ಮಡಿಕೇರಿ, ಜು. ೨೧: ಕೊಂಡAಗೇರಿ ಪರಂಬು ಗ್ರಾಮದಲ್ಲಿ ಅತ್ತೆ-ಸೊಸೆ ಮೇಲೆ ಚಾಕುವಿನಿಂದ ಹಲ್ಲೆಗೈದು ಚಿನ್ನದ ಸರ ಅಪಹರಣ ಮಾಡಿದ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ.
ಮಧ್ಯಾಹ್ನ ವೇಳೆಯಲ್ಲಿ ನೀರು ಕೇಳುವ ನೆಪದಲ್ಲಿ ಬಂದ ಆಗಂತುಕ ಈ ದುಷ್ಕೃತ್ಯವೆಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿ ಪತ್ತೆಯಾಗಿ ಇದೀಗ ಪೊಲೀಸ್ ವಶದಲ್ಲಿದ್ದಾನೆ.
ಪಾಲಿಬೆಟ್ಟದ ಮುನಾವರ್ ಬಂಧಿತ ಆರೋಪಿ. ಈತನಿಂದ ಹಲ್ಲೆಗೊಳಗಾದ ಸಾರಮ್ಮ ಹಾಗೂ ಸಫಾನ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನೂ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಏನಿದು ಘಟನೆ?
ಸೋಮವಾರ ಬೆಳಿಗ್ಗೆ ೯ ಗಂಟೆ ಸುಮಾರಿಗೆ ಸಫಾನ ಹಾಗೂ ಸಾರಮ್ಮ ಮನೆಯಲ್ಲಿದ್ದ ಸಂದರ್ಭ ಅಪರಿಚಿತ ವ್ಯಕ್ತಿ ಬಂದು ಬಾಗಿಲು ತಟ್ಟಿದ್ದಾನೆ. ಬಾಗಿಲು ತೆರೆದ ಸಾರಮ್ಮ ಹಾಗೂ ಸಫಾನ ಬಳಿ ಮುನಾವರ್ ‘ತನಗೆ ಸುಸ್ತಾಗುತ್ತಿದೆ ನೀರು ಬೇಕೆಂದು’ ಕೇಳಿದ್ದು, ಇವರು ನೀಡಿದ್ದಾರೆ.
ಮತ್ತೇ ಮಧ್ಯಾಹ್ನ ೧.೩೦ರ ವೇಳೆಗೆ ಮನೆ ಬಳಿ ಬಂದು ಮತ್ತೊಮ್ಮೆ ನೀರು ಕೇಳಿದ್ದಾನೆ. ಸಫಾನ ನೀರು ತರಲು ಹೋದ ಸಂದರ್ಭ ಸಾರಮ್ಮ ಮೇಲೆ ಚಾಕುವಿನಿಂದ ಹಲ್ಲೆಗೈದು ಅವರ ಕೊರಳಿನಲ್ಲಿದ್ದ ಚಿನ್ನದ ಸರ ಅಪಹರಿಸಲು ಮುಂದಾಗಿದ್ದಾನೆ. ತಕ್ಷಣ ಕಿರುಚಾಟ ಕೇಳಿ ಓಡಿ ಬಂದ ಸಫಾನ ಮೇಲೂ ಆರೋಪಿ ಹಲ್ಲೆಗೆ ಮುಂದಾಗಿ ಸರ ಕದ್ದೊಯ್ದು ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ತಕ್ಷಣ ಸುತ್ತಮುತ್ತಲಿನ ನಿವಾಸಿಗಳು ಬಂದು ಪೊಲೀಸರಿಗೆ ವಿಷಯ ತಿಳಿಸಿ, ವಿಷಯದ ಕುರಿತು ವೀಡಿಯೋ ಮಾಡಿ ಸ್ಥಳೀಯ ವಾಟ್ಸಾö್ಯಪ್ ಗ್ರೂಪ್ ಗಳಿಗೆ ಹಂಚಿಕೆ ಮಾಡಿ ಆರೋಪಿ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
ವೀಡಿಯೋ ಗಮನಿಸಿದ ಸ್ಥಳೀಯ ಯುವಕರು ಗ್ರಾಮದ ಸುತ್ತಮುತ್ತ, ತೋಟಗಳ ಒಳ ಭಾಗದಲ್ಲಿ ಹುಡುಕಾಡಿದಾಗ ಹಾಲುಗುಂದ ಗ್ರಾಮದ
(ಮೊದಲ ಪುಟದಿಂದ)ವ ತೋಟದಲ್ಲಿ ಆರೋಪಿ ಬಚ್ಚಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಈತನಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಫಾನ ಪತಿ ಅಬ್ದುಲ್ ರೆಹಮಾನ್ ಕೇರಳದಲ್ಲಿ ಉದ್ಯೋಗ ನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಥಳ ಪರಿಶೀಲನೆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆ ಕುರಿತು ಪೊಲೀಸರಿಂದ ಮಾಹಿತಿ ಪಡೆದುಕೊಂಡರು.
ತಕ್ಷಣ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಆರೋಪಿ ಬಂಧಿಸಲು ಸಹಕಾರ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ ಜಿಲ್ಲೆಯಲ್ಲಿ ನಾಖಾಬಂಧಿ ಹಾಕಿ ಕ್ರಮವಹಿಸಲಾಯಿತು. ೨೦೨೩ರಲ್ಲಿ ಇದೇ ರೀತಿ ಪ್ರಕರಣ ಮಡಿಕೇರಿಯಲ್ಲಿ ನಡೆದಿತ್ತು. ತನಿಖೆ ನಡೆದು ಆರೋಪಿಗೆ ೧೦ವರ್ಷ ಶಿಕ್ಷೆಯಾಗಿದ್ದು, ಈ ಪ್ರಕರಣದ ಕುರಿತು ತನಿಖೆ ನಡೆಸಿ ಕಾನೂನು ಪ್ರಕಾರ ಶಿಕ್ಷೆಗೆ ಕ್ರಮಕೈಗೊಳ್ಳಲಾಗುವುದು ಎಂದು ಎಸ್.ಪಿ. ರಾಮರಾಜನ್ ತಿಳಿಸಿದ್ದಾರೆ.