ಸ್ವಾತAತ್ರö್ಯ ಬಂದು ೭೮ ವರ್ಷವೇನೋ ಕಳೆದುಹೋಯಿತು. ಇಷ್ಟು ವರ್ಷಗಳ ಆಡಳಿತದ ಬಗ್ಗೆ ಒಂದು ಅವಲೋಕನ..
ನನಗೆ ಮೊದಲಿಗೆ ಮನದಲ್ಲಿ ಮೂಡಿದ ಜಿಜ್ಞಾಸೆ ಏನೆಂದರೆ ಆಡಳಿತದ ಅವಧಿಯನ್ನು ಅವಲೋಕನ ಮಾಡುವುದು ಹೇಗೆ ಎಂದು. ಇದಕ್ಕೆ ಕಾರಣ ಕಾರ್ಯಾಂಗ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಶಾಸಕಾಂಗದ ಪ್ರಬುದ್ಧತೆ ತುಂಬಾ ಮುಖ್ಯ. ಆದ್ದರಿಂದ ಆಳುವವರು ಪ್ರಬುದ್ಧತೆಯಿಂದ ಕೂಡಿದ್ದರೆ ಆಡಳಿತವು ದಕ್ಷತೆಯಿಂದ ಕೂಡಿರುತ್ತದೆ. ಅದು ಪುರಾಣಕಾಲದಿಂದಲೂ ನಾವು ಆಡಳಿತ ನಡೆಸಿದವರನ್ನು ಮಾದರಿಯಾಗಿ ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ ರಾಮ ರಾಜ್ಯ, ಚಾಣಕ್ಯ ಹೀಗೆ ಅನೇಕ ರಾಜರ, ಮಂತ್ರಿಗಳ ಕುರಿತು ನಾವು ಇತಿಹಾಸದಿಂದ ಕಲಿತಿರುತ್ತೇವೆ. ಅದೇ ರೀತಿಯಲ್ಲಿ ಹಿಟ್ಲರ್, ಮುಸಲೋನಿ, ಕಾಲ್ಮಾರ್ಕ್ಸ್, ಜಾನ್ ಎಫ್ ಕೆನಡಿ ಹೀಗೆ ಹಲವು ನಾಯಕರ ಆಡಳಿತ ನಮ್ಮ ಕಣ್ಣಮುಂದೆ ಬರುತ್ತದೆ. ಅವರುಗಳಲ್ಲಿ ಕೆಲವರು ಜನವಿರೋಧಿ ಆದರೆ, ಕೆಲವರು ಜನಪರ ಆಡಳಿತದಿಂದ ಇತಿಹಾಸದಲ್ಲಿ ಉಳಿದಿದ್ದಾರೆ.
ಇನ್ನು ಭಾರತದ ಆಡಳಿತದ ಒಂದು ವಿಶ್ಲೇಷಣೆ. ಸ್ವಾತಂತ್ರö್ಯ ಬಂದು ೭೮ ವರ್ಷವೇನೋ ಕಳೆದುಹೋಯಿತು. ಇಷ್ಟು ವರ್ಷಗಳ ಆಡಳಿತದಲ್ಲಿ ನಮ್ಮ ನಿರೀಕ್ಷೆ ಹೇಗಿತು,್ತ ಹೇಗಿದೆ, ಹೇಗಾಗಬಹುದು ಎಂದು ಆಡಳಿತವನ್ನು ಮೂರು ಹಂತದಲ್ಲಿ ನಾವು ಅವಲೋಕನ ಮಾಡಬಹುದು. ಹೇಗಿತ್ತು ಅನ್ನುವ ಪ್ರಶ್ನೆ ಇಲ್ಲಿ ಉದ್ಭವವಾದದ್ದು ಏಕೆಂದರೆ ನಾವು ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದೆವು. ಹೇಗಿದೆ ಅನ್ನುವುದನ್ನು ಮುಂದೆ ವಿವರಿಸಿದ್ದೀನಿ. ಬ್ರಿಟಿಷರ ಆಡಳಿತ ಪದ್ಧತಿ ಇಂದಿಗೂ ಮುಂದುವರಿದಿದೆ ಎನ್ನಬಹುದು. ಅಧಿಕಾರಿಗಳ ದರ್ಪ ಇನ್ನು ಹಾಗೆ ಮುಂದುವರಿದಿದೆ. ಹಿರಿಯ ಅಧಿಕಾರಿಗಳು ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುವುದು, ಮನೆ ಕೆಲಸಗಳನ್ನು ಮಾಡಿಸಿಕೊಳ್ಳುವ ಪ್ರವೃತ್ತಿಯ ಕುರಿತು ನೇರವಾಗಿ ಹೇಳಬೇಕೆಂದರೆ ಕಾಲಿಗೆ ಶೂ ತೊಡಿಸುವುದು, ಕುಳಿತುಕೊಳ್ಳುವಾಗ, ಏಳುವಾಗ ಹಿಂದಿನಿAದ ಕುರ್ಚಿ ಇಡುವುದು. ಅದಕ್ಕಿಂತ ದುಃಖಕರ ವಿಷಯವೆಂದರೆ ತಮ್ಮ ಬಟ್ಟೆಗಳನ್ನು ಮನೆಯವರ ಬಟ್ಟೆಗಳನ್ನು, ಒಗೆಸುವುದು. ಅಧಿಕಾರಿಗಳ ಮನೆಯಲ್ಲಿ ತಮ್ಮ ಕೈ ಕೆಳಗಿನ ನೌಕರರರಿಂದ ಖಾಸಗಿ ಕೆಲಸಗಳನ್ನು ಮಾಡಿಸುವಂತಹ ಪ್ರವೃತ್ತಿ ಇಂದಿಗೂ ಚಾಲ್ತಿಯಲ್ಲಿದೆ.
ಕಾರ್ಯಾಂಗದ ಕಾರ್ಯತತ್ಪರತೆಯನ್ನು ಪ್ರಶ್ನಿಸುವ ಹಕ್ಕನ್ನು ನಾವು ಕಳೆದುಕೊಂಡಿದ್ದೇವೆ ಅಥವಾ ಶ್ರೀಸಾಮಾನ್ಯ ವ್ಯವಸ್ಥೆಯಿಂದ ಬೇಸತ್ತು ವ್ಯವಸ್ಥೆಗೇ ಹೊಂದಿಕೊAಡನೋ ಅರ್ಥವಾಗದು. ಸರಕಾರಿ ಇಲಾಖೆಗಳಲ್ಲಿ ಯಾವುದೇ ಕೆಲಸ ಆಗದ ಸಂದರ್ಭದಲ್ಲಿ ಕಚೇರಿ ಒಳಗೆ ಹೋಗಿ ಪ್ರಶ್ನಿಸಿದರೆ ಅದನ್ನು ಕೆಲಸಕ್ಕೆ ಅಡ್ಡಿ, ಕೊಲೆ ಬೆದರಿಕೆ, ಅವಾಚ್ಯ ಪದ ಬಳಕೆ ಇತ್ಯಾದಿ ಸೆಕ್ಷನ್ಗಳನ್ನು ಹಾಕಿ ಸಾರ್ವಜನಿಕರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಹಾಗೂ ಕೆಲವು ಸಂದರ್ಭದಲ್ಲಿ ಜಾತಿಯನ್ನು ಮುಂದಿಟ್ಟು ಬೆದರಿಸುವ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದೇವೆ. ಜಾತಿ ಒಂದೇ ಅಲ್ಲ, ಇನ್ನು ಸ್ತಿçÃಯರು ಅಧಿಕಾರಿಯಾಗಿದ್ದರೆ ಅವರದು ಒಂದೇ ಡೈಲಾಗ್ ನನ್ನ ಮಾನಭಂಗಕ್ಕೆ ಪ್ರಯತ್ನಪಟ್ಟರು ಎಂದು ದೂರು ದಾಖಲಿಸುತ್ತಾರೆ.. ಅಧಿಕಾರದ ಮದ ಹಾಗೆ ಆಡಿಸುತ್ತದೆ.
