ಚೆಯ್ಯಂಡಾಣೆ, ಜೂ. ೨೦: ಎಸ್.ವೈ.ಎಸ್. ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ತಾ. ೨೧ ರಂದು (ಇಂದು) ಕೊಂಡAಗೇರಿಯಲ್ಲಿ ಇಗ್ನೆöÊಟ್ ಮೀಟ್ ಆಯೋಜಿಸಲಾಗಿದೆ ಎಂದು ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾ. ೨೧ ರಂದು ಕೊಂಡAಗೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ಇಗ್ನೆöÊಟ್ ಲೀಡರ್ಸ್ ಮೀಟ್ ನಡೆಯಲಿದ್ದು, ಬೆಳಿಗ್ಗೆ ೯ ಗಂಟೆಗೆ ಮಖಾಂ ಝಿಯಾರತ್‌ಗೆ ಕೊಂಡAಗೇರಿ ಜುಮಾ ಮಸೀದಿಯ ಖತೀಬ್ ಹಾಫಿಝ್ ಆಸೀಫ್ ಹಿಮಮಿ ನೇತೃತ್ವ ನೀಡಲಿದ್ದಾರೆ. ೧೦ ಗಂಟೆಗೆ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷ ಸಯ್ಯದ್ ಇಲ್ಯಾಸ್ ಅಲ್ ಐದರೂಸಿ ತಂಙಳ್ ಪ್ರಾರ್ಥನೆ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಎಸ್.ವೈ.ಎಸ್. ಕರ್ನಾಟಕ ರಾಜ್ಯಾಧ್ಯಕ್ಷ ಬಷೀರ್ ಸಅದಿ ಬೆಂಗಳೂರು ಉದ್ಘಾಟಿಸಲಿದ್ದಾರೆ. ನಂತರ ನಡೆಯುವ ಉಪನ್ಯಾಸವನ್ನು ಜಿ.ಎಂ. ಮೊಹಮ್ಮದ್ ಕಾಮಿಲ್ ಸಖಾಫಿ ಹಾಗೂ ರಶೀದ್ ಮಾಸ್ಟರ್ ನರಿಕೊಡ್ ನೇತೃತ್ವ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಎಸ್.ವೈ.ಎಸ್. ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮುನೀರ್ ಮಹ್ಳರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.