ಸೋಮವಾರಪೇಟೆ, ಜೂ. ೨೮: ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಆಷಾಢ ಶುಕ್ರವಾರದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕಾರ್ಯ ನಡೆಯಿತು.

ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮ ಅರ್ಚನೆ, ಲಲಿತ ಸಹಸ್ರನಾಮ ನಂತರ ಮಂಗಳಾರತಿಯನ್ನು ದೇವಾಲಯದ ಅರ್ಚಕರಾದ ಶೇಖಯ್ಯ ಹಿರೇಮಠ ರವರು ನೆರವೇರಿಸಿದರು.

ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಅಕ್ಕನ ಬಳಗದ ಅಧ್ಯಕ್ಷೆ ಗೀತಾ ರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ್, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸದಸ್ಯರು ಇದ್ದರು.