ಕಾರ್ಯಾಂಗ ವ್ಯವಸ್ಥೆಯಲ್ಲಿ ಸರಳಜೀವನ ನಡೆಸಬೇಕಾದ ಅಧಿಕಾರಿಗಳು ಸರಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ವೈಭವದ ಜೀವನ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಸರಕಾರಿ ಉದ್ಯೋಗದಲ್ಲಿ ಇರುವ ಎಲ್ಲರೂ ಅವರ ಮಕ್ಕಳನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಓದಿಸುವುದು, ಸರಕಾರಿ ಬಂಗಲೆ ಬಿಟ್ಟು ಐಷಾರಾಮಿ ಬಂಗಲೆಗಳಲ್ಲಿ ನೆಲೆಸುವುದು. ತಮ್ಮ ಸರಕಾರಿ ಕಾರ್ಯಕ್ರಮದ ಮೇಲೆ ಪ್ರವಾಸಕ್ಕೆ ಬಂದಾಗ ತಮ್ಮ ಕುಟುಂಬದ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು. ಹೋದಾಗ ಹಿಂದೆ ಸರಕಾರಿ ಅತಿಥಿಗೃಹದಲ್ಲಿ ಉಳಿಯುತ್ತಿದ್ದರು. ನಂತರ ದಿನಗಳಲ್ಲಿ ಅದು ಐಷಾರಾಮಿ ಹೊಟೇಲ್ಗಳಿಗೆ ವರ್ಗಾವಣೆಗೊಂಡಿತ್ತು. ಇತ್ತೀಚಿಗೆ ಅದು ರೆಸಾರ್ಟ್ಗಳಿಗೆ ತಲುಪಿದೆ. ಕನ್ನಡದಲ್ಲಿ ಒಂದು ಗಾದೆ ಇದೆ. ‘ಯಾರಪ್ಪನ ದುಡ್ಡು ಎಲ್ಲಮ್ಮನ ಜಾತ್ರೆ’ ಅಂತ. ಏಕೆಂದರೆ ಇಲ್ಲಿ ಅವರ ಎಲ್ಲಾ ವೆಚ್ಚ ಸರಕಾರದ ಬೊಕ್ಕಸದಿಂದ. ಇಲ್ಲದೆ ಇದ್ದರೆ ಸ್ಥಳೀಯ ಅಧಿಕಾರಿ ಅಥವಾ ನೌಕರರ ಕಿಸೆಯಿಂದ ಹೋಗುವುದು. ತಮ್ಮ ಕುಟುಂಬದ ವ್ಯವಹಾರಕ್ಕೆ ತಮ್ಮ ಕುಟುಂಬದ ವ್ಯಾಪಾರ ವಹಿವಾಟಿಗೆ ಸರ್ಕಾರಿ ವ್ಯವಸ್ಥೆಗಳು, ಸರಕಾರಿ ವಾಹನಗಳು, ಸರಕಾರಿ ಕಿರಿಯ ಅಧಿಕಾರಿಗಳು ಬಳಕೆ ಆಗುತ್ತಿರುವುದು ದುರ್ದೈವ.
ಕಾರ್ಯಾಂಗ ವ್ಯವಸ್ಥೆಯಲ್ಲಿ ಆದಾಯ ಮಿತಿಯ ಒಂದು ಕಾನೂನು ಇರುವುದರಿಂದ ಬೇನಾಮಿ ಹೆಸರುಗಳಲ್ಲಿ ಆಸ್ತಿ ಖರೀದಿ, ಕಪ್ಪು ಹಣ, ಕೆಜಿಗಟ್ಟಲೆ ಚಿನ್ನ ಹೊಂದಿರುವುದನ್ನು ನಾವು ಕಾಣಬಹುದು. ನಮ್ಮ ದುರ್ದೈವವೆಂದರೆ ಕಾನೂನುಕೈಯಿಂದ ಕೂಡ ಅಂತವರು ತಪ್ಪಿಸಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿಗಳಲ್ಲಿ ತೊಂದರೆ ಇರುವುದನ್ನು ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭ ಅವುಗಳಿಗೆ ಪರಿಹಾರ ನೀಡಿ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲೇ ಆ ಆಸ್ತಿಗಳನ್ನು ಪರಭಾರೆ ಮಾಡುತ್ತಿರುವುದು. ಮೊದಲು ದೊಡ್ಡ ದೊಡ್ಡ ನಗರಗಳಲ್ಲಿ ಇದ್ದ ಜಾಲ ಈಗ ಎಲ್ಲೆಡೆ ಕಂಡುಬರುತ್ತಿದೆ.
