ಗೋಣಿಕೊಪ್ಪಲು, ಜೂ. ೨೦: ರಕ್ತದಾನ ಶಿಬಿರಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘ-ಸAಸ್ಥೆಗಳು, ರಾಜಕೀಯ ಪಕ್ಷಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಶಿಬಿರದ ಪ್ರಯೋಜನ ಗ್ರಾಮಮಟ್ಟದಲ್ಲಿ ಲಭ್ಯವಾಗಲಿದೆ. ರಕ್ತದಾನದಿಂದ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಪಾಲಿಬೆಟ್ಟ ಜಮಾಅತ್‌ನ ಸಭಾಂಗಣದಲ್ಲಿ ಎಸ್.ಎಸ್.ಎಫ್. ಕೊಡಗು ಜಿಲ್ಲೆ, ಪಾಲಿಬೆಟ್ಟ ಯೂನಿಟ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫೦ನೇ ಬ್ಲಡ್ ಸೈಬೋ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಕೇತ್ ಪೂವಯ್ಯ, ರಕ್ತದಾನ ಮಾಡುವ ಬಗ್ಗೆ ಪ್ರತಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಆರೋಗ್ಯವಂತರು ರಕ್ತದಾನವನ್ನು ಮಾಡಬಹುದಾಗಿದೆ. ರಕ್ತದಾನದಿಂದ ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಸ್.ಎಸ್.ಎಫ್. ಸಂಘಟನೆ ನಿರಂತರವಾಗಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಮಾತನಾಡಿ, ರಕ್ತದಾನ ಶಿಬಿರಗಳು ಇತ್ತೀಚೆಗೆ ಉತ್ತಮವಾಗಿ ಆಯೋಜನೆಗೊಳ್ಳುತ್ತಿದೆ. ಸಂಘ-ಸAಸ್ಥೆಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸಿ ಉತ್ತೇಜನ ನೀಡುತ್ತಿದೆ. ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಜಮಾಅತ್‌ನ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ರಜಾಕ್ ಸಅದಿ, ಪಾಲಿಬೆಟ್ಟ ಖತೀಬರಾದ ಜುಬೈರ್ ಸಖಾಫಿ ಮಲಪ್ಪುರಂ, ಪಾಲಿಬೆಟ್ಟ ಜಮಾಅತ್ ಕಾರ್ಯದರ್ಶಿ ಮುನ್ನಾ ಸಮೀರ್, ಕೋಶಾಧಿಕಾರಿ ಟಿ.ಕೆ. ಮುಸ್ತಫಾ, ಎಸ್.ಎಸ್.ಎಫ್. ರಾಜ್ಯ ಸದಸ್ಯ ಸ್ವಬಾಹ್ ಸಖಾಫಿ, ಸಾಮಾಜಿಕÀ ಕಾರ್ಯಕರ್ತ ಶಮೀಂ, ಪಾಲಿಬೆಟ್ಟ ಗ್ರಾ.ಪಂ. ಸದಸ್ಯ ಎಂ.ಬಿ. ನಾಸಿರ್, ಎಸ್.ಎಸ್.ಎಫ್. ಯೂನಿಟ್ ಅಧ್ಯಕ್ಷ ಮುಬಾರಕ್, ಕಾರ್ಯದರ್ಶಿ ಅನ್ಸಿರ್, ಕೊಡಗು ವೈದ್ಯಕೀಯ ಕಾಲೇಜು ತಂಡ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಸ್ವಾಗತಿಸಿ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಇಬ್ರಾಹಿಂ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಿದರು.