿತು.
ಜಲವರ್ಣ ಮಾಧ್ಯಮದಲ್ಲಿ ಅತ್ಯುತ್ತಮತೆಯನ್ನು ಪೋಷಿಸುವ ಉದ್ದೇಶದಿಂದ ಆಯೋಜಿಸಲಾಗುವ ಈ ತ್ರೆöÊವಾರ್ಷಿಕ ಜಲವರ್ಣ ಉತ್ಸವಕ್ಕೆ ೩೫೦ ಕಲಾಕೃತಿಗಳನ್ನು ಮಾತ್ರ ಆಯ್ಕೆಯಾಗಿದ್ದು, ಇದರಲ್ಲಿ ರೂಪೇಶ್ ಅವರು ರಚಿಸಿದ ಚಿತ್ರವೂ ಒಂದಾಗಿದೆ.
ಪ್ರದರ್ಶನದ ನಂತರ, ಆಯ್ಕೆಯಾದ ಈ ಎಲ್ಲಾ ಕಲಾಕೃತಿಗಳು, ಬಲ್ಗೇರಿಯಾದಾದ್ಯಂತ ಹತ್ತು ಪ್ರಮುಖ ನಗರಗಳ ಕಲಾ ಗ್ಯಾಲರಿಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನವಾಗಲಿದೆ.
"ಡೆಕ್ಟ÷್ಸರಿಟಿ" ಎಂಬ ಕಲಾಕೃತಿ ಕೊಡಗಿನ ಪ್ರಕೃತಿ ಹಾಗೂ ಅಲ್ಲಿ ದುಡಿಯುವ ತೋಟ ಕಾರ್ಮಿಕರ ಬದುಕಿನ ಆಳವಾದ ಪರಿಚಯವನ್ನು ಮಾಡುತ್ತದೆ. ಈ ಕಲಾಕೃತಿಯು ಕರ್ನಾಟಕ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ “ಮೈಸೂರು ದಸರಾ” ಪ್ರಶಸ್ತಿಯನ್ನು ಗೆದ್ದಿತ್ತು.