ಸೋಮವಾರಪೇಟೆ, ಜು. ೨೨: ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಯಾಗಿರುವ ಸೂರ್ಲಬ್ಬಿಯಲ್ಲಿ ಅತೀ ಶೀತಕ್ಕೆ ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೂರ್ಲಬ್ಬಿ ಗ್ರಾಮ ನಿವಾಸಿ ಜಯಂತಿ ಮನು ಅವರಿಗೆ ಸೇರಿದ ಹಸುಗಳನ್ನು ಮೇಯಲು ಬಿಟ್ಟಿದ್ದ ಸಂದರ್ಭ ಅತೀ ಶೀತದಿಂದಾಗಿ ಎರಡೂ ಹಸುಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಪಶು ವೈದ್ಯಕೀಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರ್ಕಾರದಿಂದ ಪರಿಹಾರ ಕೋರಿ ಜಯಂತಿ ಅವರು ಮನವಿ ಸಲ್ಲಿಸಿದ್ದಾರೆ.