ವೀರಾಜಪೇಟೆ, ಜು. ೫: ಕರ್ನಾಟಕದ ಮೈಸೂರಿನಿಂದ ಕೇರಳದ ಕಣ್ಣೂರಿಗೆ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಹಾತೂರಿನ ಪವಿತ್ರ ತೋಪಿನೊಳಗಿನ ದೇವತೆಯು ಜನನಿಬಿಡ ರಸ್ತೆಯಲ್ಲಿ ಅಪಾಯಕಾರಿ ತಿರುವಿನಲ್ಲಿ ಕುಳಿತಿದ್ದಾಳೆ. ಅವಳನ್ನು ವನ ಭದ್ರಕಾಳಿ ಎಂದು ಕರೆಯಲಾಗುತ್ತದೆ. ತಿರುವಿನಲ್ಲಿ ವಾಹನಗಳಲ್ಲಿ ಪ್ರಯಾಣಿಸುವವರು ಅವಳ ಪಾಲನೆಯಿಂದಾಗಿ ಪವಾಡಸದೃಶವಾಗಿ ಪಾರಾಗಿದ್ದಾರೆ ಎಂದು ನಂಬಲಾಗಿದೆ. ಅವಳನ್ನು ವಾಹನ(ವನ)ಭದ್ರಕಾಳಿ ಎಂದೂ ಕರೆಯುತ್ತಾರೆ.

ದಕ್ಷಿಣ ಕೊಡಗಿನಲ್ಲಿ ವೀರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ತೆರಳಿದವರಿಗೆ ಮಾರ್ಗದ ಮಧ್ಯೆ ಹಾತೂರು ಕೊಳತ್ತೋಡು ಬೈಗೋಡಿನಲ್ಲಿ ರಸ್ತೆ ಬದಿಯಲ್ಲಿ ಅರಣ್ಯಕ್ಕೆ ಹೊಂದಿಕೊAಡAತೆ ವನಭದ್ರಕಾಳೇಶ್ವರಿ ದೇಗುಲದ ಪ್ರವೇಶ ದ್ವಾರ ಕಾಣಿಸುತ್ತದೆ. ಸಾಮಾನ್ಯವಾಗಿ ಈ ರಸ್ತೆಯಲ್ಲಿ ತೆರಳುವವರು ಈ ದೇವತೆಗೆ ನಮಿಸಿ ಮುಂದೆ ಸಾಗುತ್ತಾರೆ.

ದೇವರ ಕಾಡಿನಲ್ಲಿ ನೆಲೆ ನಿಂತ, ಎರಡು ವರ್ಷಕ್ಕೊಮ್ಮೆ ನಡೆಯುವ ವಾಹನ ರಕ್ಷಕಿ ಎಂದೇ ಪ್ರಸಿದ್ಧವಾಗಿರುವ ವನಭದ್ರಕಾಳಿ ದೇವರ ವಾರ್ಷಿಕ ಉತ್ಸವ ತಾ. ೭, ೮ ರಂದು ವಿಜೃಂಭಣೆಯಿAದ ನಡೆಯಲಿದೆ.

ಉತ್ಸವದ ದಿನ ಬೆಳಿಗ್ಗೆ ಕೊಕ್ಕಂಡ ಕುಟುಂಬದ ಐನ್‌ಮನೆಯಿಂದ ದೇವಿಯ ಮೊಗತೆರೆ ಹಾಗೂ ಕೇಳಪಂಡ ಕುಟುಂಬದ ಐನ್‌ಮನೆಯಿಂದ ಅಯ್ಯಪ್ಪ ಪೂತೆರೆ ಹೊರಡುತ್ತದೆ. ಅಲ್ಲಿಂದ ದೊಡ್ಡಮನೆ ಕುಟುಂಬದ ಹತ್ತಿರವಿರುವ ಆಲದ ಮರದ ಕಟ್ಟೆಯಲ್ಲಿ ಎರಡು ತೆರೆಗಳು ಜೊತೆಗೂಡುತ್ತವೆ. ನಂತರ ಗದ್ದೆ ಹಾಗೂ ರಸ್ತೆಯ ಮೂಲಕ ಸಾಗಿ ದೇವಾಲಯವನ್ನು ತಲುಪುತ್ತವೆ.

