ವೀರಾಜಪೇಟೆ, ಜೂ ೨೦: ಕೆಲವು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಪರಿಚಿತ ವ್ಯಕ್ತಿ ದಾಖಲಾಗಿದ್ದು, ವ್ಯಕ್ತಿಯ ಕುಟುಂಬದ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆ ಪತ್ತೆಗಾಗಿ ಪೊಲೀಸ್ ಇಲಾಖೆ ಮನವಿ ಮಾಡಿದೆ.
ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದಾರೆ. ವ್ಯಕ್ತಿಯು ತನ್ನ ಹೆಸರು ಮನು, ತಂದೆಯ ಹೆಸರು ರವಿ ಎಂದು ಮಾಹಿತಿ ನೀಡಿದ್ದು, ಅಂದಾಜು ೪೦ ವರ್ಷದವರಾಗಿದ್ದಾರೆ.
ಈತನ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ವ್ಯಕ್ತಿಯ ಕುರಿತು ತಿಳಿದುಬಂದಲ್ಲಿ ವೀರಾಜಪೇಟೆ ಪುರಸಭೆಯ ಆರೋಗ್ಯ ಸಹಾಯಕರು, ವೀರಾಜಪೇಟೆ ನಗರ ಪೋಲಿಸ್ ಠಾಣೆ ಅಥವಾ ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.