ಮಡಿಕೇರಿ, ಜು. ೪: ವಿದ್ಯುತ್ ಸ್ಪರ್ಶಗೊಂಡು ಎಲೆಕ್ಟಿçಷಿಯನ್ ಸಾವನ್ನಪ್ಪಿರುವ ಘಟನೆ ಹುಲಿತಾಳದಲ್ಲಿ ನಡೆದಿದೆ.
ಹುಲಿತಾಳ ನಿವಾಸಿ ದಿ. ಪುರುಷ ಹಾಗೂ ಪೂವಮ್ಮ ದಂಪತಿ ಪುತ್ರ ಪ್ರದೀಪ್ (ನಿತಿನ್-೩೧) ಮೃತ ದುರ್ದೈವಿ. ಹುಲಿತಾಳದ ಮೇರಿಯಂಡ ಧರಣಿ ಎಂಬವರ ಮನೆ ಬಳಿ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಎಲ್.ಟಿ. ವಯರ್ನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಕೆಲಸ ಮಾಡಿದ ಪರಿಣಾಮ ಈ ದುರ್ಘಟನೆಗೆ ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.