ದೇವಾಲಯದಲ್ಲಿ ಎತ್ತುಪೋರಾಟ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ನಂತರ ಶುದ್ಧಿ ಕೆಲಸ ನಡೆಯುತ್ತದೆ. ಮಧ್ಯಾಹ್ನದ ನಂತರ ಕೊಂಗೇಪAಡ ಐನ್‌ಮನೆಯಿಂದ ದೇವಿಯ ಮೊಗತೆರೆ ಹಾಗೂ ಕೇಳಪಂಡ ಕುಟುಂಬದ ಐನ್‌ಮನೆಯಿಂದ ಪೂತೆರೆ ಹೊರಟು ಎರಡು ತೆರೆಗಳೊಂದಿಗೆ ಗ್ರಾಮಸ್ಥರು ಉತ್ಸಾಹದಿಂದ ದೇವಾಲಯದ ಕಡೆಗೆ ಸಾಗುತ್ತಾರೆ.

ಈ ಸಂದರ್ಭ ಮುಖ್ಯರಸ್ತೆಯಲ್ಲಿ ದೇವರ ಕುಣಿತ ನಡೆದು ಬಳಿಕ ದೇವಾಲಯವನ್ನು ಪ್ರವೇಶಿಸಲಾಗುತ್ತದೆ. ಹರಕೆ ಒಪ್ಪಿಸುವ ಕಾರ್ಯ, ಮಹಾಪೂಜೆ ಹಾಗೂ ಸಾಂಪ್ರದಾಯಿಕ ವಿಧಿ ವಿಧಾನಗಳು ನಡೆದು ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಉತ್ಸವ ನಡೆದ ನಂತರದ ಮೂರು ದಿನಗಳ ಕಾಲ ದೇವಾಲಯವನ್ನು ಮುಚ್ಚುತ್ತಾರೆ. ಬಳಿಕ ದೇವಾಲಯವನ್ನು ತೆರೆದು ಶುದ್ಧ ಕಾರ್ಯವನ್ನು ಕೈಗೊಂಡ ಬಳಿಕವೇ ನಿತ್ಯ ಪೂಜೆ ಕಾರ್ಯಗಳು ಜರುಗುತ್ತವೆ.

ದೊಡ್ಡ ಹಬ್ಬದ ಹಿಂದಿನ ಜುಲೈ ೭ ರಂದು ಸಂಜೆ ಗ್ರಾಮಸ್ಥರು ವೀರಾಜಪೇಟೆ ಗೋಣಿಕೊಪ್ಪಲು ಹೆದ್ದಾರಿ ಬದಿಯಲ್ಲಿರುವ ಹಲಸಿನ ಮರದ ದೇವರ ಕಟ್ಟೆ ಬಳಿ ಪೂಜೆ ಸಲ್ಲಿಸಿ ಅಲ್ಲಿಂದ ಮಹಾದೇವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸುವುದು ಸಂಪ್ರದಾಯ.

