ಕೂಡಿಗೆ, ಆ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಮೆಕ್ಕೆಜೋಳ ಫಸಲು ನಾಶವಾಗಿದೆ.

ಹುದುಗೂರು ಗ್ರಾಮದ ಕಾಳೇಗೌಡ ಎಂಬವರಿಗೆ ಸೇರಿದ ಜಮೀನಿಗೆ ಬೆಂಡೆಬೆಟ್ಟದ ಕಡೆಯಿಂದ ಬಂದು ಬೆಳೆಯನ್ನು ಹಾನಿ ಮಾಡಿವೆ. ಸ್ಥಳಕ್ಕೆ ಹುದುಗೂರು ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.