ಮಡಿಕೇರಿ, ಜು. ೨೧ : ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಲಸೆ ಕಾರ್ಮಿಕರಿಂದ ಒಂದಲ್ಲ ಒಂದು ಸಮಸ್ಯೆಗಳು ಉಲ್ಬಣವಾಗುತ್ತಿದ್ದು ಈಗ ಮತ್ತೊಂದು ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಉತ್ತರ ಭಾರತದ ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಕಂಡ್, ಬಿಹಾರ ಹಾಗೂ ಉತ್ತರಪ್ರದೇಶದಿಂದ ಕೆಲಸ ನಿಮಿತ್ತ ಜಿಲ್ಲೆಗೆ ಬಂದಿರುವ ವಲಸಿಗರು ದಿನ ಹೋದಂತೆಲ್ಲ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಮಲೆನಾಡಿಗೆ ಮಾರಕವಾಗುತ್ತಿರುವುದು ಜೊತೆಗೆ ಈಗ ಇನ್ನೊಂದಿಷ್ಟು ಅಪಾಯಕಾರಿ ಚಟುವಟಿಕೆಗಳಿಗೂ ಕೈ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಇದು ಭವಿಷ್ಯದಲ್ಲಿ ಕಾವೇರಿ ಮಣ್ಣಿಗೆ ಕಂಟಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಅಭಿಪ್ರಾಯಗಳು ಜನವಲಯದಲ್ಲಿ ಕೇಳಿಬರುತ್ತಿದೆ. ಕೊಡಗಿನ ತೋಟವೊಂದರಲ್ಲಿ ಟಿಂಬರ್ ಮರಗಳನ್ನು ಉತ್ತರ ಭಾರತದ ಗುತ್ತಿಗೆದಾರನಿಗೆ ನೀಡಬೇಕೆಂದು ರೈಟರ್ ಮೂಲಕ ತಾಕೀತು ಹಾಕಿರುವುದು ಕೂಡ ಬೆಳಕಿಗೆ ಬಂದಿದೆ. ಅಲ್ಲದೆ ವ್ಯವಹಾರಕ್ಕಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ವಲಸಿಗರ ಸೋಗಿನಲ್ಲಿ ಬಾಂಗ್ಲಾ ಪ್ರಜೆಗಳು ಬಂದಿರುವುದನ್ನು ವಲಸೆ ಕಾರ್ಮಿಕರೇ ಹೇಳಿಕೊಂಡಿದ್ದಾರೆ. ಅಸ್ಸಾಂ ಹಾಗೂ ಬಾಂಗ್ಲಾ ಭಾಷೆಗಳು ವ್ಯತ್ಯಾಸವಿದ್ದು ಹಲವಾರು ಮಂದಿ ಬಾಂಗ್ಲಾ ಪ್ರಜೆಗಳು ಮಲೆನಾಡಿನಲ್ಲಿ ನೆಲೆಯೂರಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್

ಕೊಡಗಿನ ಬಹುತೇಕ ಕಡೆ ವಲಸಿಗರಿಗೆ ಕೆಲವು ತೋಟದ ಮಾಲೀಕರೇ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಲು ಸಹಕರಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮ, ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಲಸೆ ಕಾರ್ಮಿಕರಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ. ಮಾಹಿತಿಯ ಪ್ರಕಾರ ಒಟ್ಟು ೪೦ಕ್ಕೂ ಹೆಚ್ಚು ಆಧಾರ್ ಕಾರ್ಡ್ಗಳನ್ನು ವಲಸಿಗರು ಮಾಡಿಕೊಂಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಗಳಿAದ ನಿರಾÀಪೇಕ್ಷಣಾ ಮತ್ತು ವಾಸ ದೃಢೀಕರಣ ಪತ್ರ ಪಡೆದು ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿಯಿದ್ದು ಆಧಾರ್ ಜಾಲಕ್ಕೆ ಸ್ಥಳೀಯರೇ ಸಹಕಾರ ನೀಡುತ್ತಿರುವುದು ಕಂಡು ಬಂದಿರುವುದು ಖೇದಕರ. ಆಧಾರ್ ಕಾರ್ಡ್ಗಳಿಗೆ ನಮೂದಿಸುವ ಮೊಬೈಲ್ ಸಂಖ್ಯೆಗಳಲ್ಲಿ ಬಹುತೇಕ ಸಂಖ್ಯೆಗಳು ಈಗ ನಿಷ್ಕಿçಯ.