ಮುAದೆ ಹೇಗಾಗಬಹುದು ಅನ್ನುವುದನ್ನು ಊಹಿಸುವುದು ಅಸಾಧ್ಯ. ಅಷ್ಟು ಹದಗೆಟ್ಟಿದೆ ಪರಿಸ್ಥಿತಿ. ಸ್ವಾತಂತ್ರö್ಯದ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆಬಂತು. ಜನರಿಂದ ಆಯ್ಕೆ ಆದ ಸರ್ಕಾರಗಳು ಆಡಳಿತದ ಮೇಲೆ ಹಿಡಿತವನ್ನು ಸಾಧಿಸುತ್ತಿದ್ದವು. ಹೀಗೆ ಹಿಡಿತ ಸಾಧಿಸಲು ತಮ್ಮ ಮಾತುಕೇಳುವ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ಅಧಿಕಾರ ನಡೆಸುವ ಪ್ರವೃತ್ತಿ ಬೆಳೆಯಿತು. ಅಲ್ಲಿಗೆ ಜಾತಿ, ಹಣ ಎರಡೂ ಕೆಲಸ ಮಾಡಲು ಆರಂಭವಾಯಿತು. ಸರ್ಕಾರಗಳು ಬದಲಾವಣೆ ಆದಾಗಲೆಲ್ಲ ಅಧಿಕಾರಿಗಳು ಬದಲಾವಣೆ ಆಗುವ ಪ್ರವೃತ್ತಿಯನ್ನು ಇಂದಿನವರೆಗೂ ಎಲ್ಲಾ ಪಕ್ಷಗಳು ಪಾಲಿಸಿಕೊಂಡು ಬರುತ್ತಾ ಇವೆ. ಈ ಪ್ರವೃತ್ತಿಯಿಂದ ದಕ್ಷ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಡ್ಡಗಾಲು ಹಾಕಿದಂತೆ. ಒಂದು ದೃಷ್ಟಿಕೋನದಿಂದ ನಾವು ನೋಡಿದಾಗ ಇದು ಸರಿ ಅನ್ನಿಸಿದರೆ, ಇನ್ನೊಂದು ದೃಷ್ಟಿಕೋನದಿಂದ ತಪ್ಪು ಎಂದು ಕಾಣಿಸುತ್ತದೆ. ಶಾಸಕಾಂಗ ಸರಿ ಇದ್ದರೆ ಮೊದಲನೆಯದ್ದು ಸರಿ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಆಡಳಿತ ನಿಯಂತ್ರಣ ಶಾಸಕಾಂಗದ ಕೈಯಲ್ಲಿ ಇರುವುದು ಒಳ್ಳೆಯದು. ಇದರಿಂದ ಶಾಸಕಾಂಗದ ಸೂಚನೆಯಂತೆ ಕೆಲಸ ಕಾರ್ಯಗಳು ನಡೆಯುತ್ತವೆ. ಇದರಿಂದ ಜನಸೇವೆಗೆ ಶಾಸಕಾಂಗದ ಹಿಡಿತವಿರುತ್ತದೆ. ಇಲ್ಲದಿದ್ದರೆ ಅಧಿಕಾರಿಗಳಲ್ಲಿ ಸೇವಾ ಮನೋಭಾವನೆ ಇಲ್ಲದೆ ಇದ್ದರೆ ದರ್ಪ ಮತ್ತು ಭ್ರಷ್ಟತೆ ಹೆಚ್ಚಾಗುತ್ತದೆ. ಇದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅದೇ ರೀತಿಯಲ್ಲಿ ದಕ್ಷ ಅಧಿಕಾರಿಗಳು ಶಾಸಕಾಂಗದ ಅಂದರೆ ಚುನಾಯಿತ ಸರ್ಕಾರದ, ಪ್ರತಿನಿಧಿಯ ಸಂಬAಧಪಟ್ಟ ಇಲಾಖೆಗಳ ಸಚಿವರಗಳ ಮಾತಿಗೆ, ಆದೇಶಕ್ಕೆ, ಶಿಫಾರಸ್ಸುಗಳಿಗೆ ಬೆಲೆಕೊಡದ ನಿಷ್ಠಾವಂತ ಅನೇಕ ಅಧಿಕಾರಿಗಳ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರಗಳು ಕಾರ್ಯತಂತ್ರ ರೂಪಿಸಿದೆ. ಉದಾಹರಣೆಗೆ ಭಾರತದ ಚುನಾವಣಾ ಆಯೋಗವು ಯಾವ ರೀತಿಯಲ್ಲಿ ಕೆಲಸ ಮಾಡಬಹುದು. ಅದರ ಅಧಿಕಾರದ ವ್ಯಾಪ್ತಿಯನ್ನು ಅಧಿಕಾರಿಗಳು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ದೇಶದ ಜನತೆಗೆ ಅಲ್ಲದೆ ಪ್ರಪಂಚಕ್ಕೆ ತೋರಿಸಿಕೊಟ್ಟು ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದು ಟಿ.ಎನ್. ಶೇಷನ್. ಅವರು ಅಧಿಕಾರ ವಹಿಸಿಕೊಂಡ ನಂತರವೇ ದೇಶದ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟು ವರ್ಷಗಳವರೆಗೂ ಚುನಾವಣಾ ಆಯೋಗಕ್ಕೆ ಮೂರು ಸದಸ್ಯರನ್ನು ನೇಮಿಸಲು ಅವಕಾಶವಿದ್ದರೂ ಏಕೆ ಸದಸ್ಯರನ್ನೇ ನೇಮಿಸಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳಿಗೆ ಬಿಸಿಮುಟ್ಟಿಸಿ ಅಧಿಕಾರಿ ಒಬ್ಬರು ಹೇಗೆ ತಮ್ಮ ಅಧಿಕಾರವನ್ನು ಕಾನೂನು ಚೌಕಟ್ಟಿನೊಳಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು ಎಂದು ತೋರಿಸಿ ಇತಿಹಾಸ ನಿರ್ಮಿಸಿದರು. ಅದೇ ರೀತಿಯಲ್ಲಿ ಕೆಲಸ ಮಾಡಿದವರು ಸಾವಿರಾರು ಮಂದಿ ಇದ್ದಾರೆ. ಆದರೆ ಅವರನ್ನು ಕಾರಣ ನೀಡದೆ ವರ್ಗಾವಣೆ ಮಾಡುವುದು, ಬಡ್ತಿ ತಡೆ ಹಿಡಿಯುವುದು, ಕೆಲಸಕ್ಕೆ ಬಾರದ ಇಲಾಖೆಗಳಿಗೆ ಮತ್ತು ದೂರದ ಊರುಗಳಿಗೆ ವರ್ಗಾವಣೆ ಮಾಡುತ್ತಾರೆ. ಧೈರ್ಯ ಇದ್ದವರು ಕೋರ್ಟ್ಗೆ ಹೋಗುತ್ತಾರೆ. ಇನ್ನು ಕೆಲವರು ಸುಮ್ಮನೆ ಇರುತ್ತಾರೆ. ತೀರಾ ಮುಜುಗರ ಅನುಭವಿಸುವವರು ಕೆಲಸಬಿಟ್ಟು ಬಂಡಾಯಪೀಳುತ್ತಾರೆ. ದುರಂತವೇನೆAದರೆ ಇಂತಹ ನಿಷ್ಠಾವಂತ ಅಧಿಕಾರಿಗಳಿಗೆ ಸಾರ್ವಜನಿಕರ ಬೆಂಬಲ ದೊರೆಯುವುದಿಲ್ಲ. ಒಂದು ಗಾದೆ ಇದೆ ‘ಸತ್ತವನ ಮನೆಯಲ್ಲಿ ಯಾರು ಕೆಟ್ಟ' ಅಂದರೆ ಸತ್ತವನೇ ಕೆಟ್ಟ ಅನ್ನುವಂತೆ ಆಡಳಿತದಲ್ಲಿ ಸುಧಾರಣೆ ತರಲು ಹೋಗಿ ಮೂಲೆಗುಂಪಾದವರು ಇತಿಹಾಸದಲ್ಲಿ ಅನೇಕ ಜನರಿದ್ದಾರೆ. ಅವರಲ್ಲಿ ಹಲವರು ಜನರ ಮನದಲ್ಲಿ ಉಳಿದಿದ್ದಾರೆ.
