ಮಡಿಕೇರಿ, ಜು. ೨೨: ಕೆಲವು ಸಹಕಾರ ಸಂಘಗಳು ಮಾರ್ಚ್ ೨೦೨೫ ರ ಅಂತ್ಯಕ್ಕೆ ಸ್ಥಗಿತಗೊಂಡಿರುತ್ತವೆ. ಈ ಸಂಘÀಗಳನ್ನು ಪುನಃಶ್ಚೇತನ/ ಸಮಾಪನಗೊಳಿಸಲೂ ಅವಕಾಶವಿರುತ್ತದೆ. ಈ ಸಂಬAಧ ಸಂಘವನ್ನು ಪುನಃಶ್ಚೇತನಗೊಳಿಸಲು ಆಸಕ್ತಿವುಳ್ಳವರು ೧೦ ದಿನದೊಳಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಂಪರ್ಕಿಸಬಹುದು ಮತ್ತು ಲಿಖಿತವಾಗಿ ಅಹವಾಲು ಸಲ್ಲಿಸಬಹುದು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ಉಪ ನಿಬಂಧಕ ರವಿಕುಮಾರ್ ತಿಳಿಸಿದ್ದಾರೆ.

ಸ್ಥಗಿತಗೊಂಡ ಸಹಕಾರ ಸಂಘಗಳ ವಿವರ : ಮಡಿಕೇರಿ ಪುರಸಭಾ ನೌಕರರ ಪತ್ತಿನ ಸಹಕಾರ ಸಂಘ, ಅರವತೋಕ್ಲು ಸಹಕಾರ ಧವಸ ಭಂಡಾರ ನಿ. ಬೆಟ್ಟಗೇರಿ, ಕೊಡಗು ಕಾವೇರಿ ಕೋಳಿ ಸಾಕಾಣಿದಾರರ ಸಹಕಾರ ಸಂಘ, ಕಗ್ಗೋಡ್ಲು ಹಾಲು ಉತ್ಪಾದಕರ ಸಹಕಾರ ಸಂಘ, ಕುಯ್ಯಮುಡಿ ಸಹಕಾರ ಧವಸ ಭಂಡಾರ ನಿ., ಮಡಿಕೇರಿ ಕೇಂದ್ರ ಹೈಸೂಲ್ಕ್ ವಿದ್ಯಾರ್ಥಿಗಳ ಸಹಕಾರ ಸಂಘ, ಕೊಡಗು ಜಿಲ್ಲಾ ಹಂದಿ ಸಾಕಾಣಿದಾರರ ಸಹಕಾರ ಸಂಘ, ಕೊಡಗು ಮಹಿಳಾ ವಿವಿದ್ದೋದೇಶ ಸಹಕಾರ ಸಂಘ, ಸಹಕಾರ ಧವಸ ಭಂಡಾರ ಕಡಿಯತ್ತೂರು, ಕಾಂತೂರು ಮುರ್ನಾಡು ಸಹಕಾರ ಧವಸ ಭಂಡಾರ ಮುರ್ನಾಡು, ದೊಡ್ಡಳ್ಳಿ ಮಹಿಳಾ ವಿವಿದ್ದೋದೇಶ ಸಹಕಾರ ಸಂಘ ದೊಡ್ಡಳ್ಳಿ, ಒಡೆಯನಪುರ ಹಾಲು ಉತ್ಪಾದಕರ ಸಹಕಾರ ಸಂಘ ಅಬ್ಬೂರು ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ, ಬಿದಿರು ಕೈಗಾರಿಕಾ ಸಹಕಾರ ಸಂಘ ಗುಡ್ಡೆಹೊಸೂರು, ಕೈಮಗ್ಗ ಮತ್ತು ವಿದುತ್ಯ್ ಮಗ್ಗ ನೇಕಾರರ ಹಾಗೂ ಸಿದ್ದ ಉಡುಪು ಉತ್ಪಾದನಾ ಮಾರಾಟ ಸಹಕಾರ ಸಂಘ ಪೊನ್ನಂಪೇಟೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.