ಮಡಿಕೇರಿ, ಕುಶಾಲನಗರದಲ್ಲಿ ವಲಸಿಗರಿಗೆ ಆಧಾರ್ ಕಾರ್ಡ್

ನಕಲಿ ದಾ ಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡುವ ಜಾಲ ಮಡಿಕೇರಿ, ಕುಶಾಲನಗರ ಹಾಗೂ ಪೊನ್ನಂಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ವಲಸಿಗರ ಮಾಹಿತಿಯಂತೆ ಮಡಿಕೇರಿಯ ಸೈಬರ್ ಸೆಂಟರ್ ಒಂದರಲ್ಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡುವ ಜಾಲವೊಂದು ಸಕ್ರಿಯವಾಗಿದ್ದು ಕೆಲವು ಗ್ರಾಮಗಳಿಂದ ಪಂಚಾಯಿತಿ ಹಾಗೂ ಕೆಲ ಪಕ್ಷಗಳ ಸ್ಥಳೀಯ ಮುಖಂಡರು ಮತ್ತು ಯುವಕರು ಗೌಪ್ಯವಾಗಿ ಈ ಜಾಲದೊಳಗೆ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಭಾವೀ ಸ್ಥಳೀಯರಿಂದ ವಲಸಿಗರ ರಕ್ಷಣೆಯ ಆರೋಪ ಕೇಳಿಬರುತ್ತಿದೆ.

ಕೊಡಗಿನ ತೋಟಗಳ ಬಗ್ಗೆ ರಹಸ್ಯ ಸಭೆ !

ಕೊಡಗಿನಲ್ಲಿರುವ ಕಾಫಿ ತೋಟಗಳ ಬಗ್ಗೆ ಸವಿಸ್ತಾರ ಚರ್ಚೆಗಳು ಈಗ ವಲಸಿಗರ ವಾಟ್ಸಾಪ್ ಗ್ರೂಪ್ Àಳಲ್ಲಿ ನಿರಂತರ ನಡೆಯುತ್ತಿದೆ. ಯಾವ ಎಸ್ಟೇಟ್, ಯಾರು ರೈಟರ್, ಯಾರು ಮಾಲೀಕರು, ಎಷ್ಟು ಎಕರೆ, ಏನು ಸಂಬಳ, ಹೇಗೆ ಪಾವತಿ, ಉಳಿದ ಕಾರ್ಮಿಕರು ಯಾರು, ಅಲ್ಲಿನ ಸೌಲಭ್ಯವೇನು, ಸಂಬಳವೆಷ್ಟು, ತೋಟದಲ್ಲಿ ಇತರರು ಎಷ್ಟು ಜನರಿದ್ದಾರೆ, ಎಂಬಿತ್ಯಾದಿ ವಿಚಾರಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಕಾಫಿ ತೋಟದಲ್ಲಿ ಕೆಲಸಕ್ಕಿರುವ ವಲಸೆ ಕಾರ್ಮಿಕರಿಗೆ ನಾಯಕ ಅನ್ನಿಸಿಕೊಂಡವರು ತನ್ನ ವಾಟ್ಸಾಪ್ ಮೂಲಕ ಅವರೇ ರಚಿಸಿರುವ ಬಳಗಗಳಲ್ಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ ಸಂತೆಗಳಲ್ಲಿ ಉತ್ತರ ಭಾರತೀಯರ ಬಳಿಯೇ ಸಾಮಗ್ರಿ ಖರೀದಿಸುವಂತೆ ಬಳಗದಲ್ಲಿ ಸೂಚಿಸಲಾಗುತ್ತದೆ. ಬಳಗದಲ್ಲಿ ಚರ್ಚೆಯಾದ ವಿಷಯಗಳನ್ನು ತೋಟದದಲ್ಲಿರುವ

(ಮೊದಲ ಪುಟದಿಂದ) ಕಾರ್ಮಿಕರಿಗೆ ಅವರ ನಾಯಕ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳುತ್ತಾನೆ. ಇಲ್ಲಿ ಹಿಂದೂ ಮುಸ್ಲಿಂ ಅನ್ನುವ ಪ್ರಶ್ನೆ ಅವರಿಗಿಲ್ಲ ಒಟ್ಟಾರೆ ಉತ್ತರ ಭಾರತೀಯರಾಗಿ ಇರಬೇಕೆಂಬ ಕಟ್ಟಾಜ್ಞೆಯೂ ಇದೆ.

ಮಲೆನಾಡಿನ ಎಲ್ಲಾ ಎಸ್ಟೇಟ್‌ಗಳ ಬಗ್ಗೆಯೂ ಮಾಹಿತಿ.

ಮಲೆನಾಡು ಭಾಗದಲ್ಲಿರುವ ನೂರಾರು ಕಾಫಿ ತೋಟಗಳ ಸಂಪೂರ್ಣ ಮಾಹಿತಿ ಇವರ ಬಳಿಯಿದೆ. ಯಾವ ಎಸ್ಟೇಟ್‌ನಲ್ಲಿ ಎಷ್ಟು ಸಂಬಳ, ಒಂದು ಕೆಜಿ ಕಾಫಿಗೆ ಎಷ್ಟು ನೀಡುತ್ತಾರೆ, ಕರಿಮೆಣಸು ಕೀಳಲು ಎಷ್ಟು ಸಂಬಳ ನೀಡುತ್ತಾರೆ ಅಥವಾ ಒಂದು ಕೆಜಿ ಗೆ ಎಷ್ಟು ನೀಡುತ್ತಾರೆ ಎಂಬ ಮಾಹಿತಿಯನ್ನು ಹಂಚಿಕೊAಡ ಬಳಿಕ ಅಡ್ಮಿನ್ ಗಳು ದರ ನಿಗದಿಪಡಿಸುತ್ತಾರೆ. ಬಳಗದಲ್ಲಿ ನಿಗದಿಯಾದ ದರವನ್ನೇ ನೀಡುವಂತೆ ತೋಟದ ಮಾಲೀಕರಿಗೆ ರೈಟರ್ ಅಥವಾ ವ್ಯವಸ್ಥಾಪಕರ ಮೂಲಕ ಒತ್ತಡ ಹೇರಲಾಗುತ್ತದೆ. ಕೇಳಿದ ಕೂಲಿ ನೀಡದೆ ಹೋದಲ್ಲಿ ತಕ್ಷಣ ಆ ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಸ್ಥಳಾಂತರ ಮಾಡಲೆಂದೇ ಒಂದು ತಂಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುತ್ತದೆ. ಬೇರೆ ಬೇರೆ ಮಾಲೀಕರ ಸಂಪರ್ಕದಲ್ಲಿರುವ ಅಸ್ಸಾಂ ಕಾರ್ಮಿಕ ಮುಖಂಡರು ಯಾವ ತೋಟಕ್ಕೆ ಎಷ್ಟು ಜನ ಬೇಕೆಂದು ಕೇಳಿ ಅಲ್ಲಿ ತಂದು ಬಿಡುತ್ತಾರೆ. ಮೊದಲೇ ಕೊಡಗಿನಲ್ಲಿ ಕಾರ್ಮಿಕರ ಕೊರತೆಯನ್ನು ಅರಿತಿರುವ ವಲಸೆ ಕಾರ್ಮಿಕರು ಅದಕ್ಕೆ ಸರಿಯಾಗಿ ಇಲ್ಲಿನ ತೋಟದ ಮಾಲೀಕರನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಳ್ಳುತ್ತಿರುವುದರಲ್ಲಿ ಎರಡು ಮಾತಿಲ್ಲ.

ಅಪರಾಧಗಳು

ವಲಸೆ ಕಾರ್ಮಿಕರು ಜಿಲ್ಲೆಯಲ್ಲಿ ಗೋಹತ್ಯೆ ಮಾಡಿರುವ ಅನೇಕ ಪ್ರಕರಣಗಳು ಪೊಲೀಸ್ ದಾಖಲೆಯಲ್ಲಿವೆ. ತೋಟ ಮಾಲೀಕರ ಮೇಲೆ ಹಲ್ಲೆ, ದರೋಡೆ, ಅಮಾಯಕರ ಕೊಲೆ ಯತ್ನದ ಮೊಕದ್ದಮೆಗಳೂ ವರದಿಯಾಗಿದೆ. ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿರುವ ತೋಟ ಮಾಲೀಕರು ಇವರುಗಳನ್ನು ಆಶ್ರಯಿಸಬೇಕಾದುದೂ ಅಗತ್ಯವಾಗಿದೆ.

ಅಸ್ಸಾಂ ಕಾರ್ಮಿಕರ ಯೂನಿಯನ್

ಕೊಡಗಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಅನಧಿಕೃತ ಗೌಪ್ಯ ಯೂನಿಯನ್ ಕೂಡ ರಚನೆಯಾಗಿದೆ. ವಾರಾಂತ್ಯ ಅಥವಾ ಸಂತೆ ದಿನಗಳಲ್ಲಿ ಒಟ್ಟು ಸೇರುವ ಈ ಸದಸ್ಯರು ತಮ್ಮ ಕಾರ್ಮಿಕ ಸದಸ್ಯರ ಮತ್ತು ತೋಟದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಅಲ್ಲಿನ ಸಮಸ್ಯೆಗಳನ್ನು ಕೇಳಿಕೊಂಡು ಅದಕ್ಕೆ ಪೂರಕವಾಗಿ ಹೇಗೆ ಸೌಲಭ್ಯ ಪಡೆಯಬೇಕೆಂಬ ಬಗ್ಗೆಯೂ ಚರ್ಚೆಗಳು ನಡೆದು ಅದನ್ನು ಕಾರ್ಯರೂಪಕ್ಕೆ ತರಲು ಪ್ಲಾನ್ ಕೂಡ ಇಲ್ಲಿ ಮಾಡಲಾಗುತ್ತದೆ. ಅದಲ್ಲದೆ ಸ್ಥಳೀಯ ಸಂತೆಗಳಲ್ಲಿ ವ್ಯಾಪಾರ ನಡೆಸಲು ಇಲ್ಲಿನ ಸ್ಥಳೀಯ ಮುಖಂಡರ ಮೂಲಕ ಅನುಮತಿ ಕೊಡಿಸಿ ಸಂತೆಗೆ ‘ಎಂಟ್ರಿ’ ಕೊಡಲಾಗುತ್ತದೆ. ಸಂತೆಗಳಲ್ಲಿ ತಮ್ಮವರು ತಮ್ಮ ಬಳಿಯೇ ವ್ಯಾಪಾರ ಮಾಡಬೇಕು ಎಂಬ ಕಡ್ಡಾಯ ನಿಯಮವೂ ಅವರಲ್ಲಿದೆ.

