ಕರಿಕೆ, ಜೂ. ೨೦: ಇಲ್ಲಿಗೆ ಸಮೀಪದ ಭಾಗಮಂಡಲ ಅರಣ್ಯ ವಲಯದ ಬಲ್ಲಮಾವಟಿ, ಪೇರೂರು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕಾಫಿ ಗಿಡಗಳನ್ನು ತುಳಿದು ಹಾನಿಗೊಳಿಸಿದ ಘಟನೆ ನಡೆದಿದೆ. ಮಚ್ಚುರ ಯಧು ಕುಮಾರ್ ಎಂಬವರ ಕಾಫಿ ತೋಟಕ್ಕೆ ಪದಿನಾಲ್ಕು ನಾಡು ಮೀಸಲು ಅರಣ್ಯದಿಂದ ಬಂದ ಕಾಡಾನೆ ೨೫ಕ್ಕೂ ಅಧಿಕ ಫಸಲು ನೀಡುವ ಕಾಫಿ ಗಿಡಗಳನ್ನ ತುಳಿದು ನಷ್ಟಪಡಿಸಿದೆ. ಇದರಿಂದಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಉಪಟಳ ನೀಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.