*ಗೋಣಿಕೊಪ್ಪ, ಜು. ೨೨: ಗೋಣಿಕೊಪ್ಪ ಗ್ರಾಪಂ ವ್ಯಾಪ್ತಿಯ ೧ನೇ ವಿಭಾಗದ ಶ್ರೀ ಪ್ರಸನ್ನ ಗಣಪತಿ ಸೇವಾ ಸಂಘದ ೧೪ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ಆಚರಣೆ ಸಮಿತಿಯ ೨೦೨೫ನೇ ಸಾಲಿನ ಅಧ್ಯಕ್ಷರಾಗಿ ಜಗದೀಶ್ ಜೋಡುಬೀಟಿ, ಕಾರ್ಯದರ್ಶಿಯಾಗಿ ರಾಘವೇಂದ್ರ ಸಿ.ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಳೆದ ಸಾಲಿನ ಉತ್ಸವದ ಲೆಕ್ಕಪತ್ರ ಮಂಡನೆ ಮತ್ತು ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ವಿ.ಟಿ. ಮಂಜುನಾಥ್, ಉಪಾಧ್ಯಕ್ಷರಾಗಿ ದಿಲೀಪ್, ಅನಿಲ್ ಕೆ.ವಿ, ಸಂಘಟನಾ ಕಾರ್ಯದರ್ಶಿಯಾಗಿ ಮುಖೇಶ್ ಕೆ.ಕೆ, ಸಹ ಕಾರ್ಯದರ್ಶಿ ಮುರುಳಿ, ಖಜಾಂಚಿ ರಾಘವೇಂದ್ರ ಆರ್, ಅನ್ವಿತ ಆರ್. ಮತ್ತು ಸದಸ್ಯರುಗಳಾಗಿ ನವೀನ್, ರವಿರಾಜ್, ಪ್ರಮೋದ್, ನವೀನ್, ಆಕಾಶ್, ಆಶಿಕ್, ರಾಕೇಶ್ ಬಿ.ವಿ, ಶಿವ, ಮಣಿಕಂಠ, ಲೋಹಿತ್, ಲವ, ರಾಮ್‌ದಾಸ್, ಅನಿಲ, ರಾಕೇಶ್ ಕುಟ್ಟ, ಭರತ್, ಪುನೀತ್, ಹರೀಶ್, ಸುರೇಶ್, ಪ್ರವೀಣ್ ಕವನ್, ಜಗತ್, ಚಿನ್ನಪ್ಪ ರವರುಗಳನ್ನು ಆಯ್ಕೆ ಮಾಡಲಾಯಿತು. ಬಾಲಮಂಡಳಿ ಸಮಿತಿ ಅಧ್ಯಕ್ಷರಾಗಿ ಪ್ರಜ್ವಲ್, ಉಪಾಧ್ಯಕ್ಷರಾಗಿ ಆಯುಷ್, ಕಾರ್ಯದರ್ಶಿಯಾಗಳಾಗಿ ಲಿಖಿತ್, ಪ್ರೀತಮ್, ಖಜಾಂಚಿ ರಾಶಿ ಆರ್ ಆಯ್ಕೆಯಾಗಿದ್ದಾರೆ.