ಮಡಿಕೇರಿ, ಜೂ. ೧೯: ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ ವತಿಯಿಂದ ತಾ. ೧೫ ರಿಂದ ೩೦ ರವರೆಗೆ ಪರಿಶಿಷ್ಟ ಪಂಗಡದವರು ಹೆಚ್ಚಿಗೆ ವಾಸವಿರುವ ಮತ್ತು ಪಿವಿಟಿಜಿ ಸಮುದಾಯದವರು ವಾಸವಿರುವ ಜಿಲ್ಲೆಗಳಲ್ಲಿ ‘ಧರ್ತಿ ಆಬ ಜನಭಾಗಿದರಿ ಅಭಿಯಾನ’ವನ್ನು ಹಮ್ಮಿಕೊಂಡಿದ್ದಾರೆ.
ಈ ಅಭಿಯಾನದಲ್ಲಿ ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ (ಡಿಎ-ಜೆಜಿಯುಎ) ಮತ್ತು ಪ್ರಧಾನ ಮಂತ್ರಿ ಜನಜಾತಿ ಮಹಾ ಅಭಿಯಾನ (ಪಿಎಂ-ಜನ್ಮನ್) ಯೋಜನೆಯಡಿ ಜಾಗೃತಿ ಮತ್ತು ಪ್ರಯೋಜನ ಶುದ್ಧತ್ವ ಶಿಬಿರಗಳನ್ನು (ಂತಿಚಿಡಿeಟಿess ಚಿಟಿಜ ಃeಟಿeಜಿiಣ Sಚಿಣuಡಿಚಿಣioಟಿ ಅಚಿmಠಿs) ಜೇನುಕುರುಬ ಹಾಡಿಗಳಲ್ಲಿ ಹಮ್ಮಿಕೊಳ್ಳಬೇಕಿದೆ. ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕಲ್ ಸೆಲ್ ಅನೀಮಿಯಾ ತಪಾಸಣೆ, ಲಸಿಕಾಕರಣ, ಪಿ.ಎಂ ಕಿಸಾನ್ ಕ್ರೆಡಿಟ್ ಕಾರ್ಡ್, ಪಿ.ಎಂ. ಕಿಸಾನ್, ಜನಧನ ಬ್ಯಾಂಕ್ ಖಾತೆ, ಪಿ.ಎಂ ವಿಶ್ವಕರ್ಮ, ಮುದ್ರಾ ಸಾಲ, ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್, ಮಾತೃ ವಂದನ ಯೋಜನೆ ಮುಂತಾದ ಸೇವೆಗಳನ್ನು ಸಂಬAಧಿಸಿದ ಇಲಾಖಾ ವತಿಯಿಂದ ಜೇನುಕುರುಬ ಹಾಡಿಗಳಿಗೆ ತಾ. ೧೫ ರಿಂದ ೩೦ ರವರೆಗೆ ಭೇಟಿ ನೀಡಿ ಒದಗಿಸಲು ಕ್ರಮವಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು (ಗ್ರೇಡ್-೨), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ (ಮೊ. ೭೨೫೯೫೫೨೬೫೫) ಮತ್ತು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವೀರಾಜಪೇಟೆ (ಮೊ. ೯೬೩೨೪೬೫೧೬೧) ರವರನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.