ದೀರ್ಘಕಾಲದ ಹೋರಾಟ, ಸಾವಿರಾರು ಜನರ ಬಲಿದಾನ, ತ್ಯಾಗದ ಫಲವಾಗಿ ಸ್ವಾತಂತ್ರö್ಯವೇನೋ ದೊರೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ಚುನಾಯಿತ ಸರ್ಕಾರಗಳು ಆಡಳಿತ ನಡೆಸಲು ಆರಂಭಗೊAಡರೂ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಯಿತು. ಆಡಳಿತದಲ್ಲಿ ಹೊಸ ಆವಿಷ್ಕಾರ ಬರುವ ನಿರೀಕ್ಷೆ ಇಟ್ಟುಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭದಿAದಲೂ ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕೃತಗೊAಡಿತು. ಈ ವ್ಯವಸ್ಥೆ ರಾಜರ, ಬ್ರಿಟಿಷರ ಆಡಳಿತಕ್ಕಿಂತ ಭಿನ್ನವಾಗಿರಲಿಲ್ಲ. ಹೊಸ ಆಡಳಿತದಲ್ಲಿ ಪಾರದಕ್ಷತೆ ತರಲು ಸ್ಪರ್ಧಾತ್ಮಕ ಪರೀಕ್ಷೆ ವ್ಯವಸ್ಥೆ ಜಾರಿಗೆ ತರಲಾಯಿತು. ಅಂದಿನಿAದ ಇಂದಿನವರೆಗೂ ಆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಲ್ಲಿಯೂ ದೊಡ್ಡ ಹುದ್ದೆಗಳು ಒಳ್ಳೆ ಆಯಕಟ್ಟಿನ ಜಾಗಗಳು ಮೇಲ್ವರ್ಗಕ್ಕೂ ಹಣ ಇರುವವರಿಗೆ ಸೀಮಿತವಾಯಿತು. ಪರಿಣಾಮ ಶ್ರೀಮಂತ ಶ್ರೀಮಂತನಾಗಿ ಉಳಿದ, ಬಡವ ಬಡವರಾಗಿ ಉಳಿದರು. ಅವರಿಗೆ ಕೆಳ ಹಂತದ ಉದ್ಯೋಗ ಮಾತ್ರ ಸೀಮಿತವಾಯಿತು. ಆಡಳಿತದಲ್ಲಿ ಭ್ರಷ್ಟಾಚಾರ ತಡೆಯಲು ಹೊಸ ಹೊಸ ತಂತ್ರಾAಶಗಳನ್ನು ಅಳವಡಿಸಿ ಜನರಿಗೆ ಉತ್ತಮ ಸೇವೆ, ಜೊತೆಗೆ ಆಡಳಿತದಲ್ಲಿ ಚುರುಕುಮುಟ್ಟಿಸಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಎಲ್ಲಾ ಕೆಲಸಗಳನ್ನು ‘ಆನ್ಲೈನ್’ ಮೂಲಕ ಸೇವೆಗಳನ್ನು ಆರಂಭಿಸಿತು. ನೌಕರರಲ್ಲಿ ಸೇವಾ ಮನೋಭಾವದ ಕೊರತೆಯಿಂದ ಜನರಿಗೆ ತೊಂದರೆ ಜಾಸ್ತಿಯಾಯಿತು. ಇಂದು