ಪೊನ್ನಂಪೇಟೆ, ಜು. ೧೦: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿರಿ ಎಂಬಲ್ಲಿ ಚಿರಿಯಪಂಡ ಮಣಿ ಉತ್ತಪ್ಪ ಹಾಗೂ ಹ್ಯಾರಿ ತಿಮ್ಮಯ್ಯ ಅವರ ಗದ್ದೆಯಲ್ಲಿ ಗ್ರಾಮ ವಿಕಾಸ್ ವತಿಯಿಂದ
ಗ್ರಾಮ ವಿಕಾಸ್ ಸಂಯೋಜಕರಾದ ಚೆಪ್ಪುಡಿರ ಸುನೀಲ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ೩ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಸಂಭ್ರಮಿಸಿದರು.
ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಜ್ಯೋತಿ ಬೆಳಗುವುದರೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಮಾತನಾಡಿ, ಕಳೆದ ನಾಲ್ಕೆöÊದು ವರ್ಷಗಳಿಂದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಜತೆಗೆ ಪರಸ್ಪರ ಒಗ್ಗಟ್ಟು ಮೂಡಲು ಸಹಕಾರಿಯಾಗಿದೆ ಎಂದರು. ಚಾರಿಮಂಡ ದೇವಯ್ಯ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸಿ ಬೆಳೆಸಲು ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿಯಾಗಿವೆ. ಗ್ರಾಮಸ್ಥರೆಲ್ಲಾ ಒಂದೆಡೆ ಕಲೆತು ಪ್ರಕೃತಿಯ ಹಬ್ಬವನ್ನು ಸವಿಯುತ್ತಿರುವುದು ಶ್ಲಾಘನೀಯ. ಕ್ರೀಡಾಕೂಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು.
ಈ ಸಂದರ್ಭ ಕಿರುಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನಿತಾ, ಕಾರ್ಯದರ್ಶಿ ರಾಧಾ, ಸದಸ್ಯರಾದ ಪೆಮ್ಮಂಡ ಸುಮಿತ್ರ, ಚಿರಿಯಪಂಡ ರೇಖಾ ಕೀರ್ತನ್, ಸುಭಿಕ್ಷಾ, ರಾಘವ, ಚಿರಿಯಪಂಡ ದೇವಯ್ಯ, ಕ್ರೀಡಾಕೂಟ ನಡೆದ ಗದ್ದೆಯ ಮಾಲೀಕ ಮಣಿ ಉತ್ತಪ್ಪ, ಹ್ಯಾರಿ ತಿಮ್ಮಯ್ಯ, ಗ್ರಾಮ ವಿಕಾಸ ಮಂಡಳಿ ಪ್ರಮುಖ ಕಾಕಮಾಡ ಹರೀಶ್, ಗ್ರಾಮ ವಿಕಾಸ ಸಂಯೋಜಕಿ ರಾಣಿ ಪೂವಮ್ಮ, ಗ್ರಾಮದ ಸ್ವಯಂಸೇವಕರು, ಆರ್. ಎಸ್.ಎಸ್ ಕಾರ್ಯಕರ್ತರು, ತೀರ್ಪುಗಾರರಾದ ಪಿ.ಎಸ್. ಸುರೇಶ, ಎ.ಪಿ. ರಾಜೇಶ್, ಪಿ.ಡಿ ಪಾಪು, ನವೀನ್ ಎ.ಆರ್, ಗ್ರಾಮಸ್ಥರಾದ ಚಿರಿಯಪಂಡ ದೇವಯ್ಯ ಇದ್ದರು. ಕ್ರೀಡಾಕೂಟದಲ್ಲಿ ಕಿರಗೂರು ನವೀನ್ ಹಾಗೂ ಚಾರಿಮಂಡ ದೇವಯ್ಯ ಅವರ ಹಾಡು ಹಾಗೂ ಕೊಡವ ವಾಲಗಕ್ಕೆ ಕ್ರೀಡಾಪ್ರೇಮಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸ್ಪರ್ಧೆಯ ವಿಜೇತರು:
ಪುರುಷರ ಹ್ಯಾಂಡ್ ಬಾಲ್‌ನಲ್ಲಿ ಕೆ.ಎಸ್.ಸಿ. ಕಿರಗೂರು ತಂಡ ಪ್ರಥಮ, ಡಾಲ್ಫಿನ್ ತಂಡ ದ್ವಿತೀಯ, ಮಹಿಳೆಯರ ಹ್ಯಾಂಡ್ ಬಾಲ್‌ನಲ್ಲಿ ಕುಟ್ಟಿಚಾತ ಯುವತಿ ಮಂಡಳಿ ಪ್ರಥಮ, ಕೂರ್ಗ್ ಲೆಜೆಂಡ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕುಟ್ಟಿಚಾತ ಯುವತಿ ಮಂಡಳಿ ಪ್ರಥಮ, ಪಂಜಿರಿ ಚಾಮುಂಡಿ ತಂಡ ದ್ವಿತೀಯ, ಪುರುಷರ ಹಗ್ಗಜಗ್ಗಾಟ್ಟ ಸ್ಪರ್ಧೆಯಲ್ಲಿ ವಿನಾಯಕ ಬಳಗ ಪ್ರಥಮ, ಕೆ.ಎಸ್.ಸಿ. ಕಿರಗೂರು ದ್ವಿತೀಯ,
ಮಕ್ಕಳ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹೊನ್ನಿಕೊಪ್ಪಲು ತಂಡ ಪ್ರಥಮ, ಸಾಯಿಶಂಕರ್ ಎ. ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ಮುಕ್ತ ಓಟದ ಸ್ಪರ್ಧೆಯಲ್ಲಿ ಸುಮನ್ ಪ್ರಥಮ, ಹರ್ಷಿತ್ ದ್ವಿತೀಯ, ಮಹಿಳೆಯರ ಕೆಸರು ಗದ್ದೆ ಓಟದ ವಿಭಾಗದಲ್ಲಿ ವಿನ್ಯಾ ಪ್ರಥಮ, ಉಷಾ ದ್ವಿತೀಯ, ೫ ರಿಂದ ೧೦ ವರ್ಷದೊಳಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಗೌತಮ್ ಪ್ರಥಮ, ಧ್ಯಾನ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷ ಪ್ರಥಮ, ಆರಾಧ್ಯ ದ್ವಿತೀಯ, ೧೦ ರಿಂದ ೧೫ ವರ್ಷದೊಳಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಮಹೇಶ್ ಪ್ರಥಮ, ಕೌಶಿಕ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಚಿಂತನಾ ದೇಚಮ್ಮ ಪ್ರಥಮ, ಧರಣಿ ದ್ವಿತೀಯ, ೫ ರಿಂದ ೧೦ ವರ್ಷದೊಳಗಿನ ಕಂಬ ಸುತ್ತಿ ಓಡುವ ಸ್ಪರ್ಧೆ ಬಾಲಕರ ವಿಭಾಗದಲ್ಲಿ ಗೌರವ್ ಪ್ರಥಮ, ಧಮನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷಾ ಪ್ರಥಮ, ಚಿಂತನ ದೇಚಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು. ೧೦ ರಿಂದ ೧೫ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪೊನ್ನಮ್ಮ ಪ್ರಥಮ, ಶ್ರಾವ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.
ಪುಟ್ಟ ಮಕ್ಕಳ ನಿಧಿ ಶೋಧ ಸ್ಪರ್ಧೆಯಲ್ಲಿ ಶಮಂತ್ ಪ್ರಥಮ, ಸ್ವಾಗತ್ ದ್ವಿತೀಯ ಸ್ಥಾನ ಪಡೆದುಕೊಂಡರು.