ಪ್ರತೀತಿ

ಸಾಕಷ್ಟು ಹಿಂದೆ ಕೊಂಗೇಪAಡ ಕುಟುಂಬದ ಮಹಿಳೆಯೊಬ್ಬರು ಭತ್ತದ ಗದ್ದೆಗೆ ಬುಟ್ಟಿಯಲ್ಲಿ ಸಗಣಿ ಹಾಕಲು ಹೋದಾಗ ಬಂಗಾರದ ಕೊಕ್ಕು ಹಾಗೂ ಕಾಲು ಹೊಂದಿರುವ ಕೊಕ್ಕರೆ ಕಾಣಿಸುತ್ತದೆ. ಮಹಿಳೆ ತನ್ನ ಕೈಲಿದ್ದ ಕುಕ್ಕೆ(ಬುಟ್ಟಿ)ಯಲ್ಲಿ ಕೊಕ್ಕರೆಯನ್ನು ಮುಚ್ಚಿ ಈ ಕೌತುಕವನ್ನು ಕುಟುಂಬದವರಿಗೆ ತಿಳಿಸುತ್ತಾರೆ. ಸ್ಥಳಕ್ಕೆ ಬಂದ ಕುಟುಂಬದವರಲ್ಲಿ ಒಬ್ಬರು ಬುಟ್ಟಿಯನ್ನು ತೆರೆದಾಗ ಅವರಿಗೆ ಕಾಳಿ ದೈವ ಆವಾಹನೆಯಾಗಿ ಕೊಕ್ಕಂಡ ಕುಟುಂಬದವರ ಬಳಿ ಬಂದು ನನಗೆ ಇಲ್ಲಿಯೇ ನೆಲೆ ನೀಡಿದಲ್ಲಿ ಗ್ರಾಮದ ಜನರನ್ನು ಕಾಪಾಡುತ್ತೇನೆ ಎಂದು ನೆಲೆ ಕೇಳಿದಾಗ ಕುಟುಂಬದ ಗುರು ಈಗ ದೇವಾಲಯವಿರುವ ಜಾಗದ ಬಳಿ ಈ ರೀತಿಯಾಗಿ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಯಿತು ಎಂಬ ಪ್ರತೀತಿ ಇದೆ. ಕೊಕ್ಕರೆಯನ್ನು ಹಿಡಿದ ಕೊಂಗೇಪAಡ ಕುಟುಂಬದ ಗದ್ದೆಗೆ ದೇವಂಡ ಬಲ್ಯ ಎಂದು ಹೆಸರು ಇದೆ. ಹಲವು ವರ್ಷಗಳ ಹಿಂದೆ ಭದ್ರಕಾಳಿ ದೇವಾಲಯದ ಉತ್ಸವದ ದಿನ ಸಮೀಪದಲ್ಲಿರುವ ಮಹಾದೇವರ ದೇವಾಲಯದ ಉತ್ಸವ ಮೂರ್ತಿಯನ್ನು ಕಳ್ಳರು ಅಪಹರಿಸಿರುತ್ತಾರೆ. ಬಳಿಕ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿ ಹಿಡಿದಾಗ ವೀರಾಜಪೇಟೆ ಗೋಣಿಕೊಪ್ಪಲು ಹೆದ್ದಾರಿಯ ಕೈಕೇರಿ ಸಮೀಪದ ಹಲಸಿನ ಮರದ ಬಳಿ ಮೂರ್ತಿ ಪತ್ತೆಯಾಗುತ್ತದೆ. ಇದರಿಂದ ಇಂದಿಗೂ ಉತ್ಸವದ ಹಿಂದಿನ ದಿನ ಹಲಸಿನ ಮರ ಬಳಿ ವಿಶೇಷ ಪೂಜೆಯನ್ನು ಸಲ್ಲಿಸುವ ಸಂಪ್ರದಾಯ ಬೆಳೆದು ಬಂದಿದೆ.

ದೇವರ ಬಂಡಾರ ತಕ್ಕರಾಗಿ ಕೊಕ್ಕಂಡ, ದೇವತಕ್ಕರಾಗಿ ಕೊಂಗೆಪAಡ, ಹಾಗೂ ಮೂರನೇ ತಕ್ಕರ ಜವಾಬ್ದಾರಿಯನ್ನು ಕೇಳಪಂಡ ಕುಟುಂಬ ನಿರ್ವಹಿಸುತ್ತಿದೆ. ವಿಶೇಷವೆಂದರೆ ವಾಹನ ರಕ್ಷಕಿ ಎಂದೇ ಹೆಸರಾದ ದೇವಿಗೆ ದೂರದ ಊರುಗಳಿಗೆ ಪ್ರಯಾಣಿಸುವವರು ವಾಹನಗಳನ್ನು ನಿಲ್ಲಿಸಿ ಕೈಮುಗಿದು ಮುಂದೆ ಹೋಗುತ್ತಾರೆ. ಸುಮಾರು ೧೬.೩೮ ಎಕರೆ ವಿಸ್ತೀರ್ಣದ ಈ ದೇವರ ಕಾಡು ವೈವಿಧ್ಯಮಯ ಹಾಗೂ ಅಪರೂಪದ ಸಸ್ಯ ಸಂಕುಲದ ತಾಣವೂ ಆಗಿದೆ.

ಉತ್ಸವಕ್ಕೆ ಸಾಕಷ್ಟು ಭಕ್ತರು ಸೇರುವ ನಿರೀಕ್ಷೆಯಿದ್ದು ಅದಕ್ಕೆ ತಕ್ಕಂತೆ ದೇವಾಲಯದ ಆಡಳಿತ ಮಂಡಳಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ

ಈ ತೋಪಿನ(ದೇವರ ಕಾಡು)ಮುಂದೆ ಈ ರಸ್ತೆಯಲ್ಲಿ ಹಾದುಹೋಗುವ ಪ್ರತಿಯೊಬ್ಬರನ್ನು ದೇವತೆ ರಕ್ಷಿಸುತ್ತಾಳೆ. ಇಲ್ಲಿ ಅಪಘಾತಗಳಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು ಆಚರಿಸುವ ತೋಪಿನ ಕಟ್ಟುನಿಟ್ಟಿನ ಸಂರಕ್ಷಣೆಯೇ ದೇವಿಯ ದೈವಿಕ ಶಕ್ತಿಗೆ ಕಾರಣ ಎಂದು ಎಂದು ವನಭದ್ರಕಾಳಿ ದೇವಸ್ಥಾನ ಸಮಿತಿಯವರು ಹೇಳುತ್ತಾರೆ. ಇಲ್ಲಿ ಎರಡು ವರ್ಷಗಳಿಗೊಮ್ಮೆ ಸುತ್ತಲಿನ ದೇವಾಲಯ ವ್ಯಾಪ್ತಿಗೊಳಪಡುವ ಕುಟುಂಬಗಳ ನೇತೃತ್ವದಲ್ಲಿ ವನಭದ್ರಕಾಳಿ ಹಬ್ಬವನ್ನು ಆಚರಿಸುತ್ತಾರೆ. ಈ ವೇಳೆ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ನೆರೆದು ಹೂವು, ಹಣ್ಣು, ಕಾಯಿಗಳನ್ನು ಅರ್ಪಿಸಿ ಮಳೆಬೆಳೆಯಾಗಿ ಜನ ಜಾನುವಾರುಗಳನ್ನು ರಕ್ಷಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ಹಬ್ಬದ ಆಚರಣೆಯಲ್ಲಿ ಒಂದಷ್ಟು ವಿಭಿನ್ನತೆ ಮತ್ತು ವಿಶೇಷತೆಯನ್ನು ನಾವು ಕಾಣಬಹುದಾಗಿದೆ. ಹಬ್ಬದ ದಿನದಂದು ಇಡೀ ಊರಲ್ಲಿ ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ ಎಂಬ ಘೋಷಣೆ ಮುಗಿಲು ಮುಟ್ಟುತ್ತದೆ. ದೇವರು ತಿರುವಳಗಾರನ ಮೇಲೆ ಅವಾಹನೆಗೊಳ್ಳುತ್ತದೆ. ಇನ್ನು ಹಬ್ಬದ ಸಂಪ್ರದಾಯದAತೆ ಕೊಕ್ಕಂಡ ಕುಟುಂಬದ ಐನ್‌ಮನೆಯಿಂದ ಭದ್ರಕಾಳಿ ದೇವತೆಯ ಮೊಗವನ್ನು ಹಿಡಿದು ದೈವ ನೃತ್ಯದ ತೆರೆಯ ಮೂಲಕ ಕೊಳತ್ತೋಡು ಗ್ರಾಮ ತಲುಪಿ, ಅಲ್ಲಿ ದೈವ ನೃತ್ಯದ ನಂತರ ಭಕ್ತಾದಿಗಳಿಂದ ಹರಕೆ ಒಪ್ಪಿಸುವ ಕಾರ್ಯ ನೆರವೇರುತ್ತದೆ.

ಪುಟ್ಟಮಕ್ಕಳಿಂದ ಪ್ರಾರ್ಥನೆ

ಇದಾದ ಬಳಿಕ ಕೊಂಗೇಪAಡ ಐನ್‌ಮನೆಯಿಂದ ತೆರೆ ಹೊರಟು, ಭತ್ತದ ಪೈರಿನ ಮಧ್ಯೆ ನಡೆದು ಬಂದ ದೇವಿ, ಹಾತೂರಿನ ಮಹಾದೇವ ದೇವಸ್ಥಾನದ ಬಳಿ ಇರುವ ಅರಳಿ ಮರದ ಬಳಿ ಆಸೀನಳಾಗುತ್ತಾಳೆ. ದೇವಿಯ ಆಯುಧವನ್ನು ಪುಟ್ಟಮಕ್ಕಳು ಕೈಯಲ್ಲಿ ಹಿಡಿದು ದೇವಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಇದೆಲ್ಲದರ ನಡುವೆ ಅಯ್ಯಪ್ಪ ಸ್ವಾಮಿಯ ತೆರೆ ಕೇಳಪಂಡ ಐನ್‌ಮನೆಯಿಂದ ಪೈರಿನ ಮಧ್ಯೆ ನಲಿಯುತ್ತಾ, ಓಡಿಬಂದು ಭದ್ರಕಾಳಿಯ ಸಮೀಪ ನೆರೆಯುತ್ತದೆ. ಬಳಿಕ ಅರಳಿ ಮರದ ಸುತ್ತಲೂ ದೈವಗಳ ನೃತ್ಯ ನಡೆಯುತ್ತದೆ.

- ವಿಶೇಷ ವರದಿ : ಈಶಾನ್ವಿ