ಗೋಣಿಕೊಪ್ಪಲು.ಜು. ೩೦: ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ರೋರ‍್ಯಾಕ್ಟ್ ಕ್ಲಬ್‌ಅನ್ನು ಅನುಷ್ಠಾನಕ್ಕೆ ತರಲಾಯಿತು. ನೂತನ ಅಧ್ಯಕ್ಷರಾಗಿ ಜಶ್ವಿನ್ ಕಾರ್ಯದರ್ಶಿಯಾಗಿ ದಿಯಲ್ ದೇಚಮ್ಮ ಹಾಗೂ ಸಂಚಾಲಕರಾಗಿ ಎ. ಜಿ. ಯಶಸ್ವಿನಿ ಆಯ್ಕೆಗೊಂಡರು. ನೂತನ ಪದಾಧಿಕಾರಿಗಳಿಗೆ ಗೋಣಿಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಪಿ. ಆರ್. ವಿಜಯ್ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ೩೪ ವಿದ್ಯಾರ್ಥಿಗಳು ರೋರ‍್ಯಾಕ್ಟ್ ಕ್ಲಬ್‌ನ ಸದಸ್ಯರಾಗಿ ನೇಮಕಗೊಂಡರು. ಕಾರ್ಯ ಕ್ರಮವನ್ನು ಉದ್ಘಾಟಿಸಿದ ಗೋಣಿಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಪಿ. ಆರ್. ವಿಜಯ್ ಶಾಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಸಲುವಾಗಿ ರೋಟರಿ ಕ್ಲಬ್ ಪ್ರತಿ ಶಾಲೆಗಳಲ್ಲಿ ರೋರ‍್ಯಾಕ್ಟ್ ಕ್ಲಬ್‌ಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ವಾರ್ಷಿಕವಾಗಿ ವಿದ್ಯಾರ್ಥಿಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತ ರೋಟರಿ ಕ್ಲಬ್ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಸೂಸಲು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಸಿಸ್ಟೆಂಟ್ ಗವರ್ನರ್ ದಿಲನ್ ಚಂಗಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಮೋದ್ ಕಾಮತ್, ರೋಟೇರಿಯನ್‌ಗಳಾದ ಡಾ. ಚಂದ್ರಶೇಖರ್, ಕೆ.ಎಂ. ಕಾವೇರಪ್ಪ, ಕು.ಶುಭಾಶ್, ಜಮುನಾ, ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾ ಯರು, ಹಿರಿಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಆರಂಭದಲ್ಲಿ ಸಂಸ್ಥೆಯ ಶಿಕ್ಷಕಿ ನಿರೀಕ್ಷಾ ಸ್ವಾಗತಿಸಿ, ರೇಷ್ಮಾ ನಿರೂಪಿಸಿ, ಭವಾನಿ ವಂದಿಸಿದರು.