ಕೊಡ್ಲಿಪೇಟೆ, ಜೂ. ೨೮: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾವನ ಗಗನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈವರೆಗೆ ಅಧ್ಯಕ್ಷರಾಗಿದ್ದ ರೇಣುಕಾ ಮೇದಪ್ಪ ಅವರು ಹಿಂದಿನ ಒಡಂಬಡಿಕೆಯAತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಂಚಾಯಿತಿಯ ಒಟ್ಟು ೯ ಸದಸ್ಯರುಗಳಲ್ಲಿ ೭ ಮಂದಿ ಹಾಜರಿದ್ದರು. ಪಾವನಾ ಅವರನ್ನು ಹೊರತುಪಡಿಸಿ ಇನ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಯಾಗಿದ್ದ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರುಗಳಾದ ಮಹಮ್ಮದ್ ಹನೀಫ್, ದೊಡ್ಡಯ್ಯ, ಲೀನಾ ಪರಮೇಶ್, ರೇಣುಕಾ ಮೇದಪ್ಪ, ವಿನೋದಾ ಆನಂದ್ ಅವರುಗಳು ಉಪಸ್ಥಿತರಿದ್ದರು. ಚುನಾವಣಾ ಶಿರಸ್ತೇದಾರ್ ಲೋಹಿತ್, ವಿಖ್ಯಾತ್, ಅಭಿವೃದ್ಧಿ ಅಧಿಕಾರಿ ಗಿರೀಶ್ ಇದ್ದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷೆ ಪಾವನ ಗಗನ್, ಎಲ್ಲಾ ಸದಸ್ಯರುಗಳು ಹಾಗೂ ಶಾಸಕರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಿಸಾರ್, ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೇಶಕ ತೇಜಕುಮಾರ್, ವಲಯ ಕಾಂಗ್ರೆಸ್ ಅಧ್ಯಕ್ಷ ಸುಲೈಮಾನ್, ತಾಲೂಕು ಕೆ.ಡಿ.ಪಿ. ಸದಸ್ಯ ವೇದಕುಮಾರ್, ಪಕ್ಷದ ಮುಖಂಡರಾದ ಸಾಬ್‌ಜಾನ್, ಮೇದಪ್ಪ, ವೆಂಕಟೇಶ್, ಪುಟ್ಟರಾಜು, ರಹಮಾನ್, ಹನೀಫ್, ಹಮೀದ್, ಮಹಮ್ಮದ್, ಗಣೇಶ್ ಸೇರಿದಂತೆ ಇತರರು ಇದ್ದರು.