ಮಡಿಕೇರಿ, ಜೂ. ೨೦: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಡಿಕೇರಿ, ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ‘ಅಮ್ಮನ ಹೆಸರಿನಲ್ಲಿ ಒಂದು ವೃಕ್ಷ’ ಎಂಬ ಅಭಿಯಾನದ ಮೂಲಕ ಕಾಲೇಜಿನ ಆಶ್ರಯದಲ್ಲಿ ಗಿಡ ನೆಡಲಾಯಿತು. ಈ ಸಂದರ್ಭ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಇದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಸರಸ್ವತಿ ಡಿ.ಕೆ. ಪ್ರತಿಯೊಬ್ಬ ಪ್ರಜೆ ಪರಿಸರದ ಕುರಿತು ಅರಿವನ್ನು ಬೆಳೆಸಿಕೊಳ್ಳುವುದರ ಮೂಲಕ ಗಿಡವನ್ನು ನೆಡುವಂತಹ ಅಭಿರುಚಿಯನ್ನು ಹೊಂದಿರಬೇಕೆAದು ಅಭಿಪ್ರಾಯ ವ್ಯಕ್ತಪಡಿಸಿದರು.