ನಾಪೋಕ್ಲು, ಜೂ. ೨೨: ಇಲ್ಲಿನ ಶ್ರೀ ಭಗವತಿ ದೇವಾಲಯದ ನವೀಕರಣಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂದಾಗಿದ್ದು ದೇವಾಲಯದ ನವೀಕರಣಕ್ಕೆ ಊರಿನವರು, ಬಂಧುಮಿತ್ರರು, ಭಕ್ತರು ಸಹಕರಿಸಬೇಕೆಂದು ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ತಾಂಬೂಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ಪೌಳಿಯ ಸುತ್ತ ಶಿಥಿಲಗೊಂಡಿರುವುದು ತಿಳಿದುಬಂದಿತ್ತು. ಅಲ್ಲದೆ ಮಹಾ ಗಣಪತಿ ಗುಡಿಯನ್ನು ನವೀಕರಿಸಬೇಕೆಂದು ಸೂಚಿಸಲಾಗಿತ್ತು. ಈಗಿರುವ ಪೌಳಿಯನ್ನು ತೆಗೆದು ಶಿಲಾಕಲ್ಲಿನಲ್ಲಿ ನಿರ್ಮಿಸಿ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸಿ ಹೊಸದಾಗಿ ನಿರ್ಮಿಸುವಂತೆ ತೀರ್ಮಾನಿಸಲಾಗಿದ್ದು ಇದಕ್ಕೆ ಅಂದಾಜು ೧.೬೦ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.
ನಾಪೋಕ್ಲು ನಾಡು ಶ್ರೀ ಭಗವತಿ ದೇವಾಲಯವು ಸುಮಾರು ಸಾವಿರ ವರ್ಷಗಳಿಗಿಂತಲೂ ಹಿಂದಿನ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ರಾಜವಂಶಸ್ಥರು ಹಾಗೂ ಊರಿನ ಪೂರ್ವಿಕರು ಅಷ್ಟ ಬಂದ ಬ್ರಹ್ಮ ಕಲಶÀ ಮಾಡಿ ದೇವಾಲಯವನ್ನು ಸ್ಥಾಪನೆ ಮಾಡಿದ್ದರು. ಭಕ್ತರ ನೆರವಿನೊಂದಿಗೆ ದೇವಾಲಯ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇವಾಲಯದ ಅಂಗಳಕ್ಕೆ ಚಪ್ಪಡಿ ಹಾಸಿದ್ದು ಹೊರಾಂಗಣಕ್ಕೆ ಕಾಂಕ್ರೀಟ್ ಅಂಗಳ ಮತ್ತು ತಡೆಗೋಡೆ ನಿರ್ಮಾಣ ದೇವಾಲಯದ ಬಲಭಾಗದಲ್ಲಿ ಸಮುದಾಯ ಭವನ, ಎಡ ಭಾಗದಲ್ಲಿ ಊಟದ ಭವನವನ್ನು ಕಾಂಕ್ರೀಟ್ ಮೇಲ್ಛಾವಣಿಯೊಂದಿಗೆ ಕಟ್ಟಲಾಗಿದೆ. ಸುಸಜ್ಜಿತ ಅಡುಗೆ ಕೋಣೆ, ಅರ್ಚಕರ ವಸತಿ ನಿಲಯ ನಿರ್ಮಿಸಲಾಗಿದೆ.
ಸರ್ಕಾರದ ಅನುದಾನದಿಂದ ದೇವಾಲಯದ ಕೆರೆ ಹಾಗೂ ರಸ್ತೆಗಳಿಗೆ ಕಾಂಕ್ರೀಟ್, ಇಂಟರ್ಲಾಕ್‌ನೊAದಿಗೆ ಹೊರಾಂಗಣವನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ೨೦೧೫ರಲ್ಲಿ ಶಿಲೆಯನ್ನು ಬಳಸಿ ಗರ್ಭಗುಡಿ, ತೀರ್ಥ ಮಂಟಪಕ್ಕೆ ತಾಮ್ರದ ಹೊದಿಕೆ ಹಾಸಿ, ಕಾಳೆಘಟ್ಟನ ತಂತ್ರಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು.
ಇದೀಗ ಪೌಳಿಯನ್ನು ಶಿಲಾಕಲ್ಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸಲು ನಿರ್ಧರಿಸಲಾಗಿದೆ. ದೇವಾಲಯದ ನವೀಕರಣಕ್ಕೆ ಭಕ್ತರು ಕೈಜೋಡಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಸೇವಾಕಾಂಕ್ಷಿಗಳು ಸಂಪರ್ಕಿಸಬೇಕಾದ
ಮೊಬೈಲ್ ಸಂಖ್ಯೆ : ೯೮೮೦೧೩೬೮೩೫, ೯೭೩೧೫೦೬೩೯೦
ಡಿ.ಸಿ.ಸಿ. ಬ್ಯಾಂಕ್ ನಾಪೋಕ್ಲು ಬ್ಯಾಂಕ್ ಖಾತೆ ನಂಬರ್ ೧೨೧೦೦೪೩೯೧೯೨೫
ಐ.ಎಫ್.ಎಸ್.ಸಿ. ಕೋಡ್ - ಕೆ.ಎಸ್.ಸಿ. ಬಿ೦೦೧೧೦೦೧