ಮಡಿಕೇರಿ, ಜೂ. ೨೯: ಸಮಾಜದ ಅಭಿವೃದ್ಧಿಗೆ ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರು ಕೂಡ ಕೈಜೋಡಿಸಿ ಸಹಕಾರ ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾನಿಯಾಗಿದ್ದ ತಮ್ಮ ಅಜ್ಜಿ ಸಾಕಮ್ಮ ಅವರನ್ನು ಸ್ಮರಿಸಿಕೊಂಡ ಡಾ. ಮಂತರ್ಗೌಡ, ಸಾಕಮ್ಮ ಜನರಿಗಾಗಿ ದಾನ ಮಾಡಿದರೆ, ರಾಜಕಾರಣಿಗಳು ಜನಪ್ರಿಯತೆಗಾಗಿ ದಾನ ಮಾಡುತ್ತಾರೆ ಎಂದು ಹಾಸ್ಯವಾಗಿ ಹೇಳಿದರು. ಡಾ. ಮಂತರ್ ತಮ್ಮ ಅಜ್ಜಿ ಸಾಕಮ್ಮ ಜ್ಞಾಪಕಾರ್ಥ ಸಂಘದಲ್ಲಿ ಎರಡು ದತ್ತಿನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯಾವುದೇ ಪ್ರಶಸ್ತಿಗಳು ನಮ್ಮ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾಗುತ್ತವೆ. ಡಾ. ಮಂತರ್ಗೌಡ ಅವರು ಸ್ಥಾಪಿಸಲು ಉದ್ದೇಶಿಸಿರುವ ದತ್ತಿನಿಧಿಯನ್ನು ಕಾಫಿ ಉದ್ಯಮಕ್ಕೆ ಸಂಬAಧಿಸಿದ ಉತ್ತಮ ವರದಿಗೆ ನೀಡುವಂತಾಗಬೇಕೆAದು ಅಭಿಪ್ರಾಯಪಟ್ಟರು.
ಪತ್ರಕರ್ತರಿಗೆ ಸರ್ಕಾರದಿಂದ ನಿವೇಶನ ಕೊಡಿಸಲು ಪ್ರಯತ್ನಿಸಿ ಎಂದು ಸಂಘದ ಕಾನೂನು ಸಲಹೆಗಾರ ಮತ್ತು ವಕೀಲ ಪಿ. ಕಷ್ಣಮೂರ್ತಿ ಶಾಸಕರನ್ನು ವಿನಂತಿಸಿದರು. ಪತ್ರಕರ್ತರಿಗೆ ಸರ್ಕಾರದ ಯಾವುದೇ ಸೌಲಭ್ಯ ಕೊಡಿಸುವ ಸಂದರ್ಭ ಸಂಘದ ಅಧ್ಯಕ್ಷರನ್ನು ಪರಿಗಣನೆಗೆ ತೆಗೆದುಕೊಳ್ಳಿ ಎಂದು ಹೇಳಿದರು. ಸಂಘದ ಅಧ್ಯಕ್ಷರು ಸದಸ್ಯರ ಯಾವುದೇ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದನ ನೀಡುತ್ತಿರುವುದು ಮತ್ತು ಮಾಧ್ಯಮ ಸ್ಪಂದನದ ಮೂಲಕ ಪತ್ರಕರ್ತರು ಸಮಾಜಕ್ಕೆ ಸ್ಪಂದನ ನೀಡುತ್ತಿರುವುದು ಮಾದರಿ ಎಂದರು
ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ವಹಿಸಿದ್ದರು. ರಾಜ್ಯ ಸಮಿತಿ ನಿರ್ದೇಶಕ ಟಿ.ಎನ್. ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕಾರ್ಯಕ್ರಮ ಸಂಚಾಲಕ ಪ್ರೇಮ್ಕುಮಾರ್ ಹಾಜರಿದ್ದರು. ನಿರ್ದೇಶಕ ಹೆಚ್.ಕೆ. ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಚೆನ್ನನಾಯಕ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಹೆಚ್.ಕೆ. ಜಗದೀಶ್ ವಂದಿಸಿದರು.
ಪ್ರಶಸ್ತಿ ಪ್ರದಾನ
ಸಾಂಸ್ಕೃತಿಕ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಹೆಚ್.ಜೆ. ರಾಕೇಶ್, ಗ್ರಾಮೀಣ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ಅಣ್ಣೀರ ಹರೀಶ್ ಮಾದಪ್ಪ, ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಹೆಚ್.ಕೆ. ಜಗದೀಶ್, ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಎಂ.ಎನ್. ಚಂದ್ರಮೋಹನ್, ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಕ್ರೀಡಾ ವರದಿ ಪ್ರಶಸ್ತಿಯನ್ನು ವಾರ್ತಾಭಾರತಿ ಪತ್ರಿಕೆಯ ಇಸ್ಮಾಯಿಲ್ ಕಂಡಕೆರೆ, ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿ ಮನೋಜ್ ಆರ್.ಆರ್. ಸಂತೋಷ್ ರೈ, ಅರಣ್ಯ ವನ್ಯಜೀವಿ ವರದಿ, ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯ ಹೆಚ್.ಇ. ರವಿ, ಶೈಕ್ಷಣಿಕ ವರದಿ, ತೋಟಗಾರಿಕಾ ವರದಿ ಪ್ರಶಸ್ತಿ ವಿಜಯವಾಣಿ ಪತ್ರಿಕೆಯ ದಿನೇಶ್ ಮಾಲಂಬಿ, ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಟಿವಿ೯ ವಾಹಿನಿಯ ಐಮಂಡ ಗೋಪಾಲ್ ಸೋಮಯ್ಯ, ಸೇನೆಗೆ ಸಂಬAಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ರಿಪಬ್ಲಿಕ್ ಕನ್ನಡ ಚಾನಲ್ನ ಬಾಚರಣಿಯಂಡ ಅನುಕಾರ್ಯಪ್ಪ, ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿಗೆ ಚಿತ್ತಾರ ವಾಹಿನಿಯ ಶಿವರಾಜ್, ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿಯನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಪಿ.ವಿ. ಅಕ್ಷಯ್ ಪಡೆದುಕೊಂಡರು.
ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿ, ಆರೋಗ್ಯ ವರದಿ, ಮಾನವೀಯ ವರದಿ ಪ್ರಶಸ್ತಿಗಳನ್ನು ವಿಜಯ ಕರ್ನಾಟಕದ ಜಗದೀಶ್ ಜೋಡುಬೀಟಿ ಅವರುಗಳಿಗೆ ವಿತರಿಸಲಾಯಿತು.
ಸನ್ಮಾನ
ರಾಜ್ಯ ಪ್ರಶಸ್ತಿ ಪಡೆದ ಕಾಯಪಂಡ ಶಶಿ ಸೋಮಯ್ಯ, ಉದಿಯಂಡ ಜಯಂತಿ, ವಿಶ್ವ ಕುಮಾರ್, ಪಿ.ವಿ. ಅಕ್ಷಯ್, ಕೆ.ಕೆ. ಬೋಪಣ್ಣ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.