ಸರಕಾರದ ಉದ್ಯೋಗದಲ್ಲಿ ಹಿಂದಿನAತೆ ಸೇವೆ ಎಂಬುದು ಮರೀಚಿಕೆಯಾಗಿದೆ. ಇಂದು ಕೊಟ್ಟು-ತೆಗೆದುಕೊಳ್ಳುವ ವೃತ್ತಿಯಾಗಿ ಪರಿವರ್ತನೆಯಾಗಿದೆ. ಇಂದು ಕೆಲಸಕ್ಕೆ ಸೇರಲು ಅವರಿಗೆ ಬೇಕಾದ ಜಾಗದಲ್ಲಿ ಅವರಿಗೆ ಬೇಕಾದ ಇಲಾಖೆಗಳಲ್ಲಿ ಅಂದರೆ ಆದಾಯವಿರುವ ಸರ್ಕಾರಕ್ಕೆ, ಅವರಿಗೆ ಎಲ್ಲದಕ್ಕೂ ಲಂಚ ಕೊಟ್ಟು ಬರಬೇಕು. ಇನ್ನು ಅವರಿಗೆ ಬೇಕಾದಲ್ಲಿ ಕೆಲಸ ಮಾಡಲು ಬಡ್ತಿ ಪಡೆಯಲು ಎಲ್ಲದಕ್ಕೂ ಹಣ ಕೊಡಬೇಕು. ಹಿಂದೆ ೫೦ ರಿಂದ ೧೦೦ ಕೊಟ್ಟರೆ ಕೆಲಸವಾಗುತ್ತಿತ್ತು. ಆಗ ಮಾರುಕಟ್ಟೆಯಲ್ಲಿ ವಸ್ತುಗಳ ದರ ಪಟ್ಟಿ ಇರುತ್ತಿತ್ತು. ಈಗ ಎಲ್ಲಾ ಇಲಾಖೆಗಳಲ್ಲಿ ಒಂದು ಕೆಲಸಕ್ಕೆ ಇಂತಿಷ್ಟು ಅಂತ ನಿಗದಿ ಆಗಿದೆ. ಕೊಟ್ಟರೆ ಕೆಲಸ, ಅದಕ್ಕೆ ಅಂತ ಮಧ್ಯವರ್ತಿಗಳು ಇರುತ್ತಾರೆ. ಅವರ ಮೂಲಕ ಹೋದರೆ ಕೆಲಸವಾಗುತ್ತದೆ. ನಮ್ಮ ಕೆಲಸಕ್ಕೆ ನಾವು ನೇರವಾಗಿ ಹೋದರೆ ಈ ಜನ್ಮದಲ್ಲಿ ಆ ಕೆಲಸವಾಗುವುದಿಲ್ಲ. ಅಲ್ಲಿಗೆ ತಲುಪಿದೆ ಆಡಳಿತ ವ್ಯವಸ್ಥೆ.
ಒಂದು ಉದಾಹರಣೆ ಗಮನಿಸಿ... ಯಾವುದೇ ಇಲಾಖೆಗೆ ಮನವಿಯನ್ನೋ, ಮಾಹಿತಿಯನ್ನೋ, ಅಭಿಪ್ರಾಯವನ್ನೋ ಬರೆದು ಕಳುಹಿಸುವಾಗ ‘ಗೌರವಾನ್ವಿತರೇ’ ಎಂದು ಆರಂಭಿಸಿ ‘ವಿಶ್ವಾಸಿ’ ಎಂಬ ಪದದಲ್ಲಿ ಪತ್ರ ಮುಕ್ತಾಯ ಮಾಡುತ್ತೇವೆ. ಆದರೆ ಅದಕ್ಕೆ ಇಲಾಖೆಯ ಅಧಿಕಾರಿಗಳಿಂದ ಬರುವ ಉತ್ತರದ ಪತ್ರದ ಒಕ್ಕಣೆ ಈ ರೀತಿ ಇರುತ್ತದೆ. ‘ತಿಳುವಳಿಕೆ ಪತ್ರ’. ‘ಮಾನ್ಯರೆ’ ಎಂಬ ಕನಿಷ್ಟ ಸೌಜನ್ಯ ಇರುವುದಿಲ್ಲ. ಇನ್ನು ಯಾವುದಾದರೂ ಹಣ ಪಾವತಿ, ದಾಖಲಾತಿ ಸಲ್ಲಿಕೆಗಳಿಗೆ ಇಲಾಖೆಗಳು ಕಳುಹಿಸುವ ಪತ್ರಗಳನ್ನು ಓದಿದರೆ ನಾವೇನೋ ಕೊಲೆ ಸುಲಿಗೆಯಂತ ಅಪರಾಧ ಮಾಡಿದವರಂತೆ ಭಾವಸವಾಗುತ್ತದೆ. ‘ಒಂದು ವಾರದೊಳಗೆ ವರದಿ ಸಲ್ಲಿಸತಕ್ಕದ್ದು, ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂಬ ವಾಕ್ಯಗಳಲ್ಲಿ ಜನರನ್ನು ಬೆದರಿಸುವ ರೀತಿಯ ಶಬ್ದ ಪ್ರಯೋಗಗಳು ಇರುತ್ತವೆ. ಜನರ ಸೇವೆಗೆ ಜನರ ತೆರಿಗೆಯಿಂದ ಸಂಬಳ ಪಡೆಯುವ ಕಾರ್ಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಸೌಜನ್ಯಪೂರ್ವಕವಾದ ಮಾತು, ಬರಹ ಮತ್ತು ವರ್ತನೆಯನ್ನು ಬದಲಿಸಿಕೊಳ್ಳುವುದು ಅಗತ್ಯವಾಗಿದೆ.
ಸ್ವಾತಂತ್ರö್ಯ ಪಡೆದುಕೊಳ್ಳುವ ಮೊದಲು ಯಾವ ರೀತಿಯ ಗುಲಾಮಗಿರಿ ಇತ್ತೋ ಅದೇ ಇಂದಿಗೂ ಮುಂದುವರಿದಿದೆ. ಇಂದಿಗೂ ಶ್ರೀಸಾಮಾನ್ಯ ಓರ್ವ ಚುನಾಯಿತ ಪ್ರತಿನಿಧಿ, ಅಧಿಕಾರಿ ಯಾರನ್ನೇ ಆಗಲಿ ನೇರವಾಗಿ ಭೇಟಿಯಾಗುವುದು ಕನಸಲ್ಲಿ ಸಾಧ್ಯವಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ದೇಶದ ಕಟ್ಟಕಡೆಯ ಪ್ರಜೆಯ ಮನೆ ಬಾಗಿಲಿಗೆ ತಲುಪಬೇಕಿತ್ತು. ಆದರೆ ಇಲ್ಲಿ ಶ್ರೀಸಾಮಾನ್ಯ ಅಧಿಕಾರಿಯ ಕಚೇರಿ ಬಾಗಿಲಿನಲ್ಲಿ ಕಾದರೂ ನ್ಯಾಯ ಸಿಗದೇ ಇರುವುದು ದೊಡ್ಡ ದುರಂತ. ಯಾರಿಗೆ ಬಂತು ಯಾತಕೆ ಬಂತು ೪೭ರ ಸ್ವಾತಂತ್ರö್ಯ? ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಹಾಗೆಯೇ ಮುಂದುವರಿಯುತ್ತದೆ ಪರಿಸ್ಥಿತಿ! ಅಷ್ಟು ಹದಗೆಟ್ಟಿದೆ ಆಡಳಿತ! ಆರಂಭದಲ್ಲಿ ಹೇಳಿದಂತೆ ಶಾಸಕಾಂಗದ ಪ್ರಭಾವ ಆಡಳಿತದ ಮೇಲೆ ಬೀರುತ್ತದೆ. ಈಗ ಶಾಸಕಾಂಗ ಸಂಪೂರ್ಣವಾಗಿ ಹಳಿತಪ್ಪಿದೆ. ಆದ್ದರಿಂದ ಕಾರ್ಯಾಂಗ ಕೂಡ ಅದೇ ದಾರಿ ಹಿಡಿದಿದೆ.
-ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು, ಮಡಿಕೇರಿ ಮೊ: ೯೪೪೮೮೯೯೫೫೪