ಐಗೂರು, ಆ. ೧೦: ಭಾರಿ ಮಳೆಯಿಂದ ಆಟೋ ಮೇಲೆ ಮರ ಬಿದ್ದು ಗಾಯಗೊಂಡಿದ್ದ ಆಟೋ ಚಾಲಕ ಹಾಗೂ ಪ್ರಯಾಣಿಕ ಯುವತಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಲಾ ರೂ. ೨೫ ಸಾವಿರ ವೈಯಕ್ತಿಕ ನೆರವು ನೀಡಿದ್ದಾರೆ. ಇತ್ತೀಚೆಗೆ ಕುಂಬೂರಿನ ಆಟೋ ಚಾಲಕ ಪ್ರವೀಣ್ ಅವರು ಗಾನವಿ ಎಂಬವರನ್ನು ಆಟೋದಲ್ಲಿ ಕಿರಗಂದೂರಿಗೆ ಕರೆದುಕೊಂಡು ತೆರಳುತ್ತಿದ್ದ ಸಂದರ್ಭ ಆಟೋ ಮೇಲೆ ಮರ ಬಿದ್ದು, ಇಬ್ಬರು ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶಾಸಕ ಡಾ. ಮಂತರ್ ಗೌಡ ಅವರು ಸ್ಪಂದಿಸಿ ಇಬ್ಬರ ಚಿಕಿತ್ಸೆಗೆ ತಲಾ ರೂ. ೨೫ ಸಾವಿರ ಹಣವನ್ನು ವೈಯಕ್ತಿಕವಾಗಿ ನೀಡಿದ್ದು, ಈ ಹಣವನ್ನು ಶಾಸಕರ ಆಪ್ತ ಸಹಾಯಕ ಪಿ.ಎ ಕಿರಣ್ ಮತ್ತು ಕೆ.ಡಿ.ಪಿ. ಸದಸ್ಯೆ ಸಬಿತಾ ಚೆನ್ನಕೇಶವ ಕುಂಬೂರಿನಲ್ಲಿ ಹಸ್ತಾಂತರಿಸಿದರು. ಈ ಸಂದರ್ಭ ರೂಪಾ ದಾಮೋದರ ಮತ್ತು ಅನಿತಾ ರಮಾನಂದ ಉಪಸ್ಥಿತರಿದ್ದರು.