ಮಡಿಕೇರಿ, ಜು. ೯ : ಹಿಂದೂ ಸಮಾಜದ ಪ್ರಾಚೀನ ಪರಂಪರೆ ಯಿಂದಲೇ ಗುರುಪೂಜೆ ಆಚರಿಸಲ್ಪ ಡುತ್ತಿದ್ದು, ಬದುಕಿನಲ್ಲಿ ಸಮರ್ಥ ಗುರಿ ತಲುಪಲು ಗುರು ಮುಖ್ಯ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸೇವಾ ಭಾರತಿಯ ಜಿಲ್ಲಾಧ್ಯಕ್ಷ ಟಿ.ಸಿ. ಚಂದ್ರನ್ ವಿವರಿಸಿದರು. ನಗರದ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ತಾ. ೮ರಂದು ನಡೆದ ಗುರುಪೂಜಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಚಿರಂತನವಾಗಿರುವ ಧರ್ಮ ಹಾಗೂ ಸಮಾಜಕ್ಕೆ ಒಬ್ಬ ವ್ಯಕ್ತಿ ಸದಾಕಾಲ ದಾರಿತೋರಿಸಲು ಸಾಧ್ಯವಿಲ್ಲ; ಹಾಗಾಗಿ ಆದರ್ಶ ಮತ್ತು ತ್ಯಾಗದ ಸಂಕೇತವಾಗಿರುವ ಭಗವಾಧ್ವಜವನ್ನು ಗುರುಗಳ ಸ್ಥಾನದಲ್ಲಿ ಸಂಘ ಗೌರವಿಸುತ್ತಿದೆ ಎಂದರು.

ಗುರುಗಳು ಎಲ್ಲರಿಗೂ ಶ್ರದ್ಧೆಯ ಬದುಕಿನ ಮಾರ್ಗ ತೋರುವವರು, ಬದುಕು ರೂಪುಗೊಳ್ಳುವುದೇ ಗುರುಗಳಿಂದ ಎಂದು ಬಣ್ಣಿಸಿದ ಚಂದ್ರು ಅವರು ಸಮರ್ಥ ಗುರಿ, ಧರ್ಮ, ಆಚಾರ, ವಿಚಾರಗಳು ರೂಪು ಗೊಳ್ಳುವುದೇ ಗುರುಗಳಿಂದ ಎಂದರು.

ಆರ್.ಎಸ್.ಎಸ್. ಸಮಾಜ ಸಂಘಟನೆ; ಅದರ ಕನಸು ರಾಷ್ಟç ವೈಭವ ಮಾತ್ರ; ಆದರ್ಶ, ಜ್ಞಾನ, ಪರಾಕ್ರಮ ಮತ್ತು ಪರಿಶುದ್ಧತೆ ಆದರ್ಶಗಳು ಈ ಸಂಘಟನೆಯ ದ್ದಾಗಿದ್ದು, ರಾಷ್ಟçಕ್ಕಾಗಿ ಸಮರ್ಪಣಾ ಭಾವ ಅತ್ಯಂತ ಅಗತ್ಯವಾಗಿರುವ ಮೌಲ್ಯವಾಗಿದೆ ಎಂದು ವಿಶ್ಲೇಷಿಸಿದ ಶ್ರೀಯುತರು ಎಲ್ಲಿ ಸಮರ್ಪಣೆ ಇದೆಯೋ ಅಲ್ಲಿ ಅಭ್ಯುದಯವಿದೆ ಎಂದು ಬಣ್ಣಿಸಿದರು. ಎಲ್ಲರಲ್ಲೂ ಸಾಮರಸ್ಯ ಜೀವನ, ಸ್ವದೇಶಿ ಭಾವನೆ ಮತ್ತು ಪರಿಸರ ಯೋಗ್ಯ ಜೀವನದ ಕಲ್ಪನೆ ಮನೆ ಮನೆಗಳಿಂದ ಆರಂಭವಾಗಬೇಕೆAದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸುಬ್ರಾಯ ಸಂಪಾಜೆ ಅವರು ಮಾತನಾಡಿ, ಮನುಷ್ಯನಲ್ಲಿ ಸರಿ ಮತ್ತು ತಪ್ಪು ಯಾವುದು ಎಂದು ಸ್ವೀಕರಿಸಲು ಆತ್ಮವಿಮರ್ಶೆ ಅಗತ್ಯವೆಂದರು. ಹೆತ್ತ ತಾಯಿಯ ಮೇಲಿನ ಪ್ರೀತಿ, ಬದುಕು ಕೊಟ್ಟ ಭೂಮಿ ತಾಯಿಯ ಮೇಲೂ ಇರಬೇಕು ಎಂದು ಸಂಪಾಜೆ ಕಿವಿಮಾತು ಹೇಳಿದರು. ಸ್ವಯಂ ಸೇವಕರಿಂದ ಭಗವಾಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಸಂಘದ ನಗರ ಸಂಘ ಚಾಲಕ್ ಜಯಚಂದ್ರ ಇದ್ದರು.