ಸೋಮವಾರಪೇಟೆ, ಜು. ೨೧: ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಭರಪೂರ ಅನುದಾನ ನೀಡುತ್ತಿದೆ. ಕೆಲವರ ಟೀಕೆಗಳಿಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಸೋಮವಾರ ಪೇಟೆಯಿಂದ ಬೆಂಗಳೂರು, ಮೈಸೂರು, ಮಂಗಳೂರಿಗೆ ನೂತನ ವಾಗಿ ಬಸ್ ಸೇವೆಗಳನ್ನು ಒದಗಿಸಿದ್ದು, ನೂತನ ಮಾರ್ಗಕ್ಕೆ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೆಎಸ್‌ಆರ್‌ಟಿಸಿಗೆ ಸಂಬAಧಿಸಿ ದಂತೆ ಈಗಾಗಲೇ ಕುಶಾಲನಗರದಲ್ಲಿ ನೂತನ ಡಿಪೋ, ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಇದೇ ಪ್ರಥಮವಾಗಿ ಕೆಎ೧೨ ನೋಂದಣಿಯಲ್ಲಿ ಬಸ್‌ಗಳ ಸೇವೆ ಆರಂಭಗೊAಡಿದೆ. ಕೆ.ಎ.೧೨ ಬ್ರಾö್ಯಂಡ್ ಹೆಮ್ಮೆಯ ಸಂಕೇತವಾಗಿದೆ ಎಂದರು. ಇದರೊಂದಿಗೆ ಸೋಮವಾರ ಪೇಟೆಯ ಗ್ರಾಮೀಣ ಭಾಗದಲ್ಲೂ ಬಸ್‌ಗಳ ಸೇವೆಗೆ ಕ್ರಮ ವಹಿಸಲಾಗಿದೆ. ಇತಿಹಾಸದಲ್ಲಿ ಪ್ರಥಮ ಎಂಬAತೆ ಮುಟ್ಲು, ಕುಡಿಗಾಣ ಭಾಗಕ್ಕೆ ಸರ್ಕಾರಿ ಬಸ್ ಸೇವೆ ಲಭ್ಯವಾಗಿದೆ. ಇದೀಗ ಸೋಮವಾರಪೇಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರು ನೂತನ
(ಮೊದಲ ಪುಟದಿಂದ) ಮಾರ್ಗಗಳಲ್ಲಿ ಬಸ್ ಸಂಪರ್ಕ ಒದಗಿಸಲಾಗಿದೆ. ಮೈಸೂರು, ಮಂಗಳೂರು ಹಾಗೂ ಬೆಂಗಳೂರಿಗೆ ಅಶ್ವಮೇಧ ಬಸ್‌ಗಳ ಸಂಚಾರ ಆರಂಭವಾಗಲಿದೆ. ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಅಭಿಪ್ರಾಯಿಸಿದರು.
ಕೂತಿ ರಸ್ತೆ ಪೂರ್ಣಗೊಂಡ ನಂತರ ಬಸ್ ಸೇವೆ ಒದಗಿಸಲಾಗುವುದು. ಸೋಮವಾರಪೇಟೆ -ಶಾಂತಳ್ಳಿ-ವನಗೂರು ಕೂಡುರಸ್ತೆ ಮೂಲಕ ಸುಬ್ರಹ್ಮಣ್ಯಕ್ಕೆ ಬಸ್ ಮಾರ್ಗ ಕಲ್ಪಿಸುವ ಬಗ್ಗೆ ಬೇಡಿಕೆಯಿದೆ. ಈ ಎರಡೂ ಮಾರ್ಗದಲ್ಲಿ ಬಸ್ ಬಂದರೆ ಗ್ರಾಮೀಣ ಜನರ ಬೇಡಿಕೆ ಪೂರ್ಣಗೊಳ್ಳಲಿದೆ. ಶೀಘ್ರದಲ್ಲೇ ಮಡಿಕೇರಿ-ಸೋಮವಾರಪೇಟೆ ನಡುವೆ ಹೆಚ್ಚುವರಿ ಸೆಟ್ಲ್ ಬಸ್ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿವೆ. ಗ್ಯಾರಂಟಿಯಿAದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸುತ್ತಿವೆ. ಆದರೆ ಹಾರಂಗಿ ಮುಂಭಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು ರೂ. ೩೬ ಕೋಟಿ ಬಿಡುಗಡೆ ಮಾಡಿದ್ದಾರೆ. ನಾಲೆಗಳ ಅಭಿವೃದ್ಧಿಗೆ ರೂ. ೪೯ ಕೋಟಿ ಬಿಡುಗಡೆಯಾಗಿದೆ. ನೀರಾವರಿಗೆ ಆದ್ಯತೆ ನೀಡಲಾಗಿದೆ. ಇದೆಲ್ಲವೂ ಅಭಿವೃದ್ಧಿ ಕಾರ್ಯಗಳೇ ಆಗಿವೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಇದೇ ಪ್ರಥಮ ಬಾರಿಗೆ ಹೃದ್ರೋಗಕ್ಕೆ ಸಂಬAಧಿಸಿದAತೆ ೧೦ ಕೋಟಿ ವೆಚ್ಚದಲ್ಲಿ ‘ಕ್ಯಾಥ್ ಲ್ಯಾಬ್’ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಇದರಿಂದ ಜಿಲ್ಲೆಯವರು ಅನಾರೋಗ್ಯ ಸಂದರ್ಭ ದೂರದ ಮೈಸೂರು, ಬೆಂಗಳೂರು, ಮಂಗಳೂರಿಗೆ ತೆರಳುವ ಪ್ರಮೇಯ ತಪ್ಪಲಿದೆ ಎಂದು ಶಾಸಕರು ಅಭಿಪ್ರಾಯಿಸಿದರು.
ಕೆಶಿಪ್ ಯೋಜನೆಯಡಿ ಮಡಿಕೇರಿ-ಸೋಮವಾರಪೇಟೆ-ಕೊಡ್ಲಿಪೇಟೆ-ದೋಣಿಗಾಲ್ ರಸ್ತೆಯಲ್ಲಿ ಕೆಲವು ಕಡೆ ಸರ್ವೆ ಕಾರ್ಯ ಆರಂಭವಾಗಿದೆ. ಈ ವರ್ಷದೊಳಗೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ನೂತನ ಬಸ್‌ಗಳಿಗೆ ಚಾಲನೆ ನೀಡಿದ ಸಂದರ್ಭ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಕೆ.ಎ. ಆದಂ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ವಿ.ಎ. ಲಾರೆನ್ಸ್, ಪಕ್ಷದ ಪ್ರಮುಖರಾದ ಜೆ.ಎಲ್. ಜನಾರ್ದನ್, ಶೀಲಾ ಡಿಸೋಜ, ಡಿ.ಯು. ಕಿರಣ್ ಉದಯಶಂಕರ್, ಕೆಡಿಪಿ ಸದಸ್ಯ ಔರಂಗಜೇಬ್, ಹೆಚ್.ಆರ್. ಸುರೇಶ್, ಅನುಷ್ಠಾನ ಸಮಿತಿ ಸದಸ್ಯ ಅಬ್ಬಾಸ್, ವೇದಕುಮಾರ್, ವಿನಿ, ಎಂ.ಎ. ರುಬೀನಾ, ಮಡಿಕೇರಿ ಡಿಪೋ ಇನ್‌ಚಾರ್ಜ್ ಈರಸಪ್ಪ ಸೇರಿದಂತೆ ಇತರರು ಇದ್ದರು.