ಐಗೂರು, ಜೂ. ೨೪: ಮಡಿಕೇರಿಯ ಆಶೋದಯ ಸಮಿತಿ ವತಿಯಿಂದ ಸೋಮವಾರಪೇಟೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಮಧುಮೇಹ ರಕ್ತದೊತ್ತಡ ಮತ್ತು ಎಚ್‌ಐವಿ ಬಗ್ಗೆ ತಪಾಸಣೆಯನ್ನು ಉಚಿತವಾಗಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಯ ನಿಲ್ದಾಣಾಧಿಕಾರಿ ಟಿ. ಎಂ. ಪರಮೇಶ್, ಆರೋಗ್ಯ ಅಧಿಕಾರಿಗಳಾದ ಓ ಆರ್ ಡಬ್ಲ್ಯೂ ಕಿರಣ್, ನಾಗರತ್ನ, ಚಂದ್ರಕಲಾ, ಮತ್ತು ಸುಮಾ ಭಾಗವಹಿಸಿದ್ದರು.