ತೋಟದ ಹೆಣ್ಣು ಮಕ್ಕಳಿಗೂ ಕಿರುಕುಳ

ಕೊಡಗಿನ ಕಾಫಿ ತೋಟದಲ್ಲಿರುವ ಬಹುತೇಕ ಕಾರ್ಮಿಕರಲ್ಲಿ ಬುಡಕಟ್ಟು ಸಮುದಾಯದ ಕಾರ್ಮಿಕರಿದ್ದು ಅವರಿಗೆ ವಲಸೆ ಕಾರ್ಮಿಕರಿಂದ ನಿರಂತರ ಕಿರುಕುಳವಾಗುತ್ತಿರುವ ಬಗ್ಗೆ ಹಲವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳು ಓಡಾಡುವಾಗ ತಿಳಿಯದ ಹಿಂದಿ ಅಥವಾ ಅವರ ಭಾಷೆಗಳಲ್ಲಿ ಅಶ್ಲೀಲವಾಗಿ ಚುಡಾಯಿಸುವುದು ಈಗ ಸರ್ವೇ ಸಾಮಾನ್ಯವಾಗಿದೆ! ಶಾಲಾ ಮಕ್ಕಳಿಗೂ ಇವರಿಂದ ಮಾನಸಿಕ ಕಿರುಕುಳ ತಪ್ಪಿಲ್ಲ ಎಂಬುದು ಕೂಡ ಆದಿವಾಸಿಗಳ ನೋವು. ದೈಹಿಕ ಕಿರುಕುಳವೂ ನಡೆಯುತ್ತಿದ್ದು ಹೆದರಿ ಹೇಳ ಲಾಗದ ಪರಿಸ್ಥಿತಿಯಲ್ಲಿ ಇಂದು ಆದಿವಾಸಿ ಮತ್ತು ಹಿಂದುಳಿದ ಬುಡಕಟ್ಟು ಸಮುದಾಯದ ಕಾರ್ಮಿಕರು ಇದ್ದಾರೆ.

ಸಂವಿಧಾನದಲ್ಲಿ ಈ ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಬದುಕುವ ಹಕ್ಕಿದೆ ಎಂಬುದು ಎಷ್ಟು ಮುಖ್ಯವೋ, ನಮ್ಮ ನೆಲ ಜಲ ಸಂಸ್ಕೃತಿ ಕೂಡ ಅಷ್ಟೇ ಮುಖ್ಯ. ಕೊಡಗಿನಲ್ಲಿ ಅಂದಾಜು ೧ ಲಕ್ಷಕ್ಕೂ ಅಧಿಕ ವಲಸಿಗರು ನೆಲೆಯೂರಿದ್ದು ತೋಟದ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಂಟಕ ತಪ್ಪಿದಲ್ಲ. ವಲಸಿಗರ ಬಗ್ಗೆ ನಿರ್ಲಕ್ಷö್ಯ ಬೇಡ ಆದರೆ ಎಚ್ಚರಿಕೆಯಂತೂ ಬೇಕೇ ಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಪಂಚಾಯಿತಿ ಮಟ್ಟ ಹಾಗೂ ಪೊಲೀಸ್ ಠಾಣೆಗಳು ಆಗಿಂದಾಗ್ಗೆ ಸಭೆ ನಡೆಸಿ, ವಲಸೆ ಕಾರ್ಮಿಕರ ಚಲನ ವಲನ, ಹಾಗೂ ಇವರ ಮಾಹಿತಿಗಳನ್ನು ಸಂಗ್ರಹಿಸಬೇಕಾದುದು ತುರ್ತು ಅಗತ್ಯವಾಗಿದೆ.

- ಸುರೇಶ್ ಬಿಳಿಗೇರಿ