ಸುಂಟಿಕೊಪ್ಪ, ಜೂ. ೨೮: ಮಲೇರಿಯಾ ಜ್ವರ ಶೀಘ್ರವಾಗಿ ಪತ್ತೆಹಚ್ಚಿ ಸಂಪೂರ್ಣವಾದ ಚಿಕಿತ್ಸೆಯನ್ನು ನೀಡುವುದರ ಮೂಲಕ ಗುಣಪಡಿಸಬಹುದು ಎಂದು ಜಿಲ್ಲಾ ಎಂಟಮಾಲಜಿಸ್ಟ್ (ಕೀಟಶಾಸ್ತçಜ್ಞ) ಮಂಜುನಾಥ್ ತಿಳಿಸಿದರು.
ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೇರಿಯಾ ಜ್ವರದ ಲಕ್ಷಣಗಳ ಬಗ್ಗೆ ಮತ್ತು ಚಿಕಿತ್ಸೆಯ ಬಗ್ಗೆ, ಸೊಳ್ಳೆಗಳ ಜೀವನ ಚಕ್ರÀ ಹಾಗೂ ಡೆಂಗ್ಯೂ ಜ್ವರ, ಚಿಕೂನ್ ಗುನ್ಯಾ ಜ್ವರ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ನಿಶಾ, ಡಾ. ದರ್ಶನ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ವಿಶ್ವಜ್ಞಾ, ಶಿವಪ್ಪ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಮಾರ್ಗರೇಟ್ ಆಳ್ವ, ಗ್ರೀಷ್ಮ ಸುಶೀಲ, ಸಮುದಾಯ ಆರೋಗ್ಯ ಅಧಿಕಾರಿ ಗಳಾದ ಸಿಂಧು, ಮನೋಜ್, ಶಫಿನಾ, ಶ್ವೇತಾ, ಮೇನಕಾ, ಪ್ರೀತಿ, ಚೈತ್ರ, ಆಶಾ ಕಾರ್ಯಕರ್ತೆಯÀರು ಹಾಜರಿದ್ದರು.