ಬೆಂಗಳೂರು, ಜೂ. ೨೯: ಕಾಫಿ ಬೆಳೆಯುವ ಪ್ರದೇಶಗಳಲ್ಲಿನ ಇಂಗಾಲ (ಕಾರ್ಬನ್)ದ ಪ್ರಮಾಣವನ್ನು ಗುರುತಿಸಲು ಮತ್ತು ಬೆಳೆಯ ಇಂಗಾಲದ ಪ್ರತ್ಯೇಕತೆಯ ಸಾಮರ್ಥ್ಯವನ್ನು ನಿರ್ಣಯಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಾಫಿ ಮಂಡಳಿಗೆ ಸಹಾಯ ಮಾಡುತ್ತಿದೆ.

ನೂತನ ಅಂರ‍್ರಾಷ್ಟಿçÃಯ ಮಾನದಂಡಗಳ ಪ್ರಕಾರ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಮರಗಳು ಇರಲೇಬೇಕು. ಇತ್ತೀಚೆಗೆ ಬ್ರೆಜಿಲ್, ವಿಯಟ್ನಾಂ ಹಾಗೂ ಕೆಲವು ದೇಶಗಳಲ್ಲಿ ಅರಣ್ಯ ನಾಶ ಮಾಡಿ ಬಯಲು ಪ್ರದೇಶಗಳಲ್ಲಿ ಕಾಫಿ ಬೆಳೆಯುವ ಪರಿಪಾಠ ಹೆಚ್ಚುತ್ತಿದೆ. ಇಂತಹ ಪ್ರದೇಶದಲ್ಲಿ ಬೆಳೆದ ಕಾಫಿಯ ಗುಣಮಟ್ಟ ಕಡಿಮೆ ಇರುತ್ತದೆ. ಆದರೆ ಭಾರತದ ಎಲ್ಲಿಯೂ ಕೂಡ ಬಯಲು ಪ್ರದೇಶದಲ್ಲಿ ಅಥವಾ ಅರಣ್ಯ ನಾಶ ಮಾಡಿ ಕಾಫಿ ಬೆಳೆಯಲಾಗುತ್ತಿಲ್ಲ. ಇದರಿಂದ ಭಾರತೀಯ ಕಾಫಿಗೆ ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ದರ ಇದ್ದು ಇತರ ದೇಶಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

"ಭಾರತದಲ್ಲಿ ನೆರಳಿನ ಕಾಫಿ ತೋಟಗಳಲ್ಲಿ ಇಂಗಾಲದ ಪ್ರತ್ಯೇಕತೆಯ ಪ್ರಮಾಣವನ್ನು ಪತ್ತೆಹಚ್ಚಲು ಇಸ್ರೋ ಅಧ್ಯಯನವನ್ನು ಪ್ರಾರಂಭಿಸಿದೆ" ಎಂದು ಕಾಫಿ ಮಂಡಳಿಯ ಸಂಶೋಧನಾ ನಿರ್ದೇಶಕ ಎಂ. ಸೆಂಥಿಲ್ ಕುಮಾರ್ ಹೇಳಿದ್ದಾರೆ. ಯುರೋಪಿಯನ್ ಒಕ್ಕೂಟದ ಅರಣ್ಯನಾಶ ನಿಯಂತ್ರಣದ ನಿಯಮದ ಹಿನ್ನೆಲೆಯಲ್ಲಿ ಕಾಫಿಯ ಇಂಗಾಲದ ಹೆಜ್ಜೆಗುರುತನ್ನು ಪತ್ತೆಹಚ್ಚುವುದು ಇದರ ಉದ್ದೇಶವಾಗಿದೆ.

ಡಿಸೆಂಬರ್ ೩೧, ೨೦೨೦ ರ ನಂತರದಿAದ ಯುರೋಪಿಯನ್ ಒಕ್ಕೂಟಕ್ಕೆ ರಫ್ತು ಮಾಡಲಾದ ಉತ್ಪನ್ನಗಳನ್ನು ಅರಣ್ಯನಾಶ ಮಾಡದ ಭೂಮಿಯಲ್ಲಿ ಬೆಳೆಸಲಾಗಿದೆಯೇ ಎಂದು ಅಲ್ಲಿನ ಸಂಸ್ಥೆಗಳು ಪರಿಶೀಲಿಸುತ್ತಿವೆ. ಅರಣ್ಯ ನಾಶ ಮಾಡಿ ಬೆಳೆಸಲಾದ ಕಾಫಿಯ ಪ್ರದೇಶದ ಮಣ್ಣಿನಲ್ಲಿ ಇಂಗಾಲ(ಕಾರ್ಬನ್) ಪ್ರಮಾಣ ಕಡಿಮೆ ಇರುತ್ತದೆ. ಹೆಚ್ಚಿನ ಕಾರ್ಬನ್ ಇದ್ದರೆ, ಅಲ್ಲಿ ಮರಗಳೂ ಜಾಸ್ತಿ ಇವೆ ಎಂದರ್ಥ. ಈ ಕಾರ್ಬನ್ ಪ್ರಮಾಣವನ್ನು ಇದೀಗ ಇಸ್ರೋದ ನಿಸಾರ್ ಉಪಗ್ರಹದ ಮೂಲಕ ಪತ್ತೆಹಚ್ಚಲಾಗುತ್ತಿದ್ದು, ಕಾಫಿ ಮಂಡಳಿಯೊAದಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಅರಣ್ಯ ನಾಶವಾಗಿದೆಯೋ ಅಥವಾ ಆಗಿಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಹಾಗೂ ಅರಣ್ಯ ನಾಶವಾಗಿಲ್ಲ ಎಂಬ ದೃಢೀಕರಣ ಪತ್ರದ ಮುಖೇನ ಕಾಫಿಯ ರಫ್ತನ್ನು ಅಂತರರಾಷ್ಟಿçÃಯ ಮಾರುಕಟ್ಟೆಗೆ ಮಾಡಬಹುದಾಗಿದೆ. ಭಾರತದ ಕಾಫಿ, ಕೋಕೋ, ಸೋಯಾ, ಮರದ ಉತ್ಪನ್ನಗಳು, ರಬ್ಬರ್ ಮತ್ತು ಅದರ ಉತ್ಪನ್ನಗಳು ಮತ್ತು ಚರ್ಮದ ಸರಕುಗಳ ರಫ್ತಿನ ಮೇಲೆಯೂ ಈ ಪರಿಸರ ಪ್ರೇಮಿ ನಿಯಮ ಪರಿಣಾಮ ಬೀರುತ್ತದೆ. ಈ ನಿಯಮವನ್ನು ಪಾಲಿಸದೆ ಇದ್ದರೆ ಯುರೋಪಿಯನ್ ಒಕ್ಕೂಟದಲ್ಲಿ, ನಿಯಮ ಉಲ್ಲಂಘಿಸಿದ ಸಂಸ್ಥೆಯ ವಾರ್ಷಿಕ ವಹಿವಾಟಿನ ೪% ವರೆಗೆ ದಂಡ ವಿಧಿಸಲಾಗುತ್ತದೆ ಮತ್ತು ವಹಿವಾಟಿನಿಂದ ಪಡೆದ ಉತ್ಪನ್ನಗಳು ಮತ್ತು ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ವಿವಿಧ ವಿಧಗಳ ಕಾಫಿ ಬಿಡುಗಡೆ

