ಮಡಿಕೇರಿ, ಜೂ. ೨೯: ಜಾರ್ಖಂಡ್ನ ರಾಂಚಿಯಲ್ಲಿ ಜುಲೈ ೩ ರಿಂದ ೧೪ರ ತನಕ ಹಾಕಿ ಇಂಡಿಯಾ ವತಿಯಿಂದ ಜರುಗುತ್ತಿರುವ ೧೫ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿ ೨೦೨೫ರಲ್ಲಿ ಹಾಕಿ ಕರ್ನಾಟಕ ತಂಡವನ್ನು ಕೊಡಗಿನ ೧೧ ಮಂದಿ ಪ್ರತಿನಿಧಿಸುತ್ತಿದ್ದಾರೆ.
ರಾಜ್ಯ ತಂಡವನ್ನು ಹಾಕಿ ಕರ್ನಾಟಕ ಇಂದು ಪ್ರಕಟಿಸಿದ್ದು, ಒಟ್ಟು ೨೦ ಮಂದಿಯ ತಂಡದಲ್ಲಿ ೧೦ ಆಟಗಾರ್ತಿಯರು ಹಾಗೂ ತಂಡದ ವ್ಯವಸ್ಥಾಪಕರು ಕೊಡಗಿನ ವರಾಗಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ. ತಂಡದ ನಾಯಕಿಯಾಗಿ ಅಚ್ಚಪಂಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಆಟಗಾರ್ತಿ ಯರಾಗಿ ಚೆಯ್ಯಂಡ ತ್ವಿಷಾ ದೇಚಮ್ಮ, ಬಾರಿಯಂಡ ಬೊಳ್ಳಮ್ಮ, ಚೇರಂಡ ನೀಲಮ್ಮ, ಕೀತಿಯಂಡ ಪೂರ್ವಿ ಪೂವಮ್ಮ, ಮಚ್ಚಾಮಾಡ ವಿದ್ಯಾ ಪೊನ್ನಮ್ಮ, ಪೊರ್ಕೋಂಡ ಗೀಷ್ಮ ಪೊನ್ನಪ್ಪ, ಚೌರೀರ ಧನ್ಯ ಕಾವೇರಮ್ಮ, ಕೃತಿಕಾ ಎಂ.ಎಲ್, ಜೀವಿತಾ ಹೆಚ್.ಎನ್. ಸ್ಥಾನ ಪಡೆದಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಕಂಬೀರAಡ ರಾಖಿ ಪೂವಣ್ಣ ಕಾರ್ಯನಿರ್ವಹಿಸಲಿದ್ದಾರೆ. ತಂಡ ಇಂದು ರಾಂಚಿಯತ್ತ ಪ್ರಯಾಣ ಬೆಳೆಸಿದೆ.