ಭಾರತೀಯ ಕಾಫಿ ಮಂಡಳಿಯು ಪ್ರಸ್ತುತ ೧೩ ಅರೇಬಿಕಾ ಮತ್ತು ೩ ರೋಬಸ್ಟಾ ವಿಧಗಳÀ ಕಾಫಿಯನ್ನು ಬಿಡುಗಡೆ ಮಾಡಿದೆ ಮತ್ತು ಎರಡು ವಿಧದ ಕಾಫಿಗೆ ಭೌಗೋಳಿಕ ಗುರುತಿಗಾಗಿ ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) (ಉeogಡಿಚಿಠಿhiಛಿಚಿಟ iಜeಟಿಣiಜಿiಛಿಚಿಣioಟಿ) ಅರ್ಜಿ ಸಲ್ಲಿಸಲಿದೆ. ಪ್ರಸ್ತುತ, ಕೂರ್ಗ್ ಅರೇಬಿಕಾ, ಬಾಬಾಬುಡನ್‌ಗಿರಿ ಅರೇಬಿಕಾ, ಚಿಕ್ಕಮಗಳೂರು ಅರೇಬಿಕಾ, ಅರಕು ವ್ಯಾಲಿ ಮತ್ತು ವಯನಾಡ್ ರೋಬಸ್ಟಾ ಕಾಫಿಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಲಾಗಿದೆ. ದೇಶದ ೧೨ ರಾಜ್ಯಗಳಲ್ಲಿ ೪೯೦,೦೦೦ ಹೆಕ್ಟೇರ್ ಭೂಮಿಯಲ್ಲಿ ಕಾಫಿ ತೋಟವಿದ್ದು, ಅದರಲ್ಲಿ ೩೦% ಅರೇಬಿಕಾ ಮತ್ತು ೭೦% ರೋಬಸ್ಟಾ ವಿಧದ ಕಾಫಿಯನ್ನು ಬೆಳೆಯಲಾಗುತ್ತಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಫಿ ಮಂಡಳಿಯ ಮಾಜಿ ಸದಸ್ಯ ನಾಪೋಕ್ಲಿನ ಡಾ.ಸಣ್ಣುವಂಡ ಕಾವೇರಪ್ಪ ಅವರು ಭಾರತದ ಕಾಫಿಗೆ ಯೂರೋಪಿಯನ್ ರಾಷ್ಟçಗಳೇ ದೊಡ್ಡ ಗ್ರಾಹಕರಾಗಿದ್ದು ದೇಶದ ಶೇಕಡಾ ೭೦ರಷ್ಟು ಕಾಫಿಯನ್ನು ಅಲ್ಲಿಗೆ ರಫ್ತು ಮಾಡಲಾಗುತ್ತಿದೆ. ಆದರೆ ಈಗ ಯೂರೋಪಿಯನ್ ಒಕ್ಕೂಟಗಳು ಕಟ್ಟು ನಿಟ್ಟಿನ ಗುಣ ನಿಯಂತ್ರಣದ ಜತೆಗೇ ಅರಣ್ಯ ನಾಶ ಮಾಡದೇ ಬೆಳೆದ ಕಾಫಿಯನ್ನು ಮಾತ್ರ ಖರೀದಿಸುತ್ತಿದ್ದು, ಬಯಲು ಪ್ರದೇಶದಲ್ಲಿ ಬೆಳೆದ ಕಾಫಿಗೆ ದಂಡವನ್ನೂ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ‘ಜಿಐ’ ಮೂಲಕ ಅರಣ್ಯ ನಾಶ ಮಾಡದೇ ಬೆಳೆದ ಕಾಫಿಯನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ. - ಕೋವರ್‌ಕೊಲ್ಲಿ ಇಂದ್